ದೆಹಲಿ ಹತ್ಯೆ ಪ್ರಕರಣ: ನಾರ್ಕೋ ಪರೀಕ್ಷೆಯಿಂದ ನನಗೆ ನ್ಯಾಯ ಸಿಗಲಿದೆ ಎಂದ ಶ್ರದ್ಧಾ ತಂದೆ
ದೆಹಲಿಯಲ್ಲಿ ಶ್ರದ್ಧಾ ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಶ್ರದ್ಧಾಳನ್ನ ತುಂಡಾಗಿ ಕತ್ತರಿಸಿ ಅರಣ್ಯದಲ್ಲಿ ಆ ತುಂಡುಗಳನ್ನು ಎಸೆದಿದ್ದ ಆರೋಪಿ ಅಫ್ತಾಬ್ ನನ್ನು ಹೆಚ್ಚಿನ ಮಾಹಿತಿಗಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ಅಫ್ತಾಬ್ ಕೆಲವೊಮ್ಮೆ ಸುಳ್ಳು ಹೇಳುತ್ತಾನೆ ಮತ್ತು ಕೆಲವೊಮ್ಮೆ ಸತ್ಯವನ್ನು ಮಾತನಾಡುತ್ತಾನೆ ಎಂದು ದೆಹಲಿ ಪೊಲೀಸರು ಅರಿತುಕೊಂಡಿದ್ದಾರೆ. ಹೀಗಾಗಿ ಅವರನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಇದರಿಂದ ನನಗೆ ನ್ಯಾಯ ಸಿಗಲಿದೆ ಎಂದು ಶ್ರದ್ಧಾ ತಂದೆ ಎಎನ್‌ಐಗೆ ಹೇಳಿಕೊಂಡಿದ್ದಾರೆ.
ಒಂದು ವೇಳೆ ಆತ ನಾರ್ಕೋ ಪರೀಕ್ಷೆಯಿಂದ ತಪ್ಪು ಮಾಡಿರುವುದು ಸಾಬೀತಾದರೆ ಆತನನ್ನು ಗಲ್ಲಿಗೇರಿಸಬೇಕು. ಆತ ಸುಳ್ಳು ಹೇಳುತ್ತಿದ್ದಾನೆ ಎಂದು ನನಗೆ ಯಾವಾಗಲೂ ಅನಿಸಿತ್ತು. ಇದನ್ನು ನಾನು ದೆಹಲಿ ಪೊಲೀಸರಿಗೆ ಹೇಳಿದ್ದೆ ಎಂದು ಶ್ರದ್ಧಾ ತಂದೆ ಹೇಳಿಕೊಂಡಿದ್ದಾರೆ.
ಶ್ರದ್ಧಾ ವಾಲ್ಕರ್‌ಗಳನ್ನು ತಾನೇ ಕೊಂದಿದ್ದಾಗಿ ಅಫ್ತಾಬ್ ಒಪ್ಪಿಕೊಂಡಿದ್ದರೂ, ಆತ ತನಿಖೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ್ದು ಮತ್ತು ಪೊಲೀಸರಿಗೆ ಸಾಕಷ್ಟು ಸುಳ್ಳುಗಳನ್ನು ಹೇಳಿರುವುದು ಸ್ಪಷ್ಟವಾಗಿದೆ. ಹೀಗಾಗಿ ಘಟನೆಯ ನಿಜಾಂಶ ಬಯಲಿಗೆಳೆಯಲು ಮಂಪರು ವಿಶ್ಲೇಷಣೆ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಬಯಸಿದ್ದಾರೆ. ದಕ್ಷಿಣ ದಿಲ್ಲಿಯ ಸಾಕೇತ್‌ದಲ್ಲಿರುವ ನ್ಯಾಯಾಲಯವು ಅಫ್ತಾಬ್ ಪೂನಾವಾಲಾನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಬುಧವಾರ ಅನುಮತಿ ನೀಡಿದೆ.

ಶ್ರದ್ಧಾ ಹತ್ಯೆ ಹೇಗೆ?
ಆಫ್ತಾಬ್ ಅಮೀನ್ ಪೂನಾವಾಲಾ ಮೇ 18 ರಂದು ತನ್ನ ಪ್ರೇಯಸಿ ಶ್ರದ್ದಾ ವಾಕರ್ ಅವರನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಹೊಸದಾಗಿ ಖರೀದಿಸಿದ 300-ಲೀಟರ್ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದನು. ಬಳಿಕ ಆಕೆಯ ದೇಹವನ್ನು 16 ದಿನಗಳ ಅವಧಿಯಲ್ಲಿ ಮೆಹ್ರೌಲಿ ಅರಣ್ಯ ಪ್ರದೇಶದಾದ್ಯಂತ ಎಸೆದಿದ್ದನು. ಬಳಿಕ ಶ್ರದ್ಧಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಆಫ್ತಾಬ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅಫ್ತಾಬ್ ಬೆರಳಿಗೆ ಗಾಯ
ಅಫ್ತಾಬ್ ಪೂನವಾಲಾನ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಅಫ್ತಾಬ್ ಶ್ರದ್ಧಾಳ ಮೃತ ದೇಹವನ್ನು 35 ತುಂಡುಗಳಾಗಿ ಕತ್ತರಿಸುವ ವೇಳೆ ಅವನ ಬೆರಳಿಗೆ ಸ್ವಲ್ಪ ಗಾಯವಾಗಿತ್ತು. ಆ ವೇಳೆ ಆತ ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋಗಿದ್ದನು. ಶ್ರದ್ಧಾ ಹತ್ಯೆಯ ನಂತರ ಅಫ್ತಾಬ್ ಮೇ ತಿಂಗಳಲ್ಲಿ ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋಗಿದ್ದು, ಅಲ್ಲಿ ತನ್ನ ಬೆರಳು ಕತ್ತರಿಸಲ್ಪಟ್ಟಿದೆ ಎಂದು ಹೇಳಿದ್ದಾನೆ. ಆರೋಪಿ ಪೂನಾವಾಲಾ ಅವರ ಬಳಿ ಬಂದಿರುವುದಾಗಿ ಡಾ.ಅನಿಲ್ ಕುಮಾರ್ ತಿಳಿಸಿದ್ದಾರೆ. ಅವರು ಚಿಕಿತ್ಸೆಗಾಗಿ ನನ್ನ ಬಳಿಗೆ ಬಂದಾಗ, ಅವರು ತುಂಬಾ ಕೋಪಗೊಂಡ ಮತ್ತು ಚಂಚಲರಾಗಿ ಕಾಣುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
Delhi Police realised that Aftab sometimes lies & sometimes speaks truth. So, they applied for Narco test. I feel I'm about to get justice. If he has done crime, he should be hanged.I always felt he's lying,I had told Mumbai & Delhi Police: Vikas Walker, Shraddha's father, to ANI
— ANI (@ANI) November 17, 2022











Click it and Unblock the Notifications