Shocking News: ಸೂಟ್‌ಕೇಸ್‌ನಲ್ಲಿ ತುಂಡಾಗಿ ಕತ್ತರಿಸಿದ ವ್ಯಕ್ತಿಯ ಶವ ಪತ್ತೆ!
ಲುಧಿಯಾನ ಏಪ್ರಿಲ್ 11: ಪಂಜಾಬ್‌ನ ಕ್ಯಾನ್ಸರ್ ಆಸ್ಪತ್ರೆ ಬಳಿ ಸೂಟ್‌ಕೇಸ್‌ವೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.
ಮೃತದೇಹವು ಹಲವು ತುಂಡುಗಳಾಗಿ ತುಂಡಾಗಿದ್ದು, ಆತನ ಮುಖ ಸೇತುವೆಯ ಕೆಳಗೆ ಬಿದ್ದಿರುವುದು ಪತ್ತೆಯಾಗಿದೆ. ವ್ಯಕ್ತಿಯ ಗುರುತು ಪತ್ತೆ ಮಾಡಲು ಸಾಧ್ಯವಾಗದಷ್ಟು ತುಂಡುಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಾಹಿತಿ ಪ್ರಕಾರ ಪಂಜಾಬ್‌ನ ಲುಧಿಯಾನ ವಿಭಾಗ ನಂ.6ರ ವ್ಯಾಪ್ತಿಯ ಕ್ಯಾನ್ಸರ್ ಆಸ್ಪತ್ರೆ ಬಳಿಯ ಸೇತುವೆಯ ಮೇಲೆ ಬ್ರೀಫ್ ಕೇಸ್ ಬಿದ್ದಿತ್ತು. ಈ ಬಗ್ಗೆ ದಾರಿಹೋಕರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಬ್ರೀಫ್ ಕೇಸ್ ತೆಗೆದು ನೋಡಿದಾಗ ಅದರಲ್ಲಿ ಬೆತ್ತಲೆ ವ್ಯಕ್ತಿಯ ಶವದ ಹಲವು ತುಂಡುಗಳು ಪತ್ತೆಯಾಗಿವೆ.
ಪೊಲೀಸರು ಸೇತುವೆ ಕೆಳಗೆ ನೋಡಿದಾಗ ಮುಖ ಪತ್ತೆಯಾಗಿದೆ. ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ. ಪೊಲೀಸರು ಈ ಛಾಯಾಚಿತ್ರವನ್ನು ಪಂಜಾಬ್‌ನ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಿದ್ದು, ಮೃತದೇಹವನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆಯಿಂದ ಜಿಲ್ಲೆಯ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications