ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ ಶಿವ ವಿಷ್ಣು ದೇವಾಲಯ ಧ್ವಂಸ: 7 ದಿನಗಳಲ್ಲಿ 2ನೇ ದಾಳಿ

|
Google Oneindia Kannada News

ಖಲಿಸ್ತಾನ್ ಸಂಘಟನೆ ಬೆಂಬಲಿಗರ ಅಟ್ಟಹಾಸ ಮುಂದುವರೆದಿದ್ದು, ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ. ಮೆಲ್ಬೋರ್ನ್‌ನಲ್ಲಿ ಹಿಂದೂ ದೇಗುಲವನ್ನು ಧ್ವಂಸ ಮತ್ತೊಂದು ಘಟನೆ ನಡೆದಿದೆ. ಆಸ್ಟ್ರೇಲಿಯದಲ್ಲಿ ಏಳು ದಿನಗಳೊಳಗೆ ದೇವಸ್ಥಾನವನ್ನು ಧ್ವಂಸಗೊಳಿಸಿದ ಎರಡನೇ ಘಟನೆ ಇದಾಗಿದೆ. ಪೊಂಗಲ್ ಹಬ್ಬದ ದಿನದಂದು ಭಕ್ತರು ದರ್ಶನಕ್ಕೆ ಬಂದಾಗ ವಿಧ್ವಂಸಕ ಕೃತ್ಯ ನಡೆದಿರುವುದು ಗಮನಕ್ಕೆ ಬಂದಿತ್ತು.

ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯವನ್ನು ಭಾರತ ವಿರೋಧಿ ಖಾಲಿಸ್ತಾನಿ ಬೆಂಬಲಿಗರು ಧ್ವಂಸಗೊಳಿಸಿದ್ದಾರೆ ಎಂದು ಆಸ್ಟ್ರೇಲಿಯ ಟುಡೇ ವರದಿ ಮಾಡಿದೆ. ನಾವು ಇಲ್ಲಿ ನೋಡುತ್ತಿರುವ ಈ ರೀತಿಯ ವರ್ತನೆಗೆ ವಿಕ್ಟೋರಿಯಾ ಅಥವಾ ಆಸ್ಟ್ರೇಲಿಯಾದಲ್ಲಿ ಸ್ಥಳವಿಲ್ಲ ಎಂದು ವಿಕ್ಟೋರಿಯನ್ ಲಿಬರಲ್ ಪಕ್ಷದ ಸಂಸದ ಬ್ರಾಡ್ ಬ್ಯಾಟಿನ್ ವಿಧ್ವಂಸಕ ಕೃತ್ಯಕ್ಕೆ ಪ್ರತಿಕ್ರಿಯಿಸಿದ್ದಾರೆ.

"ಜನರು ಒಟ್ಟಿಗೆ ಕೆಲಸ ಮಾಡಲು ಹಾಗೂ ಕಲಿಯುವವರಿಗೆ ವಿಕ್ಟೋರಿಯಾ ವಿಶ್ವದ ಅತ್ಯುತ್ತಮ ಬಹುಸಾಂಸ್ಕೃತಿಕ ರಾಜ್ಯವಾಗಿ ಸಹಕರಿಸುತ್ತದೆ. ಆದರೆ ಪರಸ್ಪರ ವಿರುದ್ಧಕ್ಕಾಗಿ ಅಲ್ಲ" ಎಂದು ಬ್ಯಾಟಿನ್ ಹೇಳಿದರು. ಜನವರಿ 12 ರಂದು, ಮೆಲ್ಬೋರ್ನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ಭಾರತ ವಿರೋಧಿ ಖಲಿಸ್ತಾನ್ ಸಂಘಟನೆ ಬೆಂಬಲಿಗರು ವಿರೂಪಗೊಳಿಸಿದರು.

Shiva Vishnu temple vandalized in Australia: 2nd attack in 7 days

"ಆಸ್ಟ್ರೇಲಿಯದ ಮೆಲ್ಬೋರ್ನ್‌ನ ಮಿಲ್ ಪಾರ್ಕ್‌ನಲ್ಲಿರುವ BAPSನ ಸ್ವಾಮಿನಾರಾಯಣ ಮಂದಿರವನ್ನು ಸಮಾಜವಿರೋಧಿ ಶಕ್ತಿಗಳಿಂದ ಧ್ವಂಸಗೊಳಿಸಿರುವುದಕ್ಕೆ ತೀವ್ರ ದುಃಖಿತವಾಗಿದೆ. ಶಾಂತಿ, ಸೌಹಾರ್ದತೆ, ಸಮಾನತೆ, ನಿಸ್ವಾರ್ಥ ಸೇವೆ ಮತ್ತು ಸಾರ್ವತ್ರಿಕ ಹಿಂದೂ ಮೌಲ್ಯಗಳಿಗೆ ಮಿಲ್ ಪಾರ್ಕ್‌ನಲ್ಲಿರುವ BAPS ದೇವಾಲಯವು ವಿಶ್ವಾದ್ಯಂತ BAPS ನ ಎಲ್ಲಾ ದೇವಾಲಯಗಳಂತೆ ದೇವಸ್ಥಾನ ಸ್ಥಾನವನ್ನು ಪಡೆದಿದೆ" ಎಂದು ಸ್ವಾಮಿನಾರಾಯಣ ಸಂಸ್ಥಾ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ.

English summary
Rampage of Khalistan organization supporters continues and they have vandalized a Shiva Vishnu temple in Australia. This is the 2nd attack in the last 7 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X