41ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಮೇಲೆ ಸ್ಕೈಡೈವ್ ಮಾಡಿದ ಮೊದಲ ಮಹಿಳೆ
ನವದೆಹಲಿ, ಡಿಸೆಂಬರ್ 5: ಮಹಿಳೆಯರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ದಾಪುಗಾಲು ಹಾಕುತ್ತಿದ್ದು, ನಮಗೆ ಆಕಾಶವೇ ಮಿತಿ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ.
ಅಕ್ಷರಶಃ ವಿಶ್ವದ ಅಗ್ರಸ್ಥಾನದಲ್ಲಿರುವ ಪದ್ಮಶ್ರೀ ಪುರಸ್ಕೃತರು ಮತ್ತು ಹಲವಾರು ಸ್ಕೈಡೈವಿಂಗ್ ದಾಖಲೆಗಳನ್ನು ಹೊಂದಿರುವ ಮಹಿಳೆ ಶೀತಲ್ ಮಹಾಜನ್. ಅವರು ಇತ್ತೀಚೆಗೆ 41 ನೇ ವಯಸ್ಸಿನಲ್ಲಿ ಇತಿಹಾಸವನ್ನು ಬರೆದಿದ್ದಾರೆ. ಅವರು ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನಲ್ಲಿ ಸ್ಕೈಡೈವ್ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

"ನಾನು ಮೌಂಟ್ ಎವರೆಸ್ಟ್‌ನ ಮುಂದೆ 21,500 ಅಡಿಗಳಿಂದ ನನ್ನ ಜೀವನದ ಅತ್ಯುತ್ತಮ ಜಿಗಿತವನ್ನು ಜಿಗಿದಿದ್ದೇನೆ. ಅಲ್ಲದೆ ಕಾಲಾಪತ್ಥರ್‌ನಿಂದ 17,444 ಅಡಿ / 5,317 ಮೀ ಎತ್ತರದಿಂದ ಇಳಿದಿದ್ದೇನೆ. ಮಹಿಳೆಯೊಬ್ಬರು ಮಾಡಿದ ಅತಿ ಎತ್ತರದ ಸ್ಕೈಡೈವಿಂಗ್ ಲ್ಯಾಂಡಿಂಗ್ ಅನ್ನು ನಾನು ಮಾಡಿದ್ದೇನೆ.
ಜೊತೆಗೆ 2 ರಾಷ್ಟ್ರೀಯ ದಾಖಲೆಗಳು ಕಾಲಾಪತ್ತರ್‌ನಲ್ಲಿ ಮೌಂಟ್ ಎವರೆಸ್ಟ್‌ನ ಮುಂದೆ ಸ್ಕೈಡೈವ್ ಮಾಡಿದ ಮೊದಲ ಭಾರತೀಯ ಮಹಿಳೆ ಮತ್ತು ಮಹಿಳೆಯೊಬ್ಬರು ಮಾಡಿದ ಅತಿ ಎತ್ತರದ ಸ್ಕೈಡೈವಿಂಗ್ ಲ್ಯಾಂಡಿಂಗ್ ಇದಾಗಿದೆ "ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ, ಶೀತಲ್ ಮಹಾಜನ್ ಈಗ ವಿಶ್ವದ ಮೂರು ಪರ್ವತಗಳ ಮೇಲೆ ಸ್ಕೈಡೈವ್ ಮಾಡಿದ ವಿಶ್ವದ ಮೊದಲ ಮಹಿಳೆ ಎಂಬ ಮಹತ್ತರ ಸಾಧನೆಯನ್ನು ಮಾಡಿದ್ದಾರೆ. ಉತ್ತರ ಧ್ರುವ, ದಕ್ಷಿಣ ಧ್ರುವ ಮತ್ತು ಮೌಂಟ್ ಎವರೆಸ್ಟ್, ಮತ್ತು ಏಳು ಖಂಡಗಳು ಮತ್ತು ಅತಿ ಎತ್ತರದ ಸ್ಕೈಡೈವಿಂಗ್ ಲ್ಯಾಂಡಿಂಗ್ ಮಾಡಿದ ಮಹಿಳೆ ಎಂಬ ಇತರ ದಾಖಲೆಗಳನ್ನು ಮಾಡಿದ್ದಾರೆ.
ಕಳೆದ 16 ವರ್ಷಗಳಿಂದ ಈ ಸಾಹಜ ಕಾರ್ಯಕ್ಕೆ ತಯಾರಿ ನಡೆಸುತ್ತಿದ್ದೇನೆ. ಜಾಗತಿಕವಾಗಿ ಮೂರು ಪರ್ವತಗಳ ಸವಾಲು 2004 ಮತ್ತು 2006 ರಲ್ಲಿ ನಾನು ದಕ್ಷಿಣ ಮತ್ತು ಉತ್ತರ ಧ್ರುವದಲ್ಲಿ ಫ್ರೀ ಫಾಲ್ ಜಂಪ್ ಮಾಡಿದ ಮೊದಲ ಮಹಿಳೆ ಎಂದೆನಿಸಿಕೊಳ್ಳಲು ಸಂತಸವಾಗಿದೆ. ಮೌಂಟ್ ಎವರೆಸ್ಟ್ ಮೂರನೇ ಧ್ರುವವಾಗಿದ್ದು, ಡಿಸೆಂಬರ್ 2022 ರಿಂದ ನಾನು ಅದನ್ನು ಪ್ರಯತ್ನಿಸಲು ಯೋಜಿಸುತ್ತಿದ್ದೆ ಎಂದು ಅವರು ಹೇಳಿದರು.
ಈ ಸಾಧನೆಗೆ 65 ಲಕ್ಷಕ್ಕೂ ಹೆಚ್ಚು ಮೊತ್ತದ ಕಾರ್ಯವಾಗಿತ್ತು. ಆದ್ದರಿಂದ ತಾವು 200 ಕ್ಕೂ ಹೆಚ್ಚು ಕಂಪನಿಗಳಿಗೆ ಕರೆ ಮಾಡಿ ಸಂಪರ್ಕಿಸಿದರು. ಇದರಿಂದ ಕೆಲವು ಪ್ರಾಯೋಜಕತ್ವಗಳನ್ನು ಪಡೆದೆನು. ಅದರಲ್ಲಿ ರಿಲಯನ್ಸ್ ಫೌಂಡೇಶನ್ ಪ್ರಮುಖ ಭಾಗವಾಗಿದ್ದು, ಅವರು ಸ್ವತಃ 20% ಹಣ ನೀಡಿದ್ದಾರೆ ಎಂದು ಹೇಳಿದರು.












Click it and Unblock the Notifications