ಇಂದ್ರಾಣಿ ಪುತ್ರಿ ಶೀನಾ ಬೋರಾ ಕೊಲೆ ಕೇಸಿಗೆ ಟ್ವಿಸ್ಟ್
ಮುಂಬೈ, ಆಗಸ್ಟ್ 28: ದಿನದಿನಕ್ಕೆ ವಿಚಿತ್ರ ತಿರುವು ಪಡೆದುಕೊಳ್ಳುತ್ತಿರುವ 2012ರ ಶೀನಾ ಬೋರಾ ಕೊಲೆ ಪ್ರಕರಣದ ಬಗ್ಗೆ ಪೊಲೀಸರಿಗೆ ಕ್ಷಣಕ್ಕೊಂದು ಮಾಹಿತಿ ಸಿಗುತ್ತಿದೆ. ಶೀನಾ ಬೋರಾ ಹತ್ಯೆಯಾಗುವ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದರು. ಆಕೆಯನ್ನು ಕೊಂದಿದ್ದು ಆಕೆಯ ಸೋದರಿಯಲ್ಲ, ಆಕೆಯ ತಾಯಿ ಸ್ಟಾರ್ ಇಂಡಿಯಾ ಚಾನೆಲ್ ನ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ಮುಖರ್ಜಿಯಾ ಎಂದು ತಿಳಿದು ಬಂದಿದೆ.
ಸ್ಟಾರ್ ಇಂಡಿಯಾ ಚಾನೆಲ್ ನ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ಮುಖರ್ಜಿಯಾ ಅವರನ್ನು 2012ರ ಕೊಲೆ ಕೇಸಲ್ಲಿ ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರಿಗೆ ಕೊಲೆಯ ಉದ್ದೇಶ, ಇದು ಮರ್ಯಾದೆ ಹತ್ಯೆಯೇ? ಆಸ್ತಿಗಾಗಿ ನಡೆದ ಕೊಲೆಯೇ? ಎಂಬುದು ತಿಳಿಯಬೇಕಿದೆ. [ಸ್ಟಾರ್ ಇಂಡಿಯಾ ಮಾಜಿ ಸಿಇಒ ಪತ್ನಿ ಕೊಲೆ ಕೇಸಲ್ಲಿ ಬಂಧನ]
ಇನ್ನಷ್ಟು ಜನರ ವಿಚಾರಣೆ: 9ಎಕ್ಸ್ ಮಾಧ್ಯಮ ಸಂಸ್ಥೆಯ ಮಾಜಿ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿಯ ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿಯ ಪುತ್ರ ಮಿಖೈಲ್ ಬೋರಾನನ್ನು ಭುವನೇಶ್ವರದಲ್ಲಿ ವಿಚಾರಣೆ ನಡೆಸಿದ್ದಾರೆ. ಇಂದ್ರಾಣಿ ಅವರ ಚಾಲಕ ಹಾಗೂ ರಾಹುಲ್ ಮುಖರ್ಜಿಯಾ ವಿಚಾರಣೆ ಜಾರಿಯಲ್ಲಿದೆ.
ಪೀಟರ್ ಮುಖರ್ಜಿ (ಇಂದ್ರಾಣಿ ಪತಿ) ಯ ಪುತ್ರನನ್ನೂ ಮುಂಬೈ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಪ್ರಕರಣದ ಮೂರನೇ ಆರೋಪಿ ಸಂಜೀವ್ ಖನ್ನಾ(ಇಂದಾಣಿಯ ಮತ್ತೊಬ್ಬ ಪತಿ) ರನ್ನು ವಿಚಾರಣೆಗೊಳಪಡಿಸಿದರೆ ಕೊಲೆ ಉದ್ದೇಶ ತಿಳಿದು ಬರಲಿದೆ ಎಂದು ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಹೇಳಿದ್ದಾರೆ.

ಶೀನಾ ಥಾಯ್ಲೆಂಡಿಗೆ ಹೋಗಿದ್ದು ನಿಜ
2012 ಏಪ್ರಿಲ್ 24ರಂದು ಕೊಲೆಯಾಗುವ ಮುನ್ನ ಶೀನಾ ಗರ್ಭಿಣಿಯಾಗಿದ್ದಳು. ಈ ಸುದ್ದಿ ತಿಳಿದಿದ್ದಕ್ಕೆ ಇಂದ್ರಾಣಿ ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಪೀಟರ್ ಮುಖರ್ಜಿಯ ಮೊದಲ ಪತ್ನಿಯಿಂದ ಪುತ್ರನಾದ ರಾಹುಲ್ ಹಾಗೂ ಇಂದ್ರಾಣಿಯ ಮೊದಲ ಪತಿಯ ಪುತ್ರಿ ಶೀನಾ ಪ್ರೀತಿಸುತ್ತಿದ್ದರು. ಮಗು ಜನಿಸಿದ ನಂತರ ರಾಹುಲ್ ಹಾಗೂ ಶೀನಾ ಥಾಯ್ಲೆಂಡ್ಗೆ ತೆರಳುವ ಯೋಜನೆಯನ್ನೂ ಹಾಕಿಕೊಂಡಿದ್ದರು ಎನ್ನಲಾಗಿದೆ. ಶೀನಾ ಥಾಯ್ಲೆಂಡಿಗೆ ಹೋಗಿದ್ದು ನಿಜವಾದರೂ ಯಾರ ಜೊತೆ ಹೋಗಿದ್ದರು ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಏ.24, 2012ರಂದು ನಡೆದ ಘಟನೆ
2012 ಏ.24ರಂದು ಶೀನಾ ಕೊಲೆ ಮಾಡುವುದಕ್ಕೂ ಮುನ್ನಾ ದಿನ ಕೋಲ್ಕತ್ತಾದಲ್ಲಿದ್ದ 2ನೇ ಪತಿ ಸಂಜೀವ್ ಖನ್ನಾನನ್ನು ಇಂದ್ರಾಣಿ ಕರೆಸಿಕೊಂಡಿದ್ದಳು. ಏ.24ರಂದು ಶೀನಾಳನ್ನು ಮುಂಬೈನ ಬಾಂದ್ರಾದ ಫ್ಲ್ಯಾಟ್ಗೆ ಬರುವಂತೆ ಇಂದ್ರಾಣಿ ಕರೆದಿದ್ದಳು. ಬಾಂದ್ರಾ ಫ್ಲ್ಯಾಟ್ಗೆ ಶೀನಾಳನ್ನು ರಾಹುಲ್ ಕಾರಿನಲ್ಲಿ ಕರೆತಂದು ಬಿಟ್ಟಿದ್ದ. ಇಲ್ಲಿಂದ ಶೀನಾಳನ್ನು ಇಂದ್ರಾಣಿ ಬಲವಂತವಾಗಿ ಕರೆದೊಯ್ದಿದ್ದಳು. ದಾರಿಯಲ್ಲಿ ಶೀನಾಳ ಮೇಲೆ ವಿಪರೀತ ಹಲ್ಲೆ ಮಾಡಿ ಹತ್ಯೆಗೈಯಲಾಗಿದೆ.

ಆಸ್ತಿಗಾಗಿ ಕೊಲೆ, ಶೀನಾ ಸೋದರನ ಹತ್ಯೆಗೂ ಸಂಚು
ಇಂದ್ರಾಣಿಗೆ ಎರಡನೇ ಪತಿ ಸಂಜೀವ್ ಖನ್ನಾನಿಂದ ಇನ್ನೊಂದು ಪುತ್ರಿ ವಿಧಿ ಕೂಡ ಇದ್ದಾಳೆ. ಈಕೆ ಸದ್ಯ ಇಂಗ್ಲೆಂಡ್ನಲ್ಲಿದ್ದು, ಪೀಟರ್ ಮುಖರ್ಜಿ ಈಕೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಶೀನಾಳನ್ನು ಹತ್ಯೆಗೈದರೆ ಪೀಟರ್ ಮುಖರ್ಜಿಯ ಎಲ್ಲ ಆಸ್ತಿಯೂ ವಿಧಿಗೆ ಸಲ್ಲುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನಬಹುದು. ಶೀನಾಳ ಜೈವಿಕ ಸೋದರ ಮಿಖೈಲ್ನನ್ನು ಗುರುವಾರ ಭುವನೇಶ್ವರದಲ್ಲಿ ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಂದ್ರಾಣಿ ಮುಂದಿನ ಟಾರ್ಗೆಟ್ ನಾನೇ ಆಗಿತ್ತು. ಹೀಗಾಗಿ ನನಗೆ ಭದ್ರತೆ ನೀಡಬೇಕು ಎಂದಿದ್ದಾನೆ

ಕಾರಿನಲ್ಲಿದ್ದ ಶವ, ನಂತರ ದಹನ
ಘಟನೆ ನಡೆದ ದಿನ ಕಾರಿನಲ್ಲಿ ಸಂಜೀವ್ ಖನ್ನಾ ಮತ್ತು ಚಾಲಕ ಕೂಡ ಇದ್ದರು. ಇಂದ್ರಾಣಿಗೆ ಇಬ್ಬರೂ ಸಹಾಯ ಮಾಡಿದ್ದರು. ರಾತ್ರಿ ಮುಂಬೈನಲ್ಲಿ ಪೀಟರ್ ಮನೆಯ ಗ್ಯಾರೇಜಿನಲ್ಲಿ ಶವ ಇತ್ತು. ಬೆಳಗಿನ ಜಾವ ಅಲ್ಲಿಂದ ರಾಯಗಢದಲ್ಲಿ ಶವಕ್ಕೆ ಪೆಟ್ರೋಲ್ ಸುರಿದು ದಹನ ಮಾಡಲಾಗಿದೆ. ಹೀಗಾಗಿ ಶೀನಾಳ ಡಿಎನ್ ಎ ಸ್ಯಾಂಪಲ್ ಪಡೆಯಲು ಕಷ್ಟವಾಗಿದೆ. ಅಲ್ಲದೆ, ಶವಪರೀಕ್ಷೆ ವರದಿ ಕೂಡಾ ಸಮರ್ಪಕವಾಗಿಲ್ಲ. ಸಂಜೀವ್ ಹಾಗೂ ಪೀಟರ್ ವಿಚಾರಣೆಯಿಂದ ಇನ್ನಷ್ಟು ಸತ್ಯ ಹೊರಬೀಳಲಿದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications