• search
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಟಾರ್ ಇಂಡಿಯಾ ಮಾಜಿ ಸಿಇಒ ಪತ್ನಿ ಕೊಲೆ ಕೇಸಲ್ಲಿ ಬಂಧನ

By Mahesh
|

ಮುಂಬೈ, ಆಗಸ್ಟ್ 25: ಸ್ಟಾರ್ ಇಂಡಿಯಾ ಚಾನೆಲ್ ನ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ಮುಖರ್ಜಿಯಾ ಅವರನ್ನು 2012ರ ಕೊಲೆ ಕೇಸಲ್ಲಿ ಬಂಧಿಸಲಾಗಿದೆ. ಇಂದ್ರಾಣಿ ಅವರನ್ನು ತಮ್ಮ ಸೋದರಿಯನ್ನು ಕೊಂದ ಆರೋಪದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಖಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಡಿಸಿಪಿ ಧನಂಜಯ್ ಕುಲಕರ್ಣಿ ಹೇಳಿದ್ದಾರೆ.

2012ರಲ್ಲಿ ಇಂದ್ರಾಣಿ ಸಹೋದರಿ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆ.31ರವರೆಗೆ ಪೊಲೀಸ್ ವಶಕ್ಕೊಪ್ಪಿಸಿ ಆದೇಶ ಹೊರಡಿಸಿದೆ ಎಂದು ಕುಲಕರ್ಣಿ ಹೇಳಿದರು.

2012ರಲ್ಲಿ ಇಂದ್ರಾಣಿ ಅವರ ಸಹೋದರಿ ಶೀನಾ ಬೋರಾ ಕೊಲೆಯಾಗಿತ್ತು. ಅದರೆ, ಕೊಲೆಗಾರರ ಸುಳಿವು ಇನ್ನೂ ಸಿಕ್ಕಿಲ್ಲ. ಮಹಾರಾಷ್ಟ್ರದ ರಾಯಗಢದಲ್ಲಿ ಬೋರಾ ಅವರ ಶವ ಹೂತಿರುವ ಜಾಗವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ಸಂಬಂಧ ಇಂದ್ರಾಣಿ ಅವರ ಕಾರು ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಮೃತ ವ್ಯಕ್ತಿಯ ಡಿಎನ್ ಎ ಸ್ಯಾಂಪಲ್ ವರದಿ ಇನ್ನೂ ಬಹಿರಂಗವಾಗಿಲ್ಲ. ಕಾರು ಚಾಲಕನ ಹೇಳಿಕೆ ಆಧಾರದ ಮೇಲೆ ಇಂದ್ರಾಣಿ ಅವರನ್ನು ಪ್ರಶ್ನಿಸಲು ಬಂಧಿಸಲಾಗಿದೆ. ಇದು ತನಿಖೆಯ ಭಾಗವಾಗಿದೆ. ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರೇ ಇಂದ್ರಾಣಿ ಅವರ ವಿಚಾರಣೆ ನಡೆಸಿದ್ದು ವಿಶೇಷವಾಗಿತ್ತು.

ಇಂದ್ರಾಣಿ ಹಾಗೂ ಕಾರು ಚಾಲಕನನ್ನು ಶವ ಪತ್ತೆಯಾದ ಜಾಗಕ್ಕೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಲು ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. 9x ಮಾಧ್ಯಮ ಸಂಸ್ಥೆ ಸ್ಥಾಪಕಿ ಇಂದ್ರಾಣಿ ಅವರ ಬಂಧನ ಸುದ್ದಿಯನ್ನು ಕೇಳಿಸಿಕೊಳ್ಳಿ:

(ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮುಂಬೈ ಸುದ್ದಿಗಳುView All

English summary
The wife of former Star India CEO Peter Mukherjee was today detained by police for her alleged role in her sister's murder in 2012. Indrani Mukherjea was detained by suburban Khar police, DCP (Detection) Dhananjay Kulkarni said without elaborating.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more