ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೋನಿಯಾ ಸಮ್ಮತಿ ಪಡೆದ ಹಿರಿಯ ಮುಖಂಡ

|
Google Oneindia Kannada News

ನವದೆಹಲಿ, ಸೆ 19: ಇದೇ ಬರುವ ಅಕ್ಟೋಬರ್ ಹದಿನೇಳರಂದು ನಡೆಯಲಿರುವ ಎಐಸಿಸಿಯ ಅಧ್ಯಕ್ಷ ಸ್ಥಾನದ ಚುನಾವಣೆ ಕಾವನ್ನು ಪಡೆದುಕೊಳ್ಳಲಾರಂಭಿಸಿದೆ. ಇನ್ನೊಂದು ಕಡೆ, ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಬ್ಯೂಸಿಯಾಗಿದ್ದಾರೆ.

ಅಧ್ಯಕ್ಷ ಚುನಾವಣೆಗೆ ಮತ ಹಾಕುವವರ ಪಟ್ಟಿಯನ್ನು ಬಹಿರಂಗ ಪಡಿಸುವಂತೆ ಪಕ್ಷದ ಜಿ23 ನಾಯಕರು ಒತ್ತಾಯಿಸಿದ್ದರೆ, ಅದು ಸಾಧ್ಯವಿಲ್ಲ ಎಂದು ಹಿರಿಯ ಮುಖಂಡ ಮಧುಸೂಧನ ಮಿಸ್ತ್ರಿ ಹೇಳಿದ್ದಾರೆ.

ಟಿಕೆಟ್ ಸಿಗೋಲ್ಲ ಎನ್ನುವ ಡಿಕೆಶಿ ಹೇಳಿಕೆ: ಪಕ್ಷದಲ್ಲೇ ಹಲವು ಕೌಂಟರ್ಟಿಕೆಟ್ ಸಿಗೋಲ್ಲ ಎನ್ನುವ ಡಿಕೆಶಿ ಹೇಳಿಕೆ: ಪಕ್ಷದಲ್ಲೇ ಹಲವು ಕೌಂಟರ್

ರಾಜಸ್ಥಾನ, ಗುಜರಾತ್ ಮತ್ತು ತಮಿಳುನಾಡು ಕಾಂಗ್ರೆಸ್ ಘಟಕ ರಾಹುಲ್ ಗಾಂಧಿ ನಮ್ಮ ಅಧ್ಯಕ್ಷ ಎನ್ನುವ ನಿರ್ಣಯವನ್ನು ತೆಗೆದುಕೊಂಡಿದೆ. ಈ ನಡುವೆ, ಪಕ್ಷದ ಹಿರಿಯ ಮುಖಂಡ ಶಶಿ ತರೂರ್, ಎಐಸಿಸಿಯ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ.

Shashi Tharoor Met Sonia Gandhi gets Nod To Fight President Election

ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಶಶಿ ತರೂರ್ ಅವರು ಸೋನಿಯಾ ಗಾಂಧಿಯವರ ಅನುಮತಿಯನ್ನು ಪಡೆಯಲು ಭೇಟಿಯಾಗಿದ್ದರು. ಸ್ಪರ್ಧೆಗೆ ಸೋನಿಯಾ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

"ಅಧ್ಯಕ್ಷೀಯ ಚುನಾವಣೆಯಲ್ಲಿ ಶಶಿ ತರೂರ್ ಅವರು ಬಯಸಲು ಸ್ಪರ್ಧಿಸಿದರೆ ಅವರು ನಾಮಪತ್ರ ಸಲ್ಲಿಸಬಹುದು. ಈ ಚುನಾವಣೆಯಲ್ಲಿ ಯಾರೂ ಬೇಕಾದರೂ ಸ್ಪರ್ಧಿಸಲು ಅವಕಾಶವಿದೆ"ಎಂದು ಸೋನಿಯಾ ಗಾಂಧಿ ಹೇಳಿದ್ದಾರೆಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮೂರು ರಾಜ್ಯಗಳ ಕಾಂಗ್ರೆಸ್ ಘಟಕ ರಾಹುಲ್ ಗಾಂಧಿಯವರನ್ನು ಅಧ್ಯಕ್ಷ ಎಂದು ನಿರ್ಣಯ ತೆಗೆದುಕೊಂಡ ಬೆನ್ನಲ್ಲೇ, ಶಶಿ ತರೂರ್ ಅವರ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ. ಜಿ23 ಮುಖಂಡರಲ್ಲಿ ಶಶಿ ತರೂರು ಕೂಡಾ ಒಬ್ಬರು ಎನ್ನುವುದು ಗಮನಿಸಬೇಕಾದ ವಿಚಾರ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ವೇಳಾಪಟ್ಟಿ ಇಂತಿದೆ:

ಅಧಿಸೂಚನೆ ದಿನಾಂಕ: 22.09.2022
ನಾಮಪತ್ರ ಸಲ್ಲಿಕೆಗೆ ದಿನಾಂಕ: 24.09.2022 - 30.09.2022
ನಾಮಪತ್ರ ಸಲ್ಲಿಸಲು ಕೊನೆಯ ದಿನ: 30.09.2022
ನಾಮಪತ್ರ ಪರಿಶೀಲನೆ: 01.10.2022
ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನ: 08.10.2022
ಚುನಾವಣಾ ಪ್ರಚಾರಕ್ಕೆ ದಿನ: 08.10.2022 - 16.10.2022
ಚುನಾವಣೆ ನಡೆಯುವ ದಿನ: 17.10.2022
ಫಲಿತಾಂಶ ಪ್ರಕಟ: 19.10.2022

English summary
Senior Congress leader Shashi Tharoor Met Sonia Gandhi To Get a Nod To Fight President Election. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X