ಪ್ರಧಾನಿ ಮೋದಿ ತಾಯಿ ನಿಧನ: ನಟ ಶಾರುಖ್ ಖಾನ್‌ರಿಂದ ಹೃದಯಪೂರ್ವಕ ಸಂತಾಪ

ಬೆಂಗಳೂರು, ಡಿಸೆಂಬರ್ 31: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ನಿನ್ನೆ ನಿಧನರಾದರು. ಈ ಹಿನ್ನೆಲೆಯಲ್ಲಿ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಹೃದಯಪೂರ್ವಕ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ಶನಿವಾರ ದೆಹಲಿಗೆ ಹಿಂದಿರುಗುವ ಮೊದಲು ಗುಜರಾತ್‌ನ ಅಹಮದಾಬಾದ್‌ನಲ್ಲಿ ತಮ್ಮ ತಾಯಿಯ ಅಂತಿಮ ವಿಧಿಗಳನ್ನು ನೆರವೇರಿಸಿದರು.

ಹೀರಾಬೆನ್ ಅವರ ಸಾವಿನ ಸುದ್ದಿ ಹೊರಬಿದ್ದ ನಂತರ, ಬಾಲಿವುಡ್‌ ತಾರೆಯರಾದ ಅಕ್ಷಯ್ ಕುಮಾರ್, ಅನುಪಮ್ ಖೇರ್, ಕಂಗನಾ ರಣಾವತ್, ವಿವೇಕ್ ಅಗ್ನಿಹೋತ್ರಿ, ಜಾಕಿ ಶ್ರಾಫ್, ಸ್ವರಾ ಭಾಸ್ಕರ್ ಮತ್ತು ಸೋನು ಸೂದ್ ಸೇರಿದಂತೆ ಇತರ ಗಣ್ಯರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತಾಪವನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿಯವರ ಅಗಲಿದ ತಾಯಿಗೆ ಗೌರವ ಸಲ್ಲಿಸಿದರು.

Shah Rukh Khan sends heartfelt condolences to PM Narendra Modi on mothers death

ಶನಿವಾರ ಶಾರುಖ್ ಟ್ವೀಟ್ ಮಾಡಿದ್ದಾರೆ. 'ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಜಿ ಅವರ ಅಗಲಿಕೆಗೆ ಹೃದಯಪೂರ್ವಕ ಸಂತಾಪಗಳು. ನನ್ನ ಕುಟುಂಬದ ಪ್ರಾರ್ಥನೆ ನಿಮ್ಮೊಂದಿಗಿದೆ ಸರ್. ದೇವರು ಅವರ ಆತ್ಮಕ್ಕೆ ಆಶೀರ್ವಾದ ನೀಡಲಿ' ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಶಾರುಖ್ ಖಾನ್‌ ಅವರು ಪ್ರಧಾನಿಯ 72ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು. 'ನಮ್ಮ ದೇಶ ಮತ್ತು ಅದರ ಜನರ ಕಲ್ಯಾಣಕ್ಕಾಗಿ ನಿಮ್ಮ ಸಮರ್ಪಣೆ ಅತ್ಯಂತ ಪ್ರಶಂಸನೀಯವಾಗಿದೆ. ನಿಮ್ಮ ಎಲ್ಲಾ ಗುರಿಗಳನ್ನು ಸಾಧಿಸುವ ಶಕ್ತಿ ಮತ್ತು ಆರೋಗ್ಯವನ್ನು ನೀವು ಹೊಂದಿಬೇಕು. ಒಂದು ದಿನ ರಜೆ ತೆಗೆದುಕೊಳ್ಳಿ ಮತ್ತು ನಿಮ್ಮ ಜನ್ಮದಿನವನ್ನು ಆನಂದಿಸಿ ಸರ್. ಜನ್ಮದಿನದ ಶುಭಾಶಯಗಳು ನರೇಂದ್ರ ಮೋದಿ' ಎಂದು ಹೇಳಿದ್ದರು.

ಶಾರುಖ್ ಕಳೆದ ನಾಲ್ಕು ವರ್ಷಗಳಿಂದ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಅವರು ಕೊನೆಯದಾಗಿ ಆನಂದ್ ಎಲ್ ರೈ ಅವರ ಝೀರೋ (2018) ಚಿತ್ರದಲ್ಲಿ ನಟಿಸಿದ್ದರು. ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಕಾಣಿಸಿಕೊಂಡರು.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಅವರ ಮುಂದಿನ ಚಿತ್ರ ಪಠಾನ್ ಜನವರಿ 25, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅವರು ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ನಟಿಸಿದ್ದಾರೆ.

ಎರಡು ವಾರಗಳ ಹಿಂದೆ ಬಿಡುಗಡೆಯಾಗಿರುವ ಪಠಾಣ್‌ ಚಿತ್ರದ 'ಬೇಷರಮ್‌ ರಂಗ್‌' ಹಾಡು ವಿವಾದ ಹುಟ್ಟುಹಾಕಿದೆ. ಆ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದು ಧರ್ಮಕ್ಕೆ ಮಾಡಿದ ಅವಮಾನವೆಂದೂ ಕೆಲವರು ಖ್ಯಾತೆ ತೆಗೆದಿದ್ದಾರೆ. ಈ ಹಾಡನ್ನು ಎಡಿಟ್‌ ಮಾಡದೇ ಹೋದರೆ, ಚಿತ್ರ ನಿಷೇಧಿಸುವ ಕುರಿತು ಯೋಚಿಸುವುದಾಗಿ ಮಧ್ಯಪ್ರದೇಶ ಗೃಹ ಸಚಿವ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+