'ಪತ್ನಿ ಜತೆಗಿನ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ'

Subscribe to Oneindia Kannada

ನವದೆಹಲಿ, ಆಗಸ್ಟ್, 30: 15 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗದೇ ಇದ್ದು, ಪತ್ನಿ ಎನಿಸಿಕೊಂಡವಳ ಜತೆ ಗಂಡ ಲೈಂಗಿಕ ಕ್ರಿಯೆ ನಡೆಸಿದಲ್ಲಿ ಅತ್ಯಾಚಾರ ಎಂದು ಗಣನಗೆ ತೆಗೆದುಕೊಳ್ಳಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಸಂಬಂಧ ದೆಹಲಿ ಹೈಕೋರ್ಟ್ ಗೆ ಅಫಿಡವಿಟ್ (ಪ್ರಮಾಣಪತ್ರ) ಕೂಡಾ ಸಲ್ಲಿಕೆ ಮಾಡಿದೆ.

ದೆಹಲಿ ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಸಂಗೀತಾ ಧಿಗ್ರಾ ಶೆಂಗಾಲ್ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯೊಂದಕ್ಕೆ ಸಂಬಂಧಿಸಿ ಕೇಳಿದ ಮಾಹಿತಿಗೆ ಸರ್ಕಾರ ತನ್ನ ವರದಿ ಸಲ್ಲಿಕೆ ಮಾಡಿದೆ.[ಒಪ್ಪಿಗೆಯ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಮುಂಬೈ ಹೈಕೋರ್ಟ್]

Sexual Intercourse By Man With Wife Not Rape: Centre

ಎನ್ ಜಿ ಒ ಸಂಸ್ಥೆಯೊಂದು ಅತ್ಯಾಚಾರದ ವ್ಯಾಖ್ಯೆ ಬಗ್ಗೆ ಇದ್ದ ಗೊಂದಲ ನಿವಾರಣೆಗೆಂದು ದೆಹಲಿ ಹೈ ಕೋರ್ಟ್ ಗೆ ಮನವಿ ನೀಡಿತ್ತು. ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಿತ್ತು.[ಎಚ್ಚರ.. ಅಸುರಕ್ಷಿತ ಲೈಂಗಿಕ ಸಂಪರ್ಕ ಝಿಕಾ ವೈರಸ್ ತರಬಹುದು]

ಬಾಲ್ಯ ವಿವಾಹವನ್ನು ನಿಷೇಧ ಮಾಡಿ ದಶಕಗಳೆ ಕಳೆದಿವೆ. ಸ್ತ್ರೀಗೆ 18 ವರ್ಷ ಮತ್ತು ಪುರುಷನಿಗೆ 21 ವರ್ಷ ವಯಸ್ಸನ್ನು ನಿಗದಿ ಮಾಡಲಾಗಿದೆ. ಇಂಥ ವೇಳೆ 15 ವರ್ಷ ಎಂದು ಕೇಂದ್ರ ಸರ್ಕಾರ ಉಲ್ಲೇಖ ಮಾಡಿ ನೀಡಿರುವುದು ಹಲವಾರು ಪ್ರಶ್ನೆಗಳಿಗೆ ಕಾರಣವಾದರೂ ಆಶ್ಚರ್ಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union government has submitted an affidavit before Delhi High Court stating that sexual intercourse by a man with his own wife, who is not under 15 years of age, is not rape.
Please Wait while comments are loading...