ಲೈಂಗಿಕ ದೌರ್ಜನ್ಯ: 3 ವರ್ಷದ ಮಗುವಿನ ದೇಹದಲ್ಲಿ 7 ಸೂಜಿ ಪತ್ತೆ!

ಕೋಲ್ಕತ್ತಾ, ಜುಲೈ 19: ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಕೋಲ್ಕತ್ತದ ಮೂರು ವರ್ಷದ ಪುಟ್ಟ ಮಗುವಿನ ದೇಹದಲ್ಲಿ ಪತ್ತೆಯಾದ 7 ಸೂಜಿಗಳು ವೈದ್ಯಕೀಯ ಲೋಕವನ್ನೇ ನಡುಗಿಸಿದೆ.

ಕೋಲ್ಕತ್ತದ ಪುರುಲಿಯಾ ಎಂಬ ಹಳ್ಳಿಯ ಮೂರು ವರ್ಷದ ಮಗುವಿನ ಮೇಲೆ ಆಕೆಯ ತಾಯಿಗೆ ಕೆಲಸ ನೀಡಿದ್ದ ಮಾಲೀಕನೇ ಲೈಂಗಿಕ ದೌರ್ಜನ್ಯ ಎಸಗಿದ್ದ.

ವಿಷಯ ತಿಳಿಯುತ್ತಿದ್ದಂತೆಯೇ ಆಕೆಯನ್ನು ಕೋಲ್ಕತ್ತದ ಆಸ್ಪತ್ರೆಯೊಂದಕ್ಕೆ ಆಕೆಯ ತಾಯಿ ಕರೆದೊಯ್ದರು. ಆದರೆ ಇದು ಲೈಂಗಿಕ ದೌರ್ಜನ್ಯದ ಪ್ರಕರಣವಾಗಿರುವುದರಿಂದ ಇಂಥ ಪ್ರಕರಣಗಳನ್ನು ನಾವು ನೋಡುವುದಿಲ್ಲ ಎಂದು ಅಲ್ಲಿನ ವೈದ್ಯರೇ ಹೇಳಿದ್ದರು. ಕಂಗಾಲಾದ ತಾಯಿ, ಮಗುವನ್ನು ಕೋಲ್ಕತ್ತದ ಎಸ್ ಎಸ್ ಕೆ ಎಂ ಆಸ್ಪತ್ರೆಗೆ ಸೇರಿಸಿದರು.

Sexual harassment on 3 year old girl in Kolkatta: 7 needles found in her body

ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಆಕೆಯ ದೇಹದಲ್ಲಿ ಸೂಜಿಗಳಿರುವುದು ತಿಳಿದುಬಂತು. ಆಗಲೇ ಮಗು ಕೋಮಾ ಸ್ಥಿತಿ ತಲುಪಿತ್ತು.

ಆಕೆಯನ್ನು ಶಸ್ತ್ರಚಿಕಿತ್ಸೆಗೊಳಪಡಿಸಿದ ವೈದ್ಯರಿಗೆ ಆಕೆಯ ದೇಹದಲ್ಲಿ ಬರೋಬ್ಬರಿ ಏಳು ಸೂಜಿಗಳು ಸಿಕ್ಕಿದ್ದು, ಈ ಸೂಜಿಯನ್ನು ಆಕೆಯ ಮೇಲೆ ದೌರ್ಜನ್ಯ ಎಸಗಿದವನೇ ಹಾಕಿರಬಹುದು ಎಂದು ಅಂದಾಜಿಸಲಾಗಿದೆ. ನಾಲ್ಕು ಇಂಚು ಉದ್ದದ ಈ ಏಳೂ ಸೂಜಿಗಳನ್ನೂ ವೈದ್ಯರು ಆಕೆಯ ದೇಹದಿಂದ ಹೊರತೆಗೆದಿದ್ದಾರೆ.

ಆಕೆಯ ಪಿತ್ಥ ಜನಕಾಂಗದಲ್ಲೇ ಮೂರು ಸೂಜಿಗಳು ಪತ್ತೆಯಾಗಿದ್ದವು. ಇವನ್ನು ತೆಗೆದುಹಾಕುವುದು ನಿಜಕ್ಕೂ ಪ್ರಯಾಸದ ಕೆಲಸವಾಗಿತ್ತು ಎನ್ನುತ್ತಾರೆ ವೈದ್ಯರು. ಸದ್ಯಕ್ಕೆ ಮಗು ಚೇತರಿಸಿಕೊಳ್ಳುತ್ತಿತ್ತು, ಕೆಲ ದಿನಗಳ ಕಾಲ ಆಕೆ ತೀವ್ರ ನಿಗಾ ಘಟಕದಲ್ಲೇ ಇರಬೇಕಾಗುತ್ತದೆಂದು ವೈದ್ಯರು ಹೇಳಿದ್ದಾರೆ.

ಪ್ರಕರಣ ದಾಖಲಿಸಿರುವ ಪೊಲೀರು ನಾಪತ್ತೆಯಾಗಿರುವ ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+