ರಕ್ಷಕರಾಗುವ ಬದಲು ರಾಕ್ಷಸರಾದ ಪೊಲೀಸರು: ನಿಶ್ಚಿತ ವರನೊಂದಿಗೆ ಏಕಾಂತ ಸ್ಥಳದಲ್ಲಿದ್ದ ಯುವತಿಗೆ ಲೈಂಗಿಕ ಕಿರುಕುಳ!
ನಿರ್ಜನ ಪ್ರದೇಶದಲ್ಲಿ ಏಕಾಂಗಿಯಾಗಿ ಓಡಾಡುವ ಜೋಡಿಗಳಿಗೆ ತೊಂದರೆ ಕೊಡುವುದು, ಅವರ ಬಳಿ ಇರುವ ವಸ್ತುಗಳನ್ನು ಕಸಿದುಕೊಂಡಿ ಅತ್ಯಾಚಾರ ಎಸಗುವಂತಹ ಪ್ರಕರಣಗಳು ದೇಶದೆಲ್ಲೆಡೆ ನಡೆಯುತ್ತಲೇ ಇರುತ್ತವೆ. ಇಂತಹ ಘಟನೆಗಳನ್ನು ತಡೆಯಲು ಪೊಲೀಸರು ಎಲ್ಲೆಡೆ ಗಸ್ತು ತಿರುಗುತ್ತಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜನರ ರಕ್ಷಣೆ ಮಾಡುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪೊಲೀಸರೇ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಭಯಾನಕ ಘಟನೆ ನಡೆದಿದೆ.
ಹೌದು... ಗಾಜಿಯಾಬಾದ್ನಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. 22 ವರ್ಷದ ಯುವತಿಯೊಬ್ಬಳು ಸೆಪ್ಟೆಂಬರ್ 16 ರಂದು ತನ್ನ ನಿಶ್ಚಿತ ವರನೊಂದಿಗೆ ಗಾಜಿಯಾಬಾದ್‌ನ ಸಾಯಿ ಉಪ್ವಾನ್ ನಗರ ಅರಣ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇಬ್ಬರು ಪೊಲೀಸರು ಮತ್ತು ಇನ್ನೊಬ್ಬ ವ್ಯಕ್ತಿ ಸರಳ ಉಡುಪಿನಲ್ಲಿ ಗಂಟೆಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ದಂಪತಿಯಿಂದ 10,000 ರೂಪಾಯಿ ಹಣ ವಸೂಲಿ ಕೂಡ ಮಾಡಲಾಗಿದೆ.

ಈ ಮೂವರು ಪುರುಷರ ಗುರುತು ಹಾಗೂ ಗಾಜಿಯಾಬಾದ್ ಪೊಲೀಸರ ವಾಹನ (PRV)ವನ್ನು ದಂಪತಿ ಪತ್ತೆ ಮಾಡಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 28 ರಂದು ಎಫ್‌ಐಆರ್ ದಾಖಲಾಗಿತ್ತು. ಪೊಲೀಸರು ತನ್ನ ನಿಶ್ಚಿತ ವರನಿಗೆ ಕಪಾಳಮೋಕ್ಷ ಮಾಡಿದರು ಮತ್ತು ತನ್ನ ಖಾಸಗಿ ಅಂಗಾಗಗಳನ್ನು ಮುಟ್ಟಿ ಅನುಚಿತವಾಗಿ ಸ್ಪರ್ಶಿಸಿದರು ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಯ ನಂತರವೂ ಆರೋಪಿ ಪೊಲೀಸರು ತಮಗೆ ಕರೆ ಮಾಡುವುದನ್ನು ಮುಂದುವರೆಸಿದರು ಮತ್ತು ತಡರಾತ್ರಿ ತನ್ನ ಮನೆಗೆ ಬಂದರು ಎಂದು ಯುವತಿ ದೂರಿದ್ದಾರೆ.
ಯುವತಿ ಸಹಾಯಕ್ಕಾಗಿ ಪೊಲೀಸ್ ತುರ್ತು ಸಂಖ್ಯೆಗೆ ಡಯಲ್ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಅವಳ ಕರೆಯನ್ನು ಘಜೈಬಾದ್ ಪೊಲೀಸರಿಗೆ ರವಾನಿಸಿದ್ದಾರೆ.

ಮೂವರು ಆರೋಪಿಗಳನ್ನು ಕಾನ್‌ಸ್ಟೆಬಲ್ ರಾಕೇಶ್ ಕುಮಾರ್, ಹೋಮ್ ಗಾರ್ಡ್ ದಿಗಂಬರ್ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ಮೂವರು ತನ್ನನ್ನು ಮತ್ತು ತನ್ನ ನಿಶ್ಚಿತ ವರನನ್ನು ಸೆರೆಹಿಡಿದು ಸುಮಾರು ಮೂರು ಗಂಟೆಗಳ ಕಾಲ ಕಿರುಕುಳ ನೀಡಿದರು ಎಂದು ಯುವತಿ ಹೇಳಿದ್ದಾರೆ. ಕಿರುಕುಳ ನೀಡುತ್ತಿದ್ದಾಗ ದಂಪತಿ 10,000 ರೂಪಾಯಿ ಹಣ ನೀಡಿ ತಮ್ಮನ್ನು ಬಿಡುವಂತೆ ಮನವಿ ಮಾಡಿದ್ದಾರೆ.
"ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೂರು ಜನರು PRV ನಲ್ಲಿ ಬಂದು ನಮಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಅವರು ನನ್ನ ನಿಶ್ಚಿತ ವರನಿಗೆ ಕಪಾಳಮೋಕ್ಷ ಮಾಡಿದರು ಮತ್ತು ಅವರಲ್ಲಿ ಒಬ್ಬರು ನಮ್ಮನ್ನು ಹೋಗಲು ಬಿಡಲು 10,000 ರೂ. ಕೇಳಿದರು. ನಾವು ಅವರಿಗೆ ಕೈಮುಗಿದು ಕೇಳಿದೆವು ಮತ್ತು ಅವರ ಪಾದಗಳನ್ನು ಮುಟ್ಟಿದೆವು ಆದರೆ ಅವರು ಕದಲಲಿಲ್ಲ. ನಂತರ ರಾಕೇಶ್ ಕುಮಾರ್ ಅಸಭ್ಯವಾಗಿ ವರ್ತಿಸಿ ನನ್ನೊಂದಿಗೆ ದೈಹಿಕ ಸಂಪರ್ಕಕ್ಕೆ ಬರುವಂತೆ ಒತ್ತಾಯಿಸಿದರು. ಮೂರನೇ ವ್ಯಕ್ತಿ 5.5 ಲಕ್ಷ ರೂ.ಗೆ ಬೇಡಿಕೆಯಿಟ್ಟರು. ಮೂರು ಗಂಟೆಗಳ ಕಾಲ ನಮ್ಮನ್ನು ಬಂಧಿಸಿ, ಆರೋಪಿಗಳು ನನ್ನನ್ನು ಪದೇ ಪದೇ ಅನುಚಿತವಾಗಿ ಸ್ಪರ್ಶಿಸಿದ್ದಾರೆ'' ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾರೆ.
ಯುವತಿಯ ದೂರಿನ ಆಧಾರದ ಮೇಲೆ, ಮೂವರು ಆರೋಪಿಗಳ ವಿರುದ್ಧ ಸೆಕ್ಷನ್ 354a (1) (ii) ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ, 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 342 (ತಪ್ಪಾದ ಬಂಧನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ನಂತರ ರಾಕೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ದಿಗಂಬರ್ ಇಲಾಖೆಗೆ ಪತ್ರವನ್ನು ಕಳುಹಿಸಲಾಗಿದೆ ಎಂದು ಗಾಜಿಯಾಬಾದ್ ಪೊಲೀಸ್ ಸಹಾಯಕ ಆಯುಕ್ತರು ತಿಳಿಸಿದ್ದಾರೆ. ಮೂವರೂ ಆರೋಪಿಗಳು ಸದ್ಯ ಪೊಲೀಸರಿಂದ ತಲೆಮರೆಸಿಕೊಂಡಿದ್ದಾರೆ.
{document1}












Click it and Unblock the Notifications