ಲೈಂಗಿಕ ಕಿರುಕುಳ: ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಜಿಗಿದ ಬಾಲಕಿ
ಔರಂಗಾಬಾದ್/ಮಹಾರಾಷ್ಟ್ರ, ನವೆಂಬರ್ 16: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ವೇಗವಾಗಿ ಬರುತ್ತಿದ್ದ ಆಟೋರಿಕ್ಷಾದಿಂದ ಬಾಲಕಿಯೊಬ್ಬಳು ಜಿಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಟೋ ಚಾಲಕ ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದನು ಎಂದು ಬಾಲಕಿ ಆರೋಪಿಸಿದ್ದಾಳೆ. ಅಪರಾಧದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಆಕೆ ಸಂಚಾರ ದಟ್ಟಣೆಯ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನದಿಂದ ಜಿಗಿದಿದ್ದಾಳೆ ಎಂದು ಹೇಳಲಾಗಿದೆ. ಆರೋಪಿ ಚಾಲಕ ಸೈಯದ್ ಅಕ್ಬರ್ ಹಮೀದ್ ನನ್ನು ವಶಕ್ಕೆ ಪಡೆಯಲಾಗಿದೆ.
ತಲೆಗೆ ಗಾಯವಾಗಿರುವ ಸಂತ್ರಸ್ತ ಬಾಲಕಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದೆ. ಬಾಲಕಿ ಆಟೋದಿಂದ ಜಿಗಿದ ತಕ್ಷಣ ಸಹಾಯಕ್ಕೆ ಹಲವರು ಓಡಿ ಬಂದಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಬಿದ್ದ ಬಾಲಕಿಗೆ ಸಹಾಯ ಮಾಡಲು ಇತರ ವಾಹನಗಳು ಸಹ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಘಟನೆಯ ನಂತರ, ಔರಂಗಾಬಾದ್‌ನ ಕ್ರಾಂತಿ ಚೌಕ್ ಪೊಲೀಸ್ ಠಾಣೆಯಲ್ಲಿ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ ಕಾಯ್ದೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
#WATCH #CCTV #Crime #BREAKING#Maharashtra In #Aurangabad auto driver #molested girl in moving auto,minor girl jumped from moving auto,#girlinjured
— Harish Deshmukh (@DeshmukhHarish9) November 16, 2022
After molesting the girl jumped from speeding #auto which was caught on CCTV #ACCIDENT pic.twitter.com/udGvgMgbry
''ಅಪ್ರಾಪ್ತ ವಿದ್ಯಾರ್ಥಿನಿ ಉಸ್ಮಾನ್‌ಪುರ ಪ್ರದೇಶದಿಂದ ಆಟೋರಿಕ್ಷಾದಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ಚಾಲಕ ಅಶ್ಲೀಲವಾಗಿ ಮಾತನಾಡಿ ಬಾಲಕಿಗೆ ಕಿರುಕುಳ ನೀಡಿದ್ದಾನೆ. ನಂತರ ಬಾಲಕಿಗೆ ಏನೋ ತಪ್ಪಾಗುತ್ತಿದೆ ಎಂದು ಅರ್ಥವಾಗಿದೆ. ನಂತರ ಅದೇ ಸಮಯದಲ್ಲಿ ಔರಂಗಾಬಾದ್‌ನ ಸಿಲ್ಲಿ ಖಾನಾ ಕಾಂಪ್ಲೆಕ್ಸ್ ಬಳಿ ಆಕೆ ಏಕಾಏಕಿ ಜಿಗಿದಿದ್ದಾಳೆ. ಚಲಿಸುತ್ತಿದ್ದ ಆಟೋದಿಂದ ಬಾಲಕಿಯ ತಲೆಗೆ ಪೆಟ್ಟು ಬಿದ್ದಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ'' ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಗಣಪತ್ ದಾರಾಡೆ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.











Click it and Unblock the Notifications