ರಾಮ ಜನ್ಮಭೂಮಿ ವಿವಾದ, ಕೋರ್ಟ್ ಹೊರಗೆ ಬಗೆಹರಿಸಿಕೊಳ್ಳಿ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರದಂದು ಮಹತ್ವದ ತೀರ್ಪು ನೀಡಿದ್ದು, ಕೋರ್ಟ್ ಹೊರಗಡೆ ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದೆ.
ನವದೆಹಲಿ, ಮಾರ್ಚ್ 21: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರದಂದು ಮಹತ್ವದ ತೀರ್ಪು ನೀಡಿದ್ದು, ಕೋರ್ಟ್ ಹೊರಗಡೆ ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದೆ. ರಾಮಜನ್ಮಭೂಮಿ ವಿವಾದದ ವಿಚಾರಣೆಯನ್ನು ಮುಂದೂಡಲಾಗಿದೆ.[ಮುಸ್ಲಿಮರಿಗೆ ಸ್ವಾಮಿ ನೀಡಿದ ಸಂಡೇ ಪ್ಯಾಕೇಜ್: 'ಲಾರ್ಡ್ ಕೃಷ್ಣ']
ಇದು ಸೂಕ್ಷ್ಮ ವಿಚಾರ, ಎರಡು ಕಡೆ ಅರ್ಜಿದಾರರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದು ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ಅಭಿಪ್ರಾಯಪಟ್ಟಿದ್ದಾರೆ.ಮುಂದಿನ ವಿಚಾರಣೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ.[ಅಯೋಧ್ಯಾ ದೇಗುಲಕ್ಕಾಗಿ ಸುಪ್ರೀಂಗೆ ಮೊರೆ ಹೊಕ್ಕ 'ಸ್ವಾಮಿ']

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು, ಈ ಬಗ್ಗೆ ಪ್ರತಿಕ್ರಿಯಿಸಿ ಹಲವಾರು ಬಾರಿ ಮಾತುಕತೆ ನಡೆಸಲಾಯಿತು. ಆದರೆ, ಮಾತುಕತೆ ವಿಫಲವಾಗಿದೆ. ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸಿಕೊಳ್ಳುವವರು ಬೇಕಿದ್ದಾರೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿರುವುದನ್ನು ಸ್ವಾಮಿ ಸ್ವಾಗತಿಸಿದ್ದಾರೆ.












Click it and Unblock the Notifications