ಗರಿಗೆದರಿದ ರಿಪಬ್ಲಿಕ್ ನ್ಯೂಸ್: ಕಾಂಗ್ರೆಸ್ ವಿರುದ್ದ ಅರ್ನಬ್ ಟ್ವೀಟ್ ಪ್ರವಾಹ

Posted By:
Subscribe to Oneindia Kannada
ನೇಷನ್ ವಾಂಟ್ಸ್ ಟು ನೋ ಎನ್ನುವ ಮೂಲಕ ಟೈಮ್ಸ್ ನೌ ವಾಹಿನಿಯ ಪ್ರೈಂ ಟೈಂ ಆವರಿಸಿಕೊಂಡಿದ್ದ ಜನಪ್ರಿಯ ಸುದ್ದಿ ನಿರೂಪಕ, ಪತ್ರಕರ್ತ ಅರ್ನಬ್ ಗೋಸ್ವಾಮಿ ಹೊಸ ಚಾನೆಲ್ ಶುರು ಮಾಡುತ್ತಿರುವುದು ಹಳೇ ಸುದ್ದಿ.

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಎಆರ್ಜಿ ಔಟ್ಲೈಯರ್ ಮೀಡಿಯಾ ಪ್ರೈ. ಲಿ ಮತ್ತು ಅರ್ನಬ್ ಗೋಸ್ವಾಮಿ ಸಹ ಸಂಸ್ಥಾಪಕರಾಗಿರುವ, ರಿಪಬ್ಲಿಕ್ ನ್ಯೂಸ್ ಸುದ್ದಿ ವಾಹಿನಿ ಇನ್ನೆರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಈ ಹಿಂದೆ ಟೈಮ್ಸ್ ನೌ ಸ್ಟುಡಿಯೋಗೆ ಅತಿಥಿಗಳನ್ನು ಚರ್ಚೆಗೆ ಕರೆಸಿ, ತಾನೇ ಮಾತನಾಡುತ್ತಿದ್ದ ಅರ್ನಬ್, ರಿಪಬ್ಲಿಕ್ ನ್ಯೂಸ್ ವಾಹಿನಿಯಲ್ಲಿ ಯಾವ ರೀತಿ ಟಿವಿ ಶೋ ನಡೆಸಿಕೊಳ್ಳಲಿದ್ದಾರೆ ಎನ್ನುವುದು ಕಾದು ನೋಡಬೇಕಾಗಿದೆ.

ಆದರೆ, ' ಗೇಂ ಹ್ಯಾಸ್ ಜಸ್ಟ್ ಬಿಗನ್' ಎನ್ನುವ ಟೈಟಲ್ ಹೊಂದಿರುವ ರಿಪಬ್ಲಿಕ್ ನ್ಯೂಸ್ ವಾಹಿನಿಯ ಅಧಿಕೃತ ಟ್ವಿಟ್ಟರ್ ಅಕೌಂಟ್ ಮೂಲಕ ಈಗಾಗಲೇ, ಟ್ವೀಟ್ ಗಳ ಸರಮಾಲೆಯೇ ಹರಿದು ಬರುತ್ತಿದೆ.

ಇಸ್ರೋ, ಸುಬ್ರಮಣಿಯನ್ ಸ್ವಾಮಿಗೆ ಸಂಬಂಧ ಪಟ್ಟ ವಿಷಯದ ಜೊತೆಗೆ, ಕಾಂಗ್ರೆಸ್ ವಿರುದ್ದದ ರಿಪಬ್ಲಿಕ್ ನ್ಯೂಸ್ ವಾಹಿನಿಯ ಕೆಲವೊಂದು ಟ್ವೀಟ್ ಸ್ಯಾಂಪಲ್, ಮುಂದೆ ಓದಿ..

ಪಿವಿ ನರಸಿಂಹರಾವ್ ಮೃತ ದೇಹಕ್ಕೆ ಸೋನಿಯಾ ಮಾಡಿದ ಅವಮಾನ

ದಿವಂಗತ ಪ್ರಧಾನಿ ಪಿ ವಿ ನರಸಿಂಹ ರಾವ್ ಅವರ ಮೃತ ದೇಹ ಹೈದರಾಬಾದಿಗೆ ಹೋಗುವ ಮುನ್ನ, ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸೋನಿಯಾ ಮಾಡಿದ ಅವಮಾನ.

ದೇಶಕ್ಕೆ ಬೈಬಲ್ ಬೇಕಾಗಿಲ್ಲ

ಶಾಲೆಯಲ್ಲಿ ಬೈಬಲ್ ವಿತರಿಸುತ್ತಿರುವುದು, ಭಾರತಕ್ಕೆ ಬೈಬಲ್ ಬೇಕಾಗಿಲ್ಲ, ಬೇಕಾಗಿರುವುದು ಶಾಲಾ ಪುಸ್ತಕ.

ಪಶ್ಚಿಮಬಂಗಾಳ ಸರಕಾರದ ಬಜೆಟ್

ಪಶ್ಚಿಮಬಂಗಾಳ ಸರಕಾರದ 2017-18ರ ಬಜೆಟ್ ನೋಡಿ. 2815 ಕೋಟಿ ರೂಪಾಯಿ ಮದರಸಗಳಿಗೆ, 2154 ಕೈಗಾರಿಕೆಗೆ. ಮದರಸ ಮುಖ್ಯವೋ, ಕೈಗಾರಿಕೆ ಅಭಿವೃದ್ದಿಯಾಗುವುದು ಮುಖ್ಯನೋ?

ನಾಸಾ ಮತ್ತು ಇಸ್ರೋ

ಇಸ್ರೋದ ನಲವತ್ತು ವರ್ಷದ ಖರ್ಚುವೆಚ್ಚ, ನಾಸಾದ ಒಂದು ವರ್ಷದ ಖರ್ಚಿನ ಅರ್ಧಕ್ಕಿಂತಲೂ ಕಮ್ಮಿ.

ಸುಬ್ರಮಣಿಯನ್ ಸ್ವಾಮಿ, ನೈಜ ಹಿಂದೂ

ಈಗಿನ ಕಾಲದ ನಿಜವಾದ ಹಿಂದೂ ಎಂದರೆ ಅದು ಸುಬ್ರಮಣಿಯನ್ ಸ್ವಾಮಿ.

ಮಾರ್ಪ್ ಮಾಡಿದ ಇಮೇಜ್

ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಮಾರ್ಪ್ ಮಾಡಿರುವ ಇಮೇಜನ್ನು ಶೇರ್ ಮಾಡಿರುವುದು.

1984ರ ಖಾದಿ ಇಂಡಿಯಾದ ಕವರ್ ಪೇಜ್

1984ರ ಖಾದಿ ಇಂಡಿಯಾದ ಕವರ್ ಪೇಜ್ ನಲ್ಲಿ ಯಾರ ಇಮೇಜೂ ಇರಲಿಲ್ಲ, ನಂತರದ ಕ್ಯಾಲೆಂಡರ್ ನಲ್ಲಿ ಇಂದಿರಾ ಗಾಂಧಿ ಚಿತ್ರ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Republic News TV said to be launched in March/April 2017. Arnab Goswami is Co-founder and MD of this news channel. Some of the tweet samples published from Republic News handle.
Please Wait while comments are loading...