ಪ್ರಿಯಾಂಕ ಗಾಂಧಿ ಸಾಲುಸಾಲು ಟ್ವೀಟ್ : ರಾಜಕೀಯ ಎಂಟ್ರಿಯ ಸೂಚನೆ?

Posted By:
Subscribe to Oneindia Kannada
   ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ವಿರುದ್ಧ ಮಾಡಿರೋ ಟ್ವೀಟ್ ನೋಡಿದ್ರೆ ಏನ್ ಅರ್ಥ? | Oneindia Kannada

   ಮೊನ್ನೆ ಮೊನ್ನೆ ಈಶಾನ್ಯ ರಾಜ್ಯದಲ್ಲೂ ಕಾಂಗ್ರೆಸ್ ಸೋಲು ಅನುಭವಿಸಿದಾಗ, ಪ್ರಿಯಾಂಕ ಗಾಂಧಿ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಇಳಿದರೆನೇ, ಕಾಂಗ್ರೆಸ್ ಒಂದು ದಾರಿಗೆ ಬರಲು ಸಾಧ್ಯ ಎನ್ನುವ ಹಿಂದಿನ ಮಾತು ಏನಿತ್ತೋ ಅದು ಮತ್ತೆ ಚಾಲನೆಗೆ ಬಂದಿತ್ತು.

   ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರಚಾರಕ್ಕೆ ಹೋಗುತ್ತಾರೋ, ಅಲ್ಲೆಲ್ಲಾ ಕಾಂಗ್ರೆಸ್ಸಿಗೆ ಸೋಲು ಕಟ್ಟಿಟ್ಟಬುತ್ತಿ ಎಂದು ಬಿಜೆಪಿಯವರು ಅಣಕವಾಡುತ್ತಿರುವುದು ಹೊಸದೇನಲ್ಲ. ಗುಜರಾತ್ ನಲ್ಲಿ ರಾಹುಲ್ ರಾಜಕೀಯ ಪ್ರಚಾರ ಮಾಡಿದಂತೆ, ಕರ್ನಾಟಕದಲ್ಲಿ ಹೆಚ್ಚುಹೆಚ್ಚು ಅವರು ಪ್ರಚಾರಕ್ಕೆ ಬರದಿದ್ದರೆ ಸಾಕು ಎನ್ನುವ ನಿಲುವನ್ನು ಒಳಗೊಳಗೆ ರಾಜ್ಯ ಕಾಂಗ್ರೆಸ್ಸಿಗರು ಹೊಂದಿದ್ದಾರೋ, ಗೊತ್ತಿಲ್ಲಾ..

   ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ಈ ಎಲ್ಲಾ ಬೆಳವಣಿಗೆಗಳ ನಡುವೆ, ಗಾಂಧಿ ಕುಟುಂದ ಕುಡಿ ಪ್ರಿಯಾಂಕ, ಬಿಜೆಪಿಯವನ್ನು ಟೀಕಿಸುವ, ಕಾಂಗ್ರೆಸ್ ಅನ್ನು ಸಮರ್ಥಿಸಿಕೊಳ್ಳುವ ಟ್ವೀಟುಗಳನ್ನು ಮಾಡುತ್ತಿರುವುದನ್ನು ನೋಡಿದರೆ, ಪ್ರಿಯಾಂಕ, ಪಕ್ಷಕ್ಕಾಗಿ ಪ್ರಚಾರಕ್ಕಿಳಿಯುವ ದಿನ ದೂರಯಿಲ್ಲ ಎಂದೇ ಹೇಳಲಾಗುತ್ತಿದೆ.

   ಪ್ರಿಯಾಂಕ ಮಾಡಿರುವ ಟ್ವೀಟುಗಳಲ್ಲಿ ಸಿದ್ದರಾಮಯ್ಯನವರನ್ನು 'ಜಿಹಾದಿ', ಕಾರ್ಕಳದ ಶಾಸಕ ಸುನಿಲ್ ಕುಮಾರ್ 'ರಾಮ ಮತ್ತು ಅಲ್ಲಾ' ನಡುವಿನ ಫೈಟ್ ಎನ್ನುವ ಹೇಳಿಕೆಯನ್ನು ಉಲ್ಲೇಖಿಸಿ ಪ್ರಿಯಾಂಕ ಟ್ವೀಟ್ ಮಾಡಿರುವುದು ಗಮನಿಸಬೇಕಾದ ಅಂಶ.

   'ಮುಂದಿನ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಸೋನಿಯಾ ಸ್ಪರ್ಧೆ'

   ಅಜ್ಜಿ ಇಂದಿರಾ ಗಾಂಧಿಯನ್ನು ಹೋಲುವ ಪ್ರಿಯಾಂಕ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಾಯಿ (ಸೋನಿಯಾ ಗಾಂಧಿ, ರಾಯ್ ಬರೇಲಿ) ಮತ್ತು ಸಹೋದರನ (ರಾಹುಲ್ ಗಾಂಧಿ, ಅಮೇಠಿ) ಪರವಾಗಿ ಪ್ರಚಾರ ಮಾಡಿದ್ದನ್ನು ಬಿಟ್ಟರೆ, ಕಾಂಗ್ರೆಸ್ ಪರ ಕ್ಯಾಂಪೇನ್ ಮಾಡಿರಲಿಲ್ಲ. ಪ್ರಿಯಾಂಕ ಮಾಡಿರುವ ಕೆಲವೊಂದು ಆಯ್ದ ಟ್ವೀಟುಗಳು, ಮುಂದೆ ಓದಿ..

   46.4 ಸಾವಿರ ಫಾಲೋವರ್ಸ್ ಹೊಂದಿರುವ ಈ ಅಕೌಂಟ್

   46.4 ಸಾವಿರ ಫಾಲೋವರ್ಸ್ ಹೊಂದಿರುವ ಈ ಅಕೌಂಟ್

   @WithPGV ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡುವ ಪ್ರಿಯಾಂಕ, 46.4 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. "This Fanpage has been managed by Fans,supporter and Followers of Smt Priyanka Gandhi Vadra" ಎಂದು ಅಕೌಂಟಿಗೆ ಟಿಪ್ಪಣಿ ನೀಡಲಾಗಿದೆ.

   ಮಗಳ ಮದುವೆಗೆ 500 ಕೋಟಿ ರು. ಸುರಿದ ರೆಡ್ಡಿ ವಿರುದ್ಧ ತನಿಖೆ ಇಲ್ಲವೇ?

   ಬಿಜೆಪಿಯವರು ತಮ್ಮದೇ ಆದ ನೆರಳನ್ನು ನೋಡಿ ಭಯಪಡುತ್ತಿದ್ದಾರೆ

   ಬಿಜೆಪಿಯವರು ತಮ್ಮದೇ ಆದ ನೆರಳನ್ನು ನೋಡಿ ಭಯಪಡುತ್ತಿದ್ದಾರೆ

   ಬಿಜೆಪಿಯವರು ಭಾರತದ ರಾಜಕೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ನೋಡಿ ಹೆದರುತ್ತಿದ್ದಾರೆ. ಈಗ ತಮ್ಮದೇ ಆದ ನೆರಳುಗಳನ್ನೂ ನೋಡಿ ಸಹಾ ಅವರು ಭಯ ಪಡಲಾರಂಭಿಸಿದ್ದಾರೆ ಎನ್ನುವ ಪ್ರಿಯಾಂಕ ಗಾಂಧಿ ಟ್ವೀಟ್.

   ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕ ಎಂಟ್ರಿಯ ಸೂಚನೆಯೇ?

   ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕ ಎಂಟ್ರಿಯ ಸೂಚನೆಯೇ?

   ಚುನಾವಣೆ ಹತ್ತಿರಬರುತ್ತಿರುವುದರಿಂದ ಮತ್ತು ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದಿಲ್ಲವೋ ಅಲ್ಲಿ ಹಿಂದೂಗಳಿಗೆ ಭಯವಂತೆ. ತಮ್ಮ ಸಿದ್ದಾಂತಗಳಿಗೆ ವಿರುದ್ದವಾದ ಪಕ್ಷದ ಜೊತೆ ಕಾಶ್ಮೀರದಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ. ರಾಮರಾಜ್ಯ ಅಷ್ಟೇ.. ನಾಚಿಕೆಯಾಗಬೇಕು ಎನ್ನುವ ಟ್ವೀಟ್. ಜಿಹಾದಿ ಮುಕ್ತ ಕರ್ನಾಟಕ ಎನ್ನುವ ಹ್ಯಾಷ್ ಟ್ಯಾಗಿಗೆ ಈ ರೀತಿಯ ಪ್ರತ್ಯುತ್ತರ ಪ್ರಿಯಾಂಕ ಅವರಿಂದ ಬಂದಿತ್ತು.

   ಸಿ ಫಾರ್ ಚೋರ್, ಚಾಚಾ ನೆಹರೂ ಎಂದು ಶಾಲೆಯಲ್ಲಿ ಪಾಠ?

   ಸಿ ಫಾರ್ ಚೋರ್, ಚಾಚಾ ನೆಹರೂ ಎಂದು ಶಾಲೆಯಲ್ಲಿ ಪಾಠ?

   ಈ ರೀತಿಯ ವಿದ್ಯಾಭ್ಯಾಸ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿದೆ, ಇದು ಇಂದಿನ ಮಕ್ಕಳಿಗೆ ಬಿಜೆಪಿ ಕಲಿಸುತ್ತಿರುವ ಪಾಠ! ಭಾರತೀಯರು ಭಾರತೀಯರಲ್ಲಿ ಮನುಷ್ಯರನ್ನು ನೋಡುತ್ತಾರೆ. ಇದನ್ನು ಅವರು ತಮ್ಮ ಸ್ವಂತ ಕಣ್ಣುಗಳೊಂದಿಗೆ ವೀಕ್ಷಿಸಬಹುದು. ಸಿ ಫಾರ್ ಚೋರ್, ಚಾಚಾ ನೆಹರೂ ಎಂದು ಜಾರ್ಖಂಡ್ ರಾಜ್ಯದ ಹಳ್ಳಿಯ ಶಾಲೆಯೊಂದರಲ್ಲಿ ಪಾಠ ಮಾಡಲಾಗುತ್ತಿತ್ತು ಎನ್ನುವ ಸುದ್ದಿಗೆ ಪ್ರಿಯಾಂಕ ನೀಡಿರುವ ಉತ್ತರ.

   ಜನಸಾಮಾನ್ಯರ ಖಾಸಗಿತನಕ್ಕೆ ಧಕ್ಕೆ ತಂದ ಮೋದಿ

   ಜನಸಾಮಾನ್ಯರ ಖಾಸಗಿತನಕ್ಕೆ ಧಕ್ಕೆ ತಂದ ಮೋದಿ

   ಯುಪಿಎ ಸರಕಾರ ಆಧಾರ್ ಯೋಜನೆ ಜಾರಿಗೆ ತಂದಾಗ, ಮೋದಿಗೆ ಇದೊಂದು ಯೂಸ್ ಲೆಸ್ ಯೋಜನೆಯಾಗಿತ್ತು, ಈಗ ಸ್ಕೀಂಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿ ಜನಸಾಮಾನ್ಯರ ಖಾಸಗಿತನಕ್ಕೆ ಧಕ್ಕೆ ತರುತ್ತಿದ್ದಾರೆ - ಪ್ರಿಯಾಂಕ ಗಾಂಧಿ ವಾದ್ರಾ ಟ್ವೀಟ್.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Series of tweets against BJP from Priyanka Gandhi Vadra from @WithPGV account. Is it shows her entry into politics? In her tweets, Priyanka criticized BJP in various issues like Karnataka election campaign war of words, Aadhaar, Nehru.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ