• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಸ್ಲಿಂ ದೇಶಗಳಿಂದ ಮೋದಿಗೆ ಪ್ರಶಸ್ತಿಯ ಸರಮಾಲೆ: ಪಾಕಿಸ್ತಾನಕ್ಕೆ 'Tight Slap' ಅಂದ್ರೆ ಇದೇನಾ?

|

ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಅವಧಿಯಲ್ಲಿ ವಿದೇಶ ಪ್ರವಾಸಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದವರು. ಎರಡನೇ ಅವಧಿಯಲ್ಲೂ ಅವರ ಫಾರಿನ್ ಟ್ರಿಪ್ ಮುಂದುವರಿದಿದೆ.

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಅಂದರೆ ಕಳೆದ 5ವರ್ಷಗಳಲ್ಲಿ ಮುಸ್ಲಿಂ ದೇಶಗಳಿಂದ ಹಲವು ಪ್ರಶಸ್ತಿಗಳು ಬಂದಿರುವುದು, ಪಾಕಿಸ್ತಾನದ ಕಣ್ಣು ಕಾಯಿಸಿದೆ.

ಇಬ್ಬರ ಬಳಿಯೂ ಅಣ್ವಸ್ತ್ರವಿದೆ, ನೆನಪಿರಲಿ: ಅಬ್ಬರಿಸಿದ ಇಮ್ರಾನ್ ಖಾನ್

ವಿಶ್ವದ ಹಲವು ರಾಷ್ಟ್ರಗಳ ಎಚ್ಚರಿಕೆಯ ನಡುವೆಯೂ, ಉಗ್ರರಿಗೆ ನೆಲೆ ನೀಡಿರುವ ಪಾಕಿಸ್ತಾನವನ್ನು ಏಕಾಂಗಿಯಾಗಿಯನ್ನಾಗಿ ಮಾಡಬೇಕು ಎನ್ನುವ ಭಾರತದ ಪ್ರಯತ್ನಕ್ಕೆ ಇದು ಬಲ ನೀಡಿದಂತೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಸದ್ಯ, ಹಿಸ್ಟರಿ ಮೇಷ್ಟ್ರಾಗಲಿಲ್ಲ! ಇಮ್ರಾನ್ ಗೆ ಆನಂದ್ ಮಹೀಂದ್ರಾ ಮಂಗಳಾರತಿ

ಗಮನಿಸಬೇಕಾದ ಅಂಶವೇನಂದರೆ, ಆರ್ಟಿಕಲ್ 370 ರದ್ದು ಮಾಡಿಲ್ಲವೆಂದರೆ, ವಿಶ್ವದ ಇತರ ರಾಷ್ಟ್ರಗಳ ಮುಸ್ಲಿಮರು ಭಾರತದ ವಿರುದ್ದ ದಂಗೆ ಏಳುತ್ತಾರೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಆದರೆ, ಮುಸ್ಲಿಂ ರಾಷ್ಟ್ರಗಳೇ ಮೋದಿಗೆ ಆದ್ಯತೆಯ ಮೇಲೆ ಪ್ರಶಸ್ತಿಯನ್ನು ನೀಡುತ್ತಿರುವುದು, ಪಾಕಿಸ್ತಾನಕ್ಕೆ ಒಂದು ರೀತಿಯಲ್ಲಿ ಮುಖಭಂಗವೇ ಸರಿ. ಇದುವರೆಗೆ ಮೋದಿಗೆ, ಮುಸ್ಲಿಂ ದೇಶಗಳಿಂದ ಬಂದಿರುವ ಪ್ರಶಸ್ತಿ ಎಷ್ಟು ಗೊತ್ತಾ?

ಕಿಂಗ್ ಅಬ್ದುಲ್ಲಾ ಅಜೀಜ್ ಶಾ

ಕಿಂಗ್ ಅಬ್ದುಲ್ಲಾ ಅಜೀಜ್ ಶಾ

ಪ್ರಶಸ್ತಿ: ಕಿಂಗ್ ಅಬ್ದುಲ್ಲಾ ಅಜೀಜ್ ಶಾ

ದೇಶ: ಸೌದಿ ಅರೆಬಿಯಾ

ಪ್ರಶಸ್ತಿ ನೀಡಿದ ದಿನಾಂಕ: ಏಪ್ರಿಲ್ 3, 2016

ಪ್ರಶಸ್ತಿ ನೀಡಿದವರು: ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್

ಗೌರವ ಸಂದಿದ್ದು : ಎರಡು ದೇಶಗಳ ನಡುವಿನ ಸಂಬಂಧ ವೃದ್ದಿಗಾಗಿ

ಆಮೀರ್ ಅಮಾನುಲ್ಲಾ ಖಾನ್

ಆಮೀರ್ ಅಮಾನುಲ್ಲಾ ಖಾನ್

ಪ್ರಶಸ್ತಿ: ಆಮೀರ್ ಅಮಾನುಲ್ಲಾ ಖಾನ್

ದೇಶ: ಅಫ್ಘಾನಿಸ್ತಾನ

ಪ್ರಶಸ್ತಿ ನೀಡಿದ ದಿನಾಂಕ: ಜೂನ್ 4, 2016

ಪ್ರಶಸ್ತಿ ನೀಡಿದವರು: ದೇಶದ ಅಧ್ಯಕ್ಷ ಅಶ್ರಫ್ ಘನಿ

ಗೌರವ ಸಂದಿದ್ದು : ದ್ವಿಪಕ್ಷೀಯ ಸಂಬಂಧ ವೃದ್ದಿಗಾಗಿ

ಗ್ರಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಪ್ ಪ್ಯಾಲೆಸ್ತೇನ್

ಗ್ರಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಪ್ ಪ್ಯಾಲೆಸ್ತೇನ್

ಪ್ರಶಸ್ತಿ: ಗ್ರಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ತೇನ್

ದೇಶ: ಪ್ಯಾಲೆಸ್ತೇನ್

ಪ್ರಶಸ್ತಿ ನೀಡಿದ ದಿನಾಂಕ: ಫೆಬ್ರವರಿ 10, 2018

ಪ್ರಶಸ್ತಿ ನೀಡಿದವರು: ದೇಶದ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್

ಗೌರವ ಸಂದಿದ್ದು : ಭಾರತ ಮತ್ತು ಪ್ಯಾಲೆಸ್ತೇನ್ ನಡುವಿನ ಸಂಬಂಧವನ್ನು ಉತ್ತೇಜಿಸಲು ಅವರ ಪ್ರಮುಖ ಕೊಡುಗೆಗಾಗಿ

ರೂಲ್ ಆಫ್ ನಿಶಾನ್ ಐಜಾದುದ್ದೀನ್

ರೂಲ್ ಆಫ್ ನಿಶಾನ್ ಐಜಾದುದ್ದೀನ್

ಪ್ರಶಸ್ತಿ: ರೂಲ್ ಆಫ್ ನಿಶಾನ್ ಐಜಾದುದ್ದೀನ್

ದೇಶ: ಮಾಲ್ಡೀವ್ಸ್

ಪ್ರಶಸ್ತಿ ನೀಡಿದ ದಿನಾಂಕ: ಜೂನ್ 10, 2019

ಪ್ರಶಸ್ತಿ ನೀಡಿದವರು: ದೇಶದ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್

ಗೌರವ ಸಂದಿದ್ದು : ಭಾರತ-ಮಾಲ್ಡೀವ್ಸ್ ಸಂಬಂಧವನ್ನು ಬಲಪಡಿಸಿದ್ದು ಮತ್ತು ಮಾಲ್ಡೀವ್ಸ್ ದೇಶಕ್ಕೆ ಆಪ್ತರಾಗಿದ್ದಕ್ಕಾಗಿ

ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೇಸಾನ್ಸ್

ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೇಸಾನ್ಸ್

ಪ್ರಶಸ್ತಿ: ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೇಸಾನ್ಸ್

ದೇಶ: ಬಹ್ರೇನ್

ಪ್ರಶಸ್ತಿ ನೀಡಿದ ದಿನಾಂಕ: ಆಗಸ್ಟ್ 24, 2019

ಪ್ರಶಸ್ತಿ ನೀಡಿದವರು: ಬಹ್ರೇನ್ ರಾಜ ಹಮದ್ ಬಿನ್ ಇಸಾ ಬಿನ್ ಸಲ್ಮಾನ್ ಅಲ್ ಖಲೀಫಾ

ಗೌರವ ಸಂದಿದ್ದು : ಗಲ್ಫ್ ರಾಷ್ಟ್ರದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಪ್ರಯತ್ನಕ್ಕಾಗಿ

ಆರ್ಡರ್ ಆಫ್ ಜಯೇದ್

ಆರ್ಡರ್ ಆಫ್ ಜಯೇದ್

ಪ್ರಶಸ್ತಿ: ಆರ್ಡರ್ ಆಫ್ ಜಯೇದ್

ದೇಶ: ಯುಎಇ

ಪ್ರಶಸ್ತಿ ನೀಡಿದ ದಿನಾಂಕ: ಆಗಸ್ಟ್ 24, 2019

ಪ್ರಶಸ್ತಿ ನೀಡಿದವರು: ಅಬುದಾಬಿ ರಾಜ ಶೇಖ್ ಮೊಹಮ್ಮದ್ ಬಿನ್ ಜಯೇದ್ ಅಲ್ ನಹ್ಯಾನ್

ಗೌರವ ಸಂದಿದ್ದು : ಉಭಯ ದೇಶಗಳ ನಡುವಿನ ಸಂಬಂಧ ಬಲಪಡಿಸುವಲ್ಲಿ ಪ್ರಮುಖ ಪಾತ್ರಕ್ಕಾಗಿ

English summary
Awards to Indian PM Narendra Modi from Muslim countries in over five years, a tight slap for Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X