ಫ್ರೆಂಚ್ ವಿನ್ಯಾಸದ ಜಲಾಂತರ್ಗಾಮಿಗಳಿಂದ ರಹಸ್ಯ ಸೋರಿಕೆ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 24: ಭಾರತೀಯ ನೌಕಾಪಡೆಗೆ ಸೇರಿರುವ ಫ್ರೆಂಚ್ ಕಂಪನಿ ನಿರ್ಮಿತ ಆರು ಸ್ಕಾರ್ಪೇನ್ ದರ್ಜೆಯ ಜಲಾಂತರ್ಗಾಮಿಗಳ ತಾಂತ್ರಿಕ ಮಾಹಿತಿಗಳು ಸೋರಿಕೆಯಾಗಿರುವ ಸುದ್ದಿ ತಿಳಿದಿರಬಹುದು. ಈ ಕುರಿತಂತೆ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.

ಫ್ರೆಂಚ್ ಮೂಲದ ಹಡಗು ನಿರ್ಮಾಣ ಸಂಸ್ಥೆ ಡಿಸಿಎನ್ ಎಸ್ ನ ಅತಿ ಸೂಕ್ಷ್ಮ ರಹಸ್ಯ ದಾಖಲೆಗಳು ಸೋರಿಕೆಯಾಗಿದ್ದು ಭಾರತದ ಭದ್ರತೆಗೆ ಭಾರಿ ಪ್ರಮಾಣದ ಅಪಾಯ ಉಂಟಾಗುವ ಭೀತಿ ವ್ಯಕ್ತವಾಗಿದೆ.

ಆದರೆ, ಡಿಸಿಎನ್ಎನ್ ಗೆ ಸಂಬಂಧಿಸಿದ ರಹಸ್ಯಗಳಿರುವ ಸುಮಾರು 22,400 ಪುಟಗಳು ಸೋರಿಕೆಯಾಗಿವೆ ಎಂದು 'ದಿ ಆಸ್ಟ್ರೇಲಿಯನ್' ನಲ್ಲಿ ಪ್ರಕಟವಾಗಿರುವ ವರದಿ ತಿಳಿಸಿದೆ. ಸೋರಿಕೆಯಾಗಿರುವ ವರ್ಗೀಕೃತ ದಾಖಲೆಗಳಲ್ಲಿ 'ರಿಸ್ಟ್ರಿಕ್ಟೆಡ್ ಸ್ಕಾರ್ಪೇನ್ ಇಂಡಿಯಾ' ಎಂಬ ಗುರುತುಗಳಿರುವುದು ಆತಂಕ ಹೆಚ್ಚಿಸಿದೆ.

Sensitive data on Scorpene submarines leaked, Parrikar seeks report


ಒಂದು ವೇಳೆ ಈ ರಹಸ್ಯ ದಾಖಲೆಗಳು ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಅಥವಾ ಚೀನಾ ಕೈಸೇರಿದರೆ ದೇಶದ ಭದ್ರತೆಗೆ ಭಾರಿ ಗಂಡಾಂತರ ಉಂಟಾಗಬಹುದು. ಹ್ಯಾಕ್ ಆಗಿರುವ ದಾಖಲೆಗಳಲ್ಲಿ ಭಾರತದ 6 ನೂತನ ಜಲಾಂತರ್ಗಾಮಿಗಳ ರಹಸ್ಯ ಕಾರ್ಯವಿಧಾನ ಸಾಮರ್ಥ್ಯ ವಿವರಗಳನ್ನು ಒಳಗೊಂಡಿದೆ ಎಂಬ ಸುದ್ದಿಯಿದೆ.

ಅಯಸ್ಕಾಂತ, ವಿದ್ಯುತ್ ಅಯಸ್ಕಾಂತ, ಇನ್​ಫ್ರಾ-ರೆಡ್ ಮಾಹಿತಿ, ಜಲಾಂತರ್ಗಾಮಿಯ ನೌಕಾ ಸ್ಪೋಟಕ ವ್ಯವಸ್ಥೆ ಮತ್ತು ದಾಳಿ ವ್ಯವಸ್ಥೆಗೆ ಸಂಬಂಧ ಪಟ್ಟ ಸೂಕ್ಷ್ಮ ಮಾಹಿತಿಗಳೂ ಸೋರಿಕೆಯಾದ ಮಾಹಿತಿಯಲ್ಲಿ ಸೇರಿವೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sensitive documents detailing the technical and stealth capabilities of India's Scoprene submarines designed by French shipbuilder DCNS have been leaked, with Defence Minister Manohar Parrikar seeking a report from the Navy chief on the matter.
Please Wait while comments are loading...