ಸೆಕ್ಸ್ ಸಿಡಿ ಹಗರಣದ ಆರೋಪಿ ಈಗ ಸಿಎಂಗೆ ರಾಜಕೀಯ ಸಲಹೆಗಾರ

ರಾಯ್ ಪುರ್, ಡಿಸೆಂಬರ್ 21: ಛತ್ತೀಸ್ ಗಡದಲ್ಲಿ 15 ವರ್ಷಗಳ ನಂತರ ಅಧಿಕಾರ ಸ್ಥಾಪಿಸುವ ಜನಾದೇಶ ಪಡೆದುಕೊಂಡ ಕಾಂಗ್ರೆಸ್ ತನ್ನ ರಾಜ್ಯ ಭಾರ ಆರಂಭಿಸಿದೆ.

90 ಸ್ಥಾನಗಳ ವಿಧಾನಸಭೆಯಲ್ಲಿ 68 ಸ್ಥಾನಗಳನ್ನು ಗಳಿಸಿ ಅಧಿಕಾರ ಸ್ಥಾಪನೆ ಮಾಡಿರುವ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ರಾಜಕೀಯ ಸಲಹೆಗಾರರಾಗಿ ವಿನೋದ್ ವರ್ಮ ಅವರನ್ನು ನೇಮಿಸಲಾಗಿದೆ.

ಸಿಎಂ ಭೂಪೇಶ್ ಅವರನ್ನು ಕಾಡಿದ್ದ 'ಸೆಕ್ಸ್ ಸಿಡಿ' ಹಗರಣದಲ್ಲಿ ಸಹ ಆರೋಪಿಯಾಗಿದ್ದ ಹಿರಿಯ ಪತ್ರಕರ್ತ ವಿನೋದ್ ವರ್ಮ ಅವರನ್ನು ರಾಜಕೀಯ ಸಲಹೆಗಾರರಾಗಿ ನೇಮಿಸಿರುವುದು ಈಗ ಚರ್ಚಾರ್ಹವಾಗಿದೆ. ರುಚಿರ್ ಗರ್ಗ್ ಅವರನ್ನು ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಲಾಗಿದೆ.

Senior Journalist, Linked To Sex CD Case, Named Chhattisgarh CM Political Advisor

ಸೆಕ್ಸ್ ಸಿಡಿ ಹಗರಣಕ್ಕೂ ನಮಗೂ ಸಂಬಂಧವಿಲ್ಲ ಎಂದು ಸಿಎಂ ಭೂಪೇಶ್ ಹಾಗೂ ವಿನೋದ್ ಅವರು ಸ್ಪಷ್ಟಪಡಿಸಿದ್ದಾರೆ.

ಜಲ ಸಂಪನ್ಮೂಲ ಸಚಿವ ರಾಜೇಶ್ ಮುನಾತ್ ಅವರಿಗೆ ಸೇರಿದೆ ಎನ್ನಲಾದ ನಕಲಿ ಪೋರ್ನೊಗ್ರಾಫಿಕ್ ಸಿಡಿಯನ್ನು ಹಂಚಿದ ಆರೋಪವನ್ನು ಛತ್ತೀಸ್ ಗಡ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಹೊತ್ತುಕೊಂಡಿದ್ದರು.

ಭೂಪೇಶ್ ವಿರುದ್ಧ ಸಿಬಿಐ ತಂಡವು ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯದಲ್ಲಿ ಖುದ್ದು ವಾದಿಸಿದ ಭೂಪೇಶ್ ಅವರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+