ಉಗ್ರರ ವಿರುದ್ಧ ಹೋರಾಡಲು ಗೋರಕ್ಷಕರನ್ನು ಕಳುಹಿಸಿ - ಉದ್ಧವ್ ಠಾಕ್ರೆ

Subscribe to Oneindia Kannada

ಮುಂಬೈ , ಜುಲೈ 12: ಅಮರನಾಥ ಭಕ್ತರ ಮೇಲೆ ಉಗ್ರರ ದಾಳಿಯಾಗುತ್ತಿದ್ದಂತೆ ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, 'ಗೋ ರಕ್ಷಕರನ್ನು ಉಗ್ರರ ವಿರುದ್ಧ ಹೋರಾಡಲು ಕಳಹಿಸಿ,' ಎಂದು ವಾಗ್ದಾಳಿ ನಡೆಸಿದ್ದಾರೆ.

"ಅವರು (ಬಿಜೆಪಿ) ಕ್ರೀಡೆ ಮತ್ತು ಸಂಸ್ಕೃತಿಯನ್ನು ರಾಜಕೀಯಕ್ಕೆ ತರಬೇಡಿ ಎಂದು ಹೇಳುತ್ತಾರೆ. ಇವತ್ತು ಉಗ್ರರ ದಾಳಿ ರೂಪದಲ್ಲಿ ಸಂಸ್ಕೃತಿ ಮತ್ತು ರಾಜಕೀಯ ಜತೆಯಾಗಿದೆ. ಅವರ (ಉಗ್ರರ) ಬ್ಯಾಗಿನಲ್ಲಿ ಶಸ್ತ್ರಾಸ್ತ್ರಗಳ ಬದಲು ಗೋ ಮಾಂಸ ಇದ್ದರೆ ಈ ಉಗ್ರರನ್ನೆಲ್ಲಾ ಇವತ್ತು ಬದುಕಲು ಬಿಡುತ್ತಿದ್ದರಾ?" ಎಂದು ಕಿಡಿಕಾರಿದ್ದಾರೆ.

Send 'gau rakshaks' to fight terrorists, Uddhav slams BJP

"ಗೋ ರಕ್ಷರ ಉಪಟಳ ಇವತ್ತು ದೇಶದಲ್ಲಿ ಹೆಚ್ಚಾಗುತ್ತಿದೆ. ಉಗ್ರರ ವಿರುದ್ಧ ಹೋರಾಡಲು ನೀವು ಗೋರಕ್ಷಕರನ್ನು ಯಾಕೆ ಕಳುಹಿಸಬಾರದು?," ಎಂದು ತಮ್ಮ ದೀರ್ಘ ಕಾಲದ ಮಿತ್ರ ಪಕ್ಷ ಬಿಜೆಪಿಯತ್ತ ಉದ್ಧವ್ ಬಾಂಬ್ ಎಸೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Taking a dig at the BJP over the terror attack on Amarnath pilgrims, Shiv Sena president Uddhav Thackeray has asked the senior ally to send 'gau rakshaks' to fight terrorists in the Valley.
Please Wait while comments are loading...