ವಾಟ್ಸಾಪ್, ಟೆಲಿಗ್ರಾಮ್ ಗಳೂ ಸೇಫ್ ಅಲ್ಲ: ಸಮೀಕ್ಷೆ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 16: ಸ್ಮಾರ್ಟ್ ಫೋನ್ ಗಳೊಂದಿಗಿನ ನಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಅಭಿಭಾಜ್ಯ ಅಂಗವಾಗಿರುವ ವ್ಯಾಟ್ಸಾಪ್ ಹಾಗೂ ಟೆಲಿಗ್ರಾಮ್ ಆ್ಯಪ್ ಗಳು ಸುರಕ್ಷಿತವಾಗಿಲ್ಲ. ಅವುಗಳಲ್ಲಿ ನಾವು ಏನಾದರೂ ಗುರುತವಾದ ಮಾಹಿತಿಯನ್ನು ಹಂಚಿಕೊಂಡರೆ, ಅವನ್ನು ಹ್ಯಾಕರ್ ಕದಿಯುವ ಸಾಧ್ಯತೆಗಳಿವೆ ಎಂದು ಆ್ಯಪ್ ಗಳ ಸಂಶೋಧನಾ ಸಂಸ್ಥೆಯೊಂದು ಹೇಳಿದೆ.

ಚೆಕ್ ಪಾಯಿಂಟ್ ಸಾಫ್ಟ್ ವೇರ್ ಟೆಕ್ನಾಲಜೀಸ್ ಎಂಬ ಸಂಸ್ಥೆಯು ಈ ವಿಚಾರವನ್ನು ಬಹಿರಂಗಗೊಳಿಸಿದೆ. ಸಾಮಾನ್ಯವಾಗಿ ವ್ಯಾಟ್ಸಾಪ್ ಹಾಗೂ ಟೆಲಿಗ್ರಾಂ ಆ್ಯಪ್ ಗಳು ಎಂಡ್-ಟು-ಎಂಡ್ ಎನ್ ಕ್ರಿಪ್ಷನ್ ತಂತ್ರಜ್ಞಾನದಿಂದ ಸುರಕ್ಷಿತವಾಗಿವೆ ಎಂದು ಆಯಾ ಕಂಪನಿಗಳು ಹೇಳಿಕೊಂಡಿದ್ದರೂ, ಈ ತಂತ್ರಜ್ಞಾನದಲ್ಲಿ ಕೆಲವಾರು ಲೋಪ ದೋಷಗಳನ್ನು ತಾನು ಪತ್ತೆ ಹಚ್ಚಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.[ಮತ್ತೆ ಮುಂದುವರಿಯುತ್ತೆ ರಿಲಾಯನ್ಸ್ ಜಿಯೋ ಉಚಿತ ಕೊಡುಗೆ!]

Security flaw found in WhatsApp, Telegram: researchers

ಇದರಿಂದ, ಹ್ಯಾಕರ್ ಗಳು ಈ ಆ್ಯಪ್ ಗಳಲ್ಲಿನ ಗ್ರಾಹಕರ ಅಕೌಂಟ್ ಗೆ ಕನ್ನ ಹಾಕಿ, ಅವರ ಅಥವಾ ಅವರು ನಂಟು ಹೊಂದಿರುವ ಇತರೆ ವ್ಯಾಟ್ಸಾಪ್ ಗ್ರಾಹಕರು ಅಥವಾ ಟೆಲಿಗ್ರಾಂ ಗ್ರಾಹಕರ ಅಕೌಂಟ್ ಗಳವರೆಗೆ ಸಾಗಿ ತಮಗೆ ಬೇಕಾದ ಮಾಹಿತಿಗಳನ್ನು ಕದಿಯಬಹುದಾಗಿದೆ ಎಂದೂ ಸಂಸ್ಥೆ ಹೇಳಿದೆ.

ಅದು ಸಾಧ್ಯವಾದರೆ, ಕೋಟಿಗಟ್ಟಲೆ ಗ್ರಾಹಕರ ಮಾಹಿತಿಯನ್ನು ಕೆಲವೇ ನಿಮಿಷಗಳಲ್ಲಿ ದೋಚಬಹುದಾಗಿದೆ ಎಂದೂ ಕಂಪನಿ ಎಚ್ಚರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A online research firm warns that whatsapp and telegram apps are not safe so that, even though these apps are secured with end-to-end encryption. The firm said that, it has found some loop holes through that hackers can steal the information from the customers' accounts.
Please Wait while comments are loading...