School Holidays: ಏಪ್ರಿಲ್‌ನಲ್ಲಿ ಶಾಲೆಗಳಿಗೆ ಎಷ್ಟು ದಿನ ರಜೆ?; ಇಲ್ಲಿದೆ ಸಂಪೂರ್ಣ ಮಾಹಿತಿ
School Holidays in April: ಈ ವರ್ಷದ ಆರಂಭದಿಂದಲ್ಲೂ ಇಲ್ಲಿವರೆಗೂ ಹಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಿಸಲಾಗಿದೆ. ಹಾಗೆಯೇ ಇನದನೂ ಕೆಲವೇ ದಿನಗಳಲ್ಲಿ ಮಾರ್ಚ್ ಮುಗಿದು ಏಪ್ರಿಲ್ ಎಂಟ್ರಿ ಕೊಡಲಿದೆ. ಈ ತಿಂಗಳಿನಲ್ಲಿ ಎಷ್ಟು ದಿನ ರಜೆಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕದಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ವೇಳೆ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ಸಾಲು ರಜೆಗಳನ್ನೂ ಘೋಷಣೆ ಮಾಡಲಾಗಿದೆ. ಇನ್ನೂ ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಮುಗಿಯಲಿದ್ದು, ಬೇಸಿಗೆ ರಜೆ ಕೂಡ ಸಿಕ್ಕಂತಾಗಲಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಏಪ್ರಿಲ್ ತಿಂಗಳಿನಲ್ಲಿ ಶಾಲೆಗಳಿಗೆ ಸಾಲು ರಜೆಗಳೇ ಸಿಗಲಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಉಣಿಸಿದಂತಾಗಲಿದೆ.

ಏಪ್ರಿಲ್‌ನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವೇ ಸಿಗಲಿದೆ. ಮಾರ್ಚ್‌ನಂತೆಯೇ ಏಪ್ರಿಲ್‌ನಲ್ಲಿ ತುಂಬಾ ರಜಾದಿನಗಳು ಬರಲಿವೆ. ಭಾನುವಾರದ ಹೊರತುಪಡಿಸಿ ಈ ರಜಾ ದಿನಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳ ಜೊತೆಗೆ ರಾಮನವಮಿ, ಮಹಾವೀರ ಜಯಂತಿ ಮತ್ತು ಭೀಮರಾವ್ ಅಂಬೇಡ್ಕರ್ ಜಯಂತಿ ಕೂಡ ಸೇರಿವೆ.
ಏಪ್ರಿಲ್ 10, 2025ರಂದು ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರ ಜನ್ಮ ದಿನಾಚರಣೆ ಇದೆ. ಆದ್ದರಿಂದ ಈ ದಿನದಂದು ದೇಶಾದ್ಯಂತ ಸಾರ್ವಜನಿಕ ರಜೆ ಇರುತ್ತದೆ. ಏಪ್ರಿಲ್ 14ರಂದು ಡಾ.ಭೀಮರಾವ್ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲೂ ದೇಶಾದ್ಯಂತ ಸಾರ್ವಜನಿಕ ರಜೆ ಇರಲಿದೆ.
ಇನ್ನು ಇದಕ್ಕೂ ಮೊದಲು ಮಾರ್ಚ್ 31ರಂದು, ಈದ್-ಉಲ್-ಫಿತರ್ ಹಿನ್ನೆಲೆ ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ದಿನ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಇರಲಿದೆ. ಮಾರ್ಚ್ 30ರಂದು ಭಾನುವಾರ ಆದ್ದರಿಂದ ಶಾಲೆಗಳು ಮುಚ್ಚಲ್ಪಡುತ್ತವೆ. ಇನ್ನು ಉತ್ತರ ಪ್ರದೇಶದ ಶಾಲೆಗಳಿಗೆ ಮೇ 20ರಿಂದ ಜೂನ್ 15ರ ವರೆಗೆ ಶಾಲೆಗಳಿಗೆ ಬೇಸಿಗೆ ರಜೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಏಪ್ರಿಲ್‌ನಲ್ಲಿ ಶಾಲೆಗಳಿಗೆ ಎಷ್ಟು ದಿನ ರಜೆ?: ಏಪ್ರಿಲ್ 6 ರಂದು ರಾಮನವಮಿ, ಏಪ್ರಿಲ್ 10ರಂದು ಮಹಾವೀರ ಜಯಂತಿ, ಏಪ್ರಿಲ್ 13ರಂದು ಬೈಸಾಖಿ ಹಬ್ಬ, ಏಪ್ರಿಲ್ 14ರಂದು ಭೀಮರಾವ್ ಅಂಬೇಡ್ಕರ್ ಜಯಂತಿ ಮತ್ತು ಏಪ್ರಿಲ್ 18ರಂದು ಗುಡ್ ಫ್ರೈಡೇ ಹಿನ್ನೇಲೆ ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲೂ ಈ ದಿನಗಳಂದು ಶಾಲೆಗಳಿಗೆ ರಜೆ ನೀಡಲಾಗುತ್ತದೆ.
ಈದ್-ಉಲ್-ಫಿತರ್ ಹಬ್ಬದಂದು ಯಾವ ರಾಜ್ಯದಲ್ಲಿ ರಜೆ?: ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ, ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ - ಮಾರ್ಚ್ 31, ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 31 ಮತ್ತು ಏಪ್ರಿಲ್ 1ರಂದು ಎರಡು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿಯುವ ಹಂತದಲ್ಲಿದ್ದು, ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಗೆ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಈಗಾಗಲೇ ರಾಜ್ಯದಲ್ಲಿ ಕೆಲ ತರಗತಿಗಳ ಪರೀಕ್ಷೆಗಳು ಮುಕ್ತಾಯವಾಗಿದ್ದು, ಕೆಲವೇ ದಿನಗಳಲ್ಲಿ ಬೇಸಿಗೆ ರಜೆ ನೀಡಲಾಗುತ್ತದೆ ಎನ್ನುವ ಮಾಹಿತಿ ಇದೆ.












Click it and Unblock the Notifications