School Holidays: ಈದ್ & ಶಿಕ್ಷಕರ ದಿನ: ವಿವಿಧ ರಾಜ್ಯಗಳ ಶಾಲೆಗಳಿಗೆ ರಜೆ ಘೋಷಣೆ, ಇಲ್ಲಿದೆ ಪಟ್ಟಿ

School Holiday Updates: ಭಾರತದಲ್ಲಿ ಸೆಪ್ಟಂಬರ್ 05ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಈ ಬಾರಿ ಅದೇ ದಿನ ಮುಸ್ಲಿಮರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಇದೆ. ಕರ್ನಾಟಕ ಒಳಗೊಂಡಂತೆ ದೇಶದಲ್ಲಿ ಶುಕ್ರವಾರ ಶಾಲೆಗಳು ರಜೆ ಇವೆಯಾ? ಇಲ್ಲವಾ? ಎಂಬ ಅನುಮಾನ ಕಾಡುವುದು ಸಹಜ. ನಾಳೆ ಯಾವೆಲ್ಲ ರಾಜ್ಯಗಳಲ್ಲಿ ಮಾತ್ರವೇ ರಜೆ ಇದೆ ಎಂಬುದನ್ನು ನೀವು ಈ ಸುದ್ದಿಯಲ್ಲಿ ತಿಳಿಯಬಹುದು.

ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯಾದ ಈದ್-ಎ-ಮಿಲಾದ್ ಅನ್ನು ಮುಸ್ಲಿಮರು ಆಚರಿಸುತ್ತಾರೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ ಮಳೆ, ಪ್ರವಾಹ ಕಾರಣದಿಂದಾಗಿ ಆಗಾಗ ಶಾಲೆಗಳಿಗೆ ರಜೆ ನೀಡಲಾಗಿದೆ. ಇದೀಗ ಈದ್ ಕಾರಣದಿಂದ ದೇಶದ ವಿವಿಧ ರಾಜ್ಯಗಳು ಹಾಗೂ ನಗರಗಳಲ್ಲಿ ಶಾಲೆಗಳು ಸೆಪ್ಟೆಂಬರ್ 5 ಶಾಲೆಗಳು ಬಂದ್ ಆಗಿರಲಿವೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ ಹಾಗೂ ತಮಿಳುನಾಡಿನ ಶಾಲೆಗಳು ಮುಚ್ಚಲಿವೆ.

School Holiday on September 5 for Eid Milad amp amp Teachers Day 2025 Check List Here

ನಿರಂತರ ಅಧ್ಯಯನ ನಡೆಸಿದ ಶಾಲೆಗಳಿಗೆ ಈ ರಜೆ ತಾತ್ಕಾಲಿಕ ವಿರಾಮ ನೀಡಿದಂತಾಗುತ್ತದೆ. ವಿದ್ಯಾರ್ಥಿಗಳು ವಿರಾಮ ತೆಗೆದುಕೊಂಡು ತಮ್ಮ ಕುಟುಂಬದೊಂದಿಗೆ ವಾರಾಂತ್ಯ ಆನಂದಿಸಬಹುದಾಗಿದೆ. ಈದ್ ಮಾತ್ರವಲ್ಲ ಸಿಕ್ಕಿಂ ಮತ್ತು ಮಣಿಪುರ ಹಾಗೂ ಈಶಾನ್ಯ ಭಾಗದ ರಾಜ್ಯಗಳಲ್ಲಿ ಇಂದ್ರಜಾತ್ರ ಆಚರಣೆ ಸಹ ಇದೆ. ಅದಕ್ಕೂ ಆ ಭಾಗದ ಶಾಲೆಗಳಿಗೆ ರಜೆ ನೀಡಲಾಗಿದೆ. ಶುಕ್ರವಾರ ರಜೆ ನೀಡಿದ್ದರಿಂದ ವಾರಂತ್ಯ ಪೂರ್ತಿ ಮಕ್ಕಳಿಗೆ ಮನರಂಜನೆ ಸಿಗಲಿದೆ.

ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು ಬಂದ್

ಈದ್ ಮಿಲಾದ್ ಹಬ್ಬ ಪ್ರಯುಕ್ತ ಕೇಂದ್ರ ಸರ್ಕಾರದಿಂದ ಅಧಿಕೃತ ರಜೆಯಾಗಿ ಗುರುತಿಸಿದೆ. ಅದರ ಪ್ರಕಾರ, ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಸಾಮಾನ್ಯ ಬಂದ್ ಆಗಲಿವೆ. ರಜೆ ಖಚಿತತೆಗಾಗಿ ವಿದ್ಯಾರ್ಥಿಗಳು ಪೋಷಕರು ನಿಮ್ಮ ಶಾಲೆಗಳ ಸಿಬ್ಬಂದಿ, ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಸೆಪ್ಟೆಂಬರ್ 2025ರ ರಜೆ ಪಟ್ಟಿ

ಸೆಪ್ಟೆಂಬರ್ 7: ಭಾನುವಾರ - ರಜೆ

ಸೆಪ್ಟೆಂಬರ್ 11: ಬುಧವಾರ - ಮಹಾಲಕ್ಷ್ಮಿ ಉಪವಾಸ ಪ್ರಾರಂಭ, ರಾಧಾ ಅಷ್ಟಮಿ ಆಚರಣೆ

ಸೆಪ್ಟೆಂಬರ್ 14: ಭಾನುವಾರ - ರಜೆ

ಸೆಪ್ಟೆಂಬರ್ 16: ಮಂಗಳವಾರ - ವಿಶ್ವಕರ್ಮ ಪೂಜೆ

ಸೆಪ್ಟೆಂಬರ್ 17: ಬುಧವಾರ - ವಿಶ್ವಕರ್ಮ ಪೂಜೆ

ಸೆಪ್ಟೆಂಬರ್ 21: ಭಾನುವಾರ- ರಜೆ

ಸೆಪ್ಟೆಂಬರ್ 22: ಸೋಮವಾರ: ದಸರಾ-ನವರಾತ್ರಿ ಸಂಭ್ರಮ

ಸೆಪ್ಟೆಂಬರ್ 28: ಭಾನುವಾರ - ರಜೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+