5 ಪ್ರತ್ಯೇಕ ಧರ್ಮೀಯ ಜಡ್ಜ್ ಗಳಿಂದ ತ್ರಿವಳಿ ತಲಾಖ್ ವಿಚಾರಣೆ
ಬೇಕೆಂದೇ ಈ ರೀತಿ ಪೀಠವನ್ನು ವಿನ್ಯಾಸ ಮಾಡಲಾಗಿದೆಯೋ ಅಥವಾ ಆಕಸ್ಮಿಕವಾಗಿ ಈ ರೀತಿ ನಡೆದಿದೆಯೋ ಗೊತ್ತಿಲ್ಲ. ಆದರೆ ಬೇರೆ ಬೇರೆ ಧರ್ಮಕ್ಕೆ ಸೇರಿದವರು ಒಟ್ಟಾಗಿ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ನವದೆಹಲಿ, ಮೇ 11: ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ತ್ರಿವಳಿ ತಲಾಖ್ ವಿಚಾರ ಕುತೂಹಲಕಾರಿಯಾಗಿದೆ.
ಐದು ಬೇರೆ ಬೇರೆ ಧರ್ಮಕ್ಕೆ ಸೇರಿದ ನ್ಯಾಯಮೂರ್ತಿಗಳನ್ನು ಒಳಗೊಂಡ ಪಂಚ ಸದಸ್ಯರ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಸಿಖ್ ಸಮುದಾಯಕ್ಕೆ ಸೇರಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪೀಠದಲ್ಲಿ ಕ್ರಿಶ್ಚಿಯನ್ -ನ್ಯಾ, ಕುರಿಯನ್ ಜೋಸೆಫ್, ಪಾರ್ಸಿ-ರೋಹಿಂಗ್ಟನ್ ನಾರಿಮನ್, ಹಿಂದೂ-ನ್ಯಾ, ಉದಯ್ ಲಲಿತ್ ಹಾಗೂ ಮುಸ್ಲಿಂ ಧರ್ಮೀಯರಾದ ನ್ಯಾ. ಅಬ್ದುಲ್ ನಜೀರ್ ಈ ಪೀಠದಲ್ಲಿದ್ದಾರೆ.
ಬೇಕೆಂದೇ ಈ ರೀತಿ ಪೀಠವನ್ನು ವಿನ್ಯಾಸ ಮಾಡಲಾಗಿದೆಯೋ ಅಥವಾ ಆಕಸ್ಮಿಕವಾಗಿ ಈ ರೀತಿ ನಡೆದಿದೆಯೋ ಗೊತ್ತಿಲ್ಲ. ಆದರೆ ಬೇರೆ ಬೇರೆ ಧರ್ಮಕ್ಕೆ ಸೇರಿದವರು ಒಟ್ಟಾಗಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

ತ್ರಿವಳಿ ತಲಾಖ್ ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟಿಗೆ ಸಲ್ಲಿಕೆಯಾಗಿದ್ದು ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಈ ನ್ಯಾಯಪೀಠ ನಡೆಸುತ್ತಿದೆ. ಕೇಂದ್ರ ಸರಕಾರವನ್ನು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಪ್ರತಿನಿಧಿಸುತ್ತಿದ್ದು ತ್ರಿವಳಿ ತಲಾಖ್ ವಿಚಾರವನ್ನು ಬಲವಾಗಿ ವಿರೋಧಿಸುತ್ತಾ ಬಂದಿದ್ದಾರೆ.
ಇನ್ನು ಬೇರೆ ಬೇರೆ ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ತ್ರಿವಳಿ ತಲಾಖ್ ಗೆ ತಮ್ಮ ವಿರೋಧವನ್ನು ಪ್ರತಿಪಾದಿಸಿದ್ದಾರೆ.
ಆದರೆಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾತ್ರ ತ್ರಿವಳಿ ತಲಾಖ್ ವಿಚಾರವನ್ನು ಸಮರ್ಥಿಸುತ್ತಲೇ ಬಂದಿದೆ. ಧಾರ್ಮಿಕ ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ಬೋರ್ಡ್ ಈ ವಿಚಾರವನ್ನು ಪ್ರತಿಪಾದಿಸುತ್ತಿದೆ.
ಆದರೆ ಇದನ್ನು ವಿರೋಧಿಸಿರುವ ಕೇಂದ್ರ ಸರಕಾರ ಲಿಂಗ ಸಮಾನತೆಯನ್ನು ಪ್ರತಿಪಾದಿಸುತ್ತಾ ತ್ರಿವಳಿ ತಲಾಖ್ ನಿಷೇಧಕ್ಕೆ ಒತ್ತಾಯಿಸಿದೆ.












Click it and Unblock the Notifications