ಪುಸ್ತಕ ಪ್ರೇಮಿ 10 ವರ್ಷದ ವಿಶಾಖಾಳ ಜೀವ ಉಳಿಸಿದ ಪುಣ್ಯ ನಿಮ್ಮದಾಗಲಿ
"ಓದೋದು- ಬರೆಯೋದು ಅಂದರೆ ಅವಳಿಗೆ ಎಲ್ಲಿಲ್ಲದ ಸಂಭ್ರಮ. ತನ್ನ ಪುಸ್ತಕ ಹಾಗೂ ಬ್ಯಾಗ್ ಬಗ್ಗೆಯೂ ಅಷ್ಟೇ ಪ್ರೀತಿ. ಓದಿನ ಬಗ್ಗೆ ಯಾವತ್ತಿಗೂ ಬೇಜಾರು ತೋರಿಸಿದ ಹುಡುಗಿಯಲ್ಲ. ಸಂಜೆ ಆಗ್ತಿದ್ದ ಹಾಗೆ ಕಿಟಕಿ ಹತ್ತಿರ ಕೂತು ಪುಸ್ತಕ ಓದುತ್ತಿದ್ದಳು. ಒಮ್ಮೆ ಓದುತ್ತಾ ಕುಳಿತರೆ ಅದರಲ್ಲಿಯೇ ಮಗ್ನವಾಗಿ ಬಿಡುತ್ತಿದ್ದಳು. ಆದರೆ ಈಗ ಅವಳ ಪುಸ್ತಕಗಳು ಮೂಲೆ ಸೇರಿವೆ. ಧೂಳಾಗಿವೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಹಿಂದಿನ ದಿನ ಕೂಡ ತನ್ನ ಎಲ್ಲ ಹೋಮ್ ವರ್ಕ್ ಪೂರ್ತಿ ಮಾಡಿದ್ದಳು."
ಹೀಗೆ ತಮ್ಮ ಮಗಳ ಬಗ್ಗೆ ಹೇಳುವ ವಿಶಾಖಾಳ ತಂದೆ- ತಾಯಿಯು ಅವಳ ಶಾಲೆಯಿಂದ ಕರೆ ಬರಬಹುದು ಎಂದು ನಿರೀಕ್ಷೆ ಮಾಡುವುದನ್ನೇ ಬಿಟ್ಟಿದ್ದಾರೆ. ಶಾಲೆಯ ಸಿಬ್ಬಂದಿ ಸಹ ಆಕೆ ಶಾಲೆಗೆ ಬಾರದೆ ಇರುವುದೇ ಉತ್ತಮ ಎನ್ನುತ್ತಾರೆ. ಅನಾರೋಗ್ಯದಿಂದ ವಿಶಾಖಾ ಹಾಸಿಗೆ ಹಿಡಿದಿದ್ದಾಳೆ. ಜ್ವರದಿಂದ ನಡುಗುತ್ತಿದ್ದಾಳೆ.
ಈ ಹಿಂದೆ ಡೆಂಗ್ಯೂ ಜ್ವರದ ಪರಿಣಾಮವಾಗಿ ಎರಡು ಸಲ ಆಸ್ಪತ್ರೆಗೆ ಸೇರಿದ್ದಳು. ಡೆಂಗ್ಯೂ ಜ್ವರದ ಪರಿಣಾಮದಿಂದ ಅವಳ ಮೂತ್ರಪಿಂಡ, ಯಕೃತ್, ಶ್ವಾಸಕೋಶಗಳು ಬಹಳ ದುರ್ಬಲಗೊಂಡವು. ಇದೀಗ ಅನಾರೋಗ್ಯ ಸಮಸ್ಯೆಯ ಕಾರಣಕ್ಕೆ ಆಸ್ಪತ್ರೆ ಸೇರಿ 12 ದಿನಗಳಾಗಿವೆ. ವಿಶಾಖಾ ಬಹು ಅಂಗ ವೈಫಲ್ಯದಿಂದ ಬಳಲುತ್ತಿದ್ದಾಳೆ. ಅವಳ ಮೂತ್ರಪಿಂಡ, ಪಿತ್ತಜನಕಾಂಗ ಮತ್ತು ಶ್ವಾಸಕೋಶಗಳು ಈಗಾಗಲೇ ಹದಗೆಟ್ಟಿವೆ.

ವಿಶಾಖಾಳ ತೀವ್ರವಾದ ಅನಾರೋಗ್ಯದ ಕಾರಣಕ್ಕೆ ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಈಗಾಗಲೇ 5 ಲಕ್ಷ ರುಪಾಯಿ ವೈದ್ಯಕೀಯ ವೆಚ್ಚಗಳಿಗೆ ಅಂತಲೇ ಆಗಿದೆ. ಅವಳ ತಂದೆ ಆರ್‍ಟಿಓ ಕಚೇರಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡ್ತಾರೆ. ಅವರ ತಿಂಗಳ ಆದಾಯ ಹೆಚ್ಚೆಂದರೆ 7000 ರೂಪಾಯಿ. ಆದರೆ ಇದೀಗ ಮಗಳ ಚಿಕಿತ್ಸೆಗಾಗಿ 7 ಲಕ್ಷ ರುಪಾಯಿಯನ್ನು ಹೊಂದಿಸಬೇಕಿದೆ. ಹಾಗಂತ ಅವರು ಕೈ ಚೆಲ್ಲಿಲ್ಲ. ಸಾಕಷ್ಟು ಕಷ್ಟ ಪಡುತ್ತಿದ್ದಾರೆ.
"ನಿತ್ಯ ಮುಂಜಾನೆ ನನ್ನ ಮಗಳ ಹಾಸಿಗೆಯನ್ನು ಸರಿ ಪಡಿಸುತ್ತೇನೆ. ಇಂದಾದರೂ ಅವಳ ಆರೋಗ್ಯ ಸುಧಾರಣೆಯಾಗಿ ಮನೆಗೆ ಬರಲಿ ಎಂದು ಬಯಸುತ್ತೇನೆ. ಹೀಗೆ ಮಾಡುವುದರಿಂದ ನನಗೊಂದು ರೀತಿಯ ಮಾನಸಿಕ ಧೈರ್ಯ ದೊರೆಯುತ್ತದೆ. ಅವಳ ತಮ್ಮ ನಿತ್ಯವೂ ರಾತ್ರಿ ಮಲಗುವಾಗ ಅಕ್ಕನ ಬಗ್ಗೆ ಕೇಳುತ್ತಾನೆ. ಅವಳು ಬೆಳಗ್ಗೆ ಬರುತ್ತಾಳೆ ಎಂದು ಅವನನ್ನು ಸಂತೈಸುತ್ತೇನೆ.
"ಮುಂಜಾನೆ ಅವಳು ಬರದೆ ಇರುವುದನ್ನು ಕಂಡಾಗ ನಮ್ಮನ್ನು ಅವನ ಕಣ್ಣುಗಳು ಪ್ರಶ್ನಿಸುತ್ತವೆ. ನಾವು ಸುಳ್ಳು ಹೇಳುತ್ತಿದ್ದೇವೆ ಎಂದು ನಮ್ಮನ್ನು ನೋಡುತ್ತಾನೆ. ಅವಳ ಜೀವನದಲ್ಲಿ ಸಂಜೀವಿನಿ ಸಿಕ್ಕಿ, ಹೊಸ ಭವಿಷ್ಯ ಸಿಗಲಿ ಎಂಬುದನ್ನೇ ನಿತ್ಯವೂ ಎದುರು ನೋಡುತ್ತೇವೆ" ಎಂದು ವಿಶಾಖಾಳ ತಂದೆ ಕಣ್ಣೀರು ಇಡುತ್ತಾರೆ.
ತಮ್ಮ ಮಗಳ ಆರೋಗ್ಯ ಚಿಕಿತ್ಸೆಗಾಗಿ ನಿಮ್ಮಲ್ಲಿ ಹಣ ಸಹಾಯ ಬಯಸುತ್ತಿದ್ದಾರೆ. ಆ ಕಾರಣಕ್ಕೆ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ. ನಿಮಗೂ ಇವರ ಕಷ್ಟಕ್ಕೆ ಸಹಾಯ ಮಾಡಬೇಕು ಎಂದೆನಿಸಿದರೆ ನಿಧಿ ಸಂಗ್ರಹಕ್ಕೆ ಸಹಾಯ ಮಾಡಬಹುದು.

ಓದುಗರಿಗೆ ನನ್ನ ವಿನಮ್ರವಾದ ಮನವಿ...
ನಾವು ಮನುಷ್ಯ ಮಾತ್ರರು. ಇತರರ ಕಷ್ಟ ಹಾಗೂ ನೋವು ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ನನ್ನ ಎಲ್ಲ ಕಷ್ಟಕ್ಕೂ ನೀವು ಸಹಾಯ ಮಾಡಿ ಎಂದು ಕೇಳುವುದಿಲ್ಲ. ಆದರೆ ನಿಮ್ಮ ಕೈಲಾದ ಅಲ್ಪ ಸ್ವಲ್ಪ ಸಹಾಯವನ್ನಾದರೂ ಮಾಡಿ.
ವಿಶಾಖಾಳನ್ನು ಸಂಜೀವ್ ಅವರ ಮಗಳು ಅಂತಷ್ಟೇ ಅಲ್ಲ. ಅವಳು ನಮ್ಮ ಮಗಳು ಎಂದುಕೊಂಡು ಕೈಲಾದ ಸಹಾಯವನ್ನು ಮಾಡಿ. ಆ ಪುಟ್ಟ ಹುಡುಗಿ ಸಂಕಟ ಪಡುವುದನ್ನು ನೋಡುವುದಿರಲಿ ಕೇಳುವುದಕ್ಕೂ ಹೃದಯಕ್ಕೆ ಕಷ್ಟವಾಗುತ್ತದೆ. ನಿಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ.
ನಿಮ್ಮ ಒಂದು ನಿರ್ಧಾರದಿಂದ ಹತ್ತು ವರ್ಷದ ಮುಗ್ಧ ಮಗುವಿಗೆ ಸಂಜೀವಿನಿ ದೊರೆತಂತಾಗುವುದು. ನಿಮ್ಮ ಸ್ವಲ್ಪ ಸಹಾಯವು ಅವಳ ಜೀವನ ಚಿಗುರಲು ಆಧಾರವಾಗುವುದು. ನನ್ನ ಪ್ರೀತಿಯ ಮಗಳು ವಿಶಾಖಾಳ ಆರೈಕೆಗೆ ಹಣ ಹೊಂದಿಸಿ ಚಿಕಿತ್ಸೆ ನೀಡಿದರೆ, ನನ್ನ ಮನೆಯು ಬೆಳಗಿದಂತಾಗುವುದು.
ಅವಳ ಆ ಮುಗ್ಧ ಪ್ರೀತಿಯನ್ನು ಪುನಃ ನನಗೆ ನೀಡಿದ ಪುಣ್ಯ ನಿಮ್ಮದಾಗುವುದು. ಆಕೆಗೆ ಜನ್ಮ ನೀಡಿದ ನಮ್ಮ ಬಳಿ ಅವಳ ಚಿಕಿತ್ಸೆಗೆ ಸಾಕಾಗುವಷ್ಟು ಹಣವಿಲ್ಲ. ನಿಮ್ಮ ಹಣ ಸಹಾಯದಿಂದ ಅವಳ ಆರೋಗ್ಯಕ್ಕೆ ಔಷಧವನ್ನು ಕೊಡಿಸುವಷ್ಟು ಅನುಕೂಲವಾದಂತಾಗುವುದು. ನಿಮ್ಮ ದಾನದಿಂದ ನನ್ನ ಮಗಳ ಜೀವ ಉಳಿದರೆ ನನ್ನ ಪ್ರತಿ ಪ್ರಾರ್ಥನೆಯು ನಿಮ್ಮ ಪರವಾಗಿರುತ್ತದೆ. ನಿಮ್ಮ ಒಂದು ಸಹಾಯ ಒಂದು ಜೀವ ಉಳಿಸಿದ ಪುಣ್ಯ ತಂದುಕೊಡುವುದು.
-
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications