ಪತಿಯ ಅಂತ್ಯಸಂಸ್ಕಾರಕ್ಕಾಗಿ ತಂಜಾವೂರ್ ಗೆ ತೆರಳಿದ ಶಶಿಕಲಾ
ತಂಜಾವೂರ್, ಮಾರ್ಚ್ 21: ಮೃತ ಪತಿ ನಟರಾಜನ್ ಮಾರುತಪ್ಪ(75) ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವುದಕ್ಕಾಗಿ, ಬೆಂಗಳೂರಿನ ಜೈಲಿನಲ್ಲಿದ್ದ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಇಂದು ತಂಜಾವೂರ್ ಗೆ ತೆರಳಿದ್ದಾರೆ.
ಪತಿಯ ನಿಧನದ ಹಿನ್ನೆಲೆಯಲ್ಲಿ 15 ದಿನಗಳ ಪೆರೋಲ್ ಪಡೆದಿದ ಶಶಿಕಲಾ ಇಂದು(ಮಾ.21) ತಮಿಳುನಾಡಿನ ತಂಜಾವೂರ್ ಗೆ ತಲುಪಿದ್ದು, ಪತಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
Tamil Nadu: VK Sasikala reaches Thanjavur, the place where her husband Natarajan Maruthappa's mortal remains are kept for people to pay last respects. He passed away at the age of 76 due to multiple organ failure. pic.twitter.com/JfXOcjou54
— ANI (@ANI) March 21, 2018
ಬಹು ಅಂಗಾಂಗ ವೈಫಲ್ಯದಿಂದ ನಿನ್ನೆ(ಮಾ.20) ಮೃತರಾದ ನಟರಾಜನ್ ಮಾರುತಪ್ಪ(75) ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ತಂಜಾವೂರ್ ನಲ್ಲಿಡಲಾಗಿದೆ. ಅವರ ಅಂತ್ಯಸಂಸ್ಕಾರ ಇಂದು ತಂಜಾವೂರ್ ನಲ್ಲಿ ನಡೆಯಲಿದೆ.

ಅಕ್ರಮ ಆಸ್ತಿ ಹೊಂದಿರುವ ಆರೋಪದಲ್ಲಿ ದೋಷಿ ಎಂದು ಪರಿಗಣಿಸಲ್ಪಟ್ಟ ಶಶಿಕಲಾ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.












Click it and Unblock the Notifications