Video: ಸರ್ವಪಲ್ಲಿ ರಾಧಾಕೃಷ್ಣನ್, ತಮನ್ನಾ ಭಾಟಿಯಾ ಒಂದೇ ವೇದಿಕೆಯಲ್ಲಿ..: ಮಕ್ಕಳ ನೃತ್ಯ ಕಂಡು ಜನ ಶಾಕ್- ವಿಡಿಯೋ ವೈರಲ್

ಕಾರ್ಯಕ್ರಮಗಳು ಇದ್ದಾಗ ಶಾಲೆಯಲ್ಲಿ ಮಕ್ಕಳು ನೃತ್ಯ ಮಾಡುವುದು ಸಾಮಾನ್ಯ. ಆದರೆ ಸಮಯ ಸಂದರ್ಭ ಯಾವ ಕಾರ್ಯಕ್ರಮದಲ್ಲಿ ಯಾವ ನೃತ್ಯ ಸೂಕ್ತವಾಗಿರುತ್ತದೆ ಅನ್ನೋದನ್ನ ಮಕ್ಕಳಿಗೆ ಶಿಕ್ಷಕರು ಪೋಷಕರು ತಿಳಿಸಬೇಕು. ಇಲ್ಲವಾದಲ್ಲಿ ನೋಡುಗರಿಗೆ ಇರುಸುಮುರುಸು ಆಗುತ್ತದೆ. ಹೌದು... ಹೀಗೊಂದು ವೈರಲ್ ವಿಡಿಯೋದಲ್ಲಿ ಮಕ್ಕಳು ಅದ್ಭುತವಾಗಿ ನೃತ್ಯ ಮಾಡುತ್ತಿದ್ದಾರೆ. ಆದರೆ ಆ ವೇದಿಕೆಗೂ ಮಕ್ಕಳ ನೃತ್ಯಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ಹೀಗಾಗಿ ವೈರಲ್ ವಿಡಿಯೋ ಟೀಕೆಗೆ ಗುರಿಯಾಗಿದೆ.

ಶಿಕ್ಷಕರ ದಿನಾಚರಣೆಯಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಕ್ಕಳು 'ಸ್ತ್ರೀ 2' ಸಿನಿಮಾದ ತಮನ್ನಾ ಭಾಟಿಯಾ ಅವರ ಇತ್ತೀಚಿನ 'ಆಜ್ ಕಿ ರಾತ್' ಹಾಡಿಗೆ ನೃತ್ಯ ಮಾಡಿದ್ದಾರೆ. ಮಗುವೊಂದು ತಮನ್ನಾ ಭಾಟಿಯಾ ರೀತಿಯಲ್ಲಿ ಉಡುಪು ಧರಿಸಿ ಸಖತ್ ಡ್ಯಾನ್ಸ್ ಮಾಡಿದೆ. ಆದರೆ ಮಕ್ಕಳು ಈ ನೃತ್ಯ ಮಾಡುವಾಗ ವೇದಿಕೆಯ ಮೇಲೆ ಹಿಂಬದಿಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಫೋಟೋ ಇರುವುದು ಕಂಡುಬಂದಿದೆ. ಇದು ನೋಡುಗರಿಗೆ ಮುಜುಗರವನ್ನುಂಟು ಮಾಡಿದೆ. ಅಲ್ಲದೆ ಆ ವೇದಿಕೆಗೂ ಶೋಭೆ ತರುವಂತಹ ಕಾರ್ಯಕ್ರಮ ಇದಾಗಿರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Sarvepalli Radhakrishnan Tamannaah Bhatia on the same stage Video viral- Netizens React

ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ವೇದಿಕೆ ತುಂಬಾ ಮುಖ್ಯ. ಧೇಮಾಜಿಯ ಸುವಿದ್ಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಪುಟ್ಟ ಬಾಲಕಿ ಸ್ತ್ರೀ 2 ಚಿತ್ರದ ತಮನ್ನಾ ಭಾಟಿಯಾ ಅವರ ಇತ್ತೀಚಿನ 'ಆಜ್ ಕಿ ರಾತ್' ಹಾಡಿಗೆ ಭರ್ಜರಿ ನೃತ್ಯ ಮಾಡಿದ್ದು ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಪುಟ್ಟ ಬಾಲಕಿಯ ನೃತ್ಯ ಕೌಶಲ್ಯ ವೃತ್ತಿಪರ ನೃತ್ಯ ಕಲಾವಿದರ ಮಟ್ಟಕ್ಕೆ ಹೊಂದಿಕೆಯಾಗುವಂತಿದೆ.

ತಮನ್ನಾ ಭಾಟಿಯಾ ರೀತಿಯಲ್ಲಿ ಉಡುಪು ಧರಿಸಿರುವ ಮಗು ಪ್ರದರ್ಶನದ ಸಮಯದಲ್ಲಿ ತನ್ನ ನಡೆಗಳು ಮತ್ತು ಮುಖಭಾವಗಳಿಗಾಗಿ ಸಾಕಷ್ಟು ಪ್ರಶಂಸೆಯನ್ನು ಪಡೆದಿದ್ದಾಳೆ. ಆದರೆ ಮುಗುವಿನ ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆ ಇದಾಗಿರಲಿಲ್ಲ. ಯಾಕೆಂದರೆ ಐಟಮ್ ಸಾಂಗ್‌ಗಳಿಗೆ ನೃತ್ಯ ಮಾಡುವ ವೇದಿಕೆ ಇದಾಗಿರಲಿಲ್ಲ. ಈ ವೇದಿಕೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಸ್ಮರಿಸುವ ಕಾರ್ಯಕ್ರಮವಿತ್ತು. ಶಿಕ್ಷಕರನ್ನು ಗೌರವಿಸುವ ವೇದಿಕೆಯಾಗಿತ್ತು. ಹೀಗಾಗಿ ಈ ವಿಡಿಯೋಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಹಾಗೂ ಪೋಷಕರು ಎಂಥಹ ಕಾರ್ಯಕ್ರಮಗಳಲ್ಲಿ ಯಾವ ರೀತಿ ಪ್ರದರ್ಶನ ನೀಡಬೇಕು ಎನ್ನುವುದನ್ನು ಅರಿತಿರಬೇಕು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಕೆಲವರು ನೃತ್ಯವನ್ನು ಅಸಭ್ಯ ಮತ್ತು ಕೆಟ್ಟದಾಗಿದೆ ಎಂದಿದ್ದಾರೆ. ಸಾಮಾಜಿಕ ಮಾಧ್ಯಮದ ಕೆಲ ಬಳಕೆದಾರರು " ಇದು ಕೆಟ್ಟದಾದ ನಡೆ.... ನೀವು ಶಾಲೆಗಳಲ್ಲಿ ವಯಸ್ಕರ ವಿಷಯದಲ್ಲಿ ಕಾರ್ಯಕ್ರಮಗಳನ್ನು ಮಾಡುವಾಗ ಮೈಯಲ್ಲಾ ಎಚ್ಚರವಾಗಿರಬೇಕು. ಇದು ಅವರಿಗೆ ತೋರುವ ಅಗೌರವ.. ನೀವು ಮಗುವಿಗೆ ಐಟಂ ಸಾಂಗ್‌ಗೆ ನೃತ್ಯ ಮಾಡಲು ಅನುಮತಿಸಿದರೆ ಹೊಸ ಪೀಳಿಗೆ ಹಾಳಾಗುತ್ತದೆ. ಯಾವ ವೇದಿಕೆಯಲ್ಲಿ ಏನು ಮಾಡಬೇಕು ಎನ್ನುವುದನ್ನು ಮುಂದಿನ ಪೀಳಿಕೆ ಮರೆತು ಹೋಗುತ್ತದೆ. ಆದರೂ ಈ ಹಾಡು ನೃತ್ಯ ಹೇಗೆ ವೇದಿಕೆಗೆ ಬಂತು. ಯಾರೂ ವಿರೋಧಿಸಲಿಲ್ಲವೇ? ಅನ್ನೋದೇ ಪ್ರಶ್ನೆ. ನಮ್ಮ ಪುಣ್ಯ ನಾವು ಇಂಥಹ ಶಾಲೆಗಳಲ್ಲಿ ಓದಲಿಲ್ಲ'' ಎಂದು ವ್ಯಂಗ್ಯವಾಡಿದ್ದಾರೆ.

"ಅವಳು ಪ್ರತಿಭಾನ್ವಿತಳು. ಅವಳ ನಡೆಗಳು ಮತ್ತು ಅಭಿವ್ಯಕ್ತಿ ಉತ್ತುಂಗದಲ್ಲಿದೆ. ಆದರೆ ಶಿಕ್ಷಕರ ದಿನಾಚರಣೆಯಂದು ಸರ್ವಪಲ್ಲಿ ರಾಧಾಕೃಷ್ಣನ್ ಫೋಟೋ ಮುಂದೆ ಇಂತಹ ನೃತ್ಯ ನಿಜಕ್ಕೂ ಶೋಭೆ ತರುವಂತದಲ್ಲ. ಇದು ಶಾಲಾ ಶಿಕ್ಷಕರಿಂದಾದ ತಪ್ಪು. ಶಿಕ್ಷಕರಿಗೆ ಅಥವಾ ಪೋಷಕರಿಗೆ ಇದು ಅರ್ಥವಾಗಬೇಕು. ಇದು ಅವಳ ತಪ್ಪಲ್ಲ. ಅವಳು ತುಂಬಾ ಒಳ್ಳೆಯ ನೃತ್ಯಗಾರ್ತಿ" ಎಂದು ಮತ್ತೊಬ್ಬ ಬಳಕೆದಾರರು ವೀಡಿಯೊದಲ್ಲಿ ಕಾಮೆಂಟ್ ಮಾಡಿದ್ದಾರೆ.

ಮತ್ತೊಂದೆಡೆ ತುಂಬಾ ಜನರು ನೃತ್ಯದಲ್ಲಿ ಯಾವುದೇ ತಪ್ಪನ್ನು ಕಾಣಲಿಲ್ಲ. ಒಬ್ಬ ಬಳಕೆದಾರ, "ಬ್ರೋ ಅವಳ ಆತ್ಮವಿಶ್ವಾಸವನ್ನು ನೋಡಿ!" ಎಂದು ಬರೆದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+