ಕಾಂಗ್ರೆಸ್ ಸೇರಿಲ್ಲ, ಸೇರೋದಿಲ್ಲ : ಹರ್ಯಾನ್ವಿ ಗಾಯಕಿ ಸಪ್ನಾ ಚೌಧರಿ

ನವದೆಹಲಿ, ಮಾರ್ಚ್ 25: ಹರ್ಯಾನ್ವಿ ಗಾಯಕಿ ಸಪ್ನಾ ಚೌಧರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಜತೆಗಿನ ಫೋಟೊವೊಂದು ವೈರಲ್ ಆಗಿದ್ದು, ಸಪ್ನಾ ಅವರು ಕಾಂಗ್ರೆಸ್ ಸೇರಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಇದಕ್ಕೆ ಪೂರಕವಾಗಿ ಉತ್ತರಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ನರೇಂದ್ರ ರಾಥಿ ಅವರು ಪ್ರತಿಕ್ರಿಯಿಸಿ, ಸಪ್ನಾ ಚೌಧರಿ ಅವರು ನಮ್ಮ ಕಚೇರಿಗೆ ಬಂದು, ಅರ್ಜಿ ತುಂಬಿ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದಾರೆ. ಅವರ ಸೋದರಿ ಕೂಡಾ ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಿದರು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಪ್ನಾ ಚೌಧರಿ, ನಾನು ಕಾಂಗ್ರೆಸ್ ಸೇರಿಲ್ಲ, ಸೇರೋದಿಲ್ಲ, 'ಪ್ರಿಯಾಂಕಾ ಜತೆಗಿನ ಫೋಟೊ ಹಳೆ ಚಿತ್ರವಾಗಿದೆ', ನಾನು ಯಾವ ಪಕ್ಷದ ಪರವಾಗಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದಿದ್ದಾರೆ.

Sapna Chaudhary clears air over joining Congress, but party claims otherwise

ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಅವರನ್ನು ಸೋಲಿಸಲು ಸಪ್ನಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಎಲ್ಲಾ ಗಾಳಿ ಸುದ್ದಿಗಳಿಗೂ ಸಪ್ನಾ ತೆರೆ ಎಳೆದಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋ 11ರ ಸ್ಪರ್ಧಿಯಾಗಿದ್ದ ಸಪ್ನ ಅವರು ತಮ್ಮ ಹಾಡು, ನೃತ್ಯಗಳ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದವರು. 'ತೇರಿ ಅಖ್ಯಾ ಕಾ ಯೋ ಕಾಜಲ್' ಎಂಬ ಹರ್ಯಾನ್ವಿ ಭಾಷೆಯ ಹಾಡು ಅತ್ಯಂತ ಜನಪ್ರಿಯಾವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+