ಶೂ ಪಾಲಿಶ್‌ ಮಾಡಿಕೊಂಡೇ ಸ್ಕೂಲ್‌ ಟಾಪರ್‌ ಆದ ಹುಡುಗ : ಬೆಂಕಿಯಲ್ಲಿ ಅರಳಿದ ಈ ಹೂವು ಸಂಜಯ್‌‌‌ಗೆ ಐಪಿಎಸ್ ಆಗೋ ಕನಸು

Sanjay Rabidas Life Story: ಈ ಜಗತ್ತಿನಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ. ಸಾಧಿಸುವ ಛಲ ಬೇಕು. ಕಠಿಣ ಪರಿಶ್ರಮ ಮಾಡುವ ಹಠ ಇರಬೇಕು. ಇಟ್ಟ ಗುರಿಯನ್ನು ಮುಟ್ಟಿಯೇ ತೀರುತ್ತೇನೆ ಎಂಬ ಮನೋಭಾವ ಇರಲೇ ಬೇಕು. ಈ ಮನಸ್ಥಿತಿ ನಿಮ್ಮದಾಗಿದ್ದರೆ, ಖಂಡಿತಾ, ಯಾವುದೂ ಅಸಾಧ್ಯ ಅಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಸಂಜಯ್‌ ರಬಿದಾಸ್‌ ಅನ್ನೋ ಪಶ್ಚಿಮ ಬಂಗಾಳದ ಹುಡುಗ.

ಸಂಜಯ್‌ ರಬಿದಾಸ್‌, ಪಶ್ಚಿಮ ಬಂಗಾಳದ, ಮಾಲ್ಡಾ ಜಿಲ್ಲೆಯ ಚಂಚಲ್‌ ಎಂಬ ಹಳ್ಳಿ ಹುಡುಗ. ಈತ ಪಶ್ಚಿಮ ಬಂಗಾಳ ಬೋರ್ಡ್‌ ಪರೀಕ್ಷೆಯಲ್ಲಿ ಟಾಪರ್‌ ಆಗಿದ್ದಾನೆ. ಸಂಜಯ್‌ ರಬಿದಾಸ್‌ 500ರಲ್ಲಿ 465 ಅಂಕ ಗಳಿಸಿ ಸ್ಕೂಲ್‌ ಟಾಪರ್‌ ಅನ್ನಿಸಿಕೊಂಡಿದ್ದಾನೆ. ಸಂಜಯ್‌ ಸಾಧನೆಗೆ ಈಗ ಪ್ರಶಂಸೆಯ ಹೊಳೆ ಹರಿದುಬರುತ್ತಿದೆ.

Sanjay Rabidas From West Bengal School Topper Who Worked 12 Hours A Day Polished Shoes Wants To Be IPS

Sanjay Rabidas ಹೆಚ್ಚುಗಾರಿಕೆ ಏನು? :

ಬೋರ್ಡ್‌ ಪರೀಕ್ಷೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು (students) ಅತಿ ಹೆಚ್ಚು ಅಂಕ ಗಳಿಸಿ ಪಾಸ್‌ ಆಗಿರ್ತಾರೆ. ಅದರಲ್ಲಿ ಸಂಜಯ್‌ ರಬಿದಾಸ್‌ ಹೆಚ್ಚುಗಾರಿಕೆ ಏನು.? ಎಲ್ಲರ ರೀತಿಯಲ್ಲೂ ಈತನೂ ಉತ್ತಮ ಅಂಕ ಗಳಿಸಿದ್ದಾನೆ. ಅದ್ರಲ್ಲಿ ವಿಶೇಷತೆ ಏನಿದೆ ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಸಂಜಯ್‌ ರಬಿದಾಸ್‌ ಅಂಕಗಳ ಮೇಲೆ ಗಮನಹರಿಸುವ ಮೊದಲು ಆತ ಯಾವ ಹಿನ್ನೆಲೆಯಲ್ಲಿ ಬಂದು ಅಷ್ಟೊಂದು ಮಾರ್ಕ್ಸ್‌ ಗಳಿಸಿದ್ದಾನೆ ಎಂದು ತಿಳಿಯುವುದು ಅತಿಮುಖ್ಯ.

ಸ್ಕೂಲ್‌ ಟಾಪರ್‌ ಆಗಿರುವ ಸಂಜಯ್‌ ರಬಿದಾಸ್‌ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಆತನ ದಾರಿಯುದ್ದಕ್ಕೂ ಸಿಕ್ಕಿದ್ದು ಬರೀ ಮುಳ್ಳುಗಳೇ. ಅವನ್ನೆಲ್ಲಾ ಎದುರಿಸಿ, ಸಂಜಯ್‌ ರಬಿದಾಸ್‌ ಯಶಸ್ಸಿನ ಗುರಿ ಮಟ್ಟಿದ್ದಾನೆ.

ದಿನಕ್ಕೆ 12 ಗಂಟೆ ಶೂ ಪಾಲಿಶ್‌ ಕೆಲಸ :

ಸಂಜಯ್‌ ಸಣ್ಣವನಿದ್ದಾಗಲೇ ಆತನ ತಂದೆ ಕಾಯಿಲೆಗೆ ತುತ್ತಾಗಿ ತೀರಿಹೋಗುತ್ತಾರೆ. ತಾಯಿ, ಹೊಟ್ಟೆಪಾಡಿಗಾಗಿ ಅಲ್ಲಿ ಇಲ್ಲಿ ಮನೆಗೆಲಸ ಮಾಡಿಕೊಂಡಿರ್ತಾರೆ. ಮನೆಯಲ್ಲಿ ದಟ್ಟ ದಾರಿದ್ರ್ಯ, ಕಷ್ಟ ಕಾರ್ಪಣ್ಯ. ಸ್ಕೂಲ್‌ಗೆ ಹೋಗಲೂ ದುಡ್ಡಿಲ್ಲದಂಥ ಸ್ಥಿತಿ. ಇಂಥ ಪರಮ ಕಷ್ಟದ ಸ್ಥಿತಿಯಲ್ಲಿ ಸಂಜಯ್‌ ರಬಿದಾಸ್‌ ಎದೆಗುಂದಲ್ಲ. ಕೊನ್ವು ಎಂಬಲ್ಲಿನ ಭವಾನಿಪುರ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಂದುವರಿಸುತ್ತಾರೆ. ಜೊತೆಗೆ ಚಪ್ಪಲಿ ಹೊಲಿಯೋದು, ಶೂ ಪಾಲಿಶ್‌ ಮಾಡುವ ಕೆಲಸ ಮುಂದುವರಿಸುತ್ತಾರೆ. ದಿನಕ್ಕೆ 12 ಗಂಟೆ ಚಪ್ಪಲಿ ಹೊಲಿಯೋದು, ಶೂ ಪಾಲಿಶ್‌ ಮಾಡೋ ಕೆಲಸ ಮಾಡಿ, ಅಮ್ಮನಿಗೆ ನೆರವಾಗ್ತಾರೆ. ಉಳಿದ ಅವಧಿಯಲ್ಲಿ ಶಾಲೆ, ಸ್ಟಡಿ ಮುಂದುವರಿಸ್ತಾರೆ. ದಿನ ಇಡೀ ಕೆಲಸ, ಶಾಲೆ. ರಾತ್ರಿಯಿಡೀ ನಿದ್ದೆಗೆಟ್ಟು ಓದ್ತಾರೆ ಸಂಜಯ್‌ ರಬಿದಾಸ್‌. ಬೀದಿ ದೀಪದ ಕೆಳಗಡೆ ಪುಸ್ತಕಗಳೊಂದಿಗೆ ರಾತ್ರಿ ಕಳೀತಾರೆ. ಎಲ್ಲಿ ಸಮಯ, ಅವಕಾಶ ಸಿಗುತ್ತೋ, ಅಲ್ಲಿ ಪುಸ್ತಕ ಬಿಚ್ಚಿ ಓದು ಮುಂದುವರಿಸ್ತಾರೆ. ಓದಿಗಾಗಿ ದೈಹಿಕ ವಿಶ್ರಾಂತಿಯನ್ನು ಕಡೆಗಣಿಸ್ತಾರೆ. ಸ್ಕೂಲ್‌ ಟಾಪರ್‌ ಆಗಲೇ ಬೇಕು ಎಂಬ ಅದಮ್ಯ ಹಠ ಅವರನ್ನು ಆವರಿಸಿರುತ್ತದೆ. ಹಠಕ್ಕೆ ತಕ್ಕಂತೆ ಪರಿಶ್ರಮ ಪಡ್ತಾರೆ.

ಬೋರ್ಡ್‌ ಪರೀಕ್ಷೆಯಲ್ಲಿ ಶಾಲೆಗೆ ಟಾಪರ್‌ :

ಓದಿನಲ್ಲಿ ಶಿಸ್ತು ಮತ್ತು ಪರಿಶ್ರಮ ಇದ್ದರೆ ಫಲಿತಾಂಶ ನಿರೀಕ್ಷಿತವೇ ಆಗಿರುತ್ತದೆ. ಸಂಜಯ್‌ ರಬಿದಾಸ್‌ ಜೀವನದಲ್ಲಿ ಆಗಿದ್ದೂ ಅದೇ. ಸತತ ಪರಿಶ್ರಮ ಮತ್ತು ಶಿಸ್ತಿನ ಫಲವಾಗಿ, ಸಂಜಯ್‌, ಪಶ್ಚಿಮ ಬಂಗಾಳ ಬೋರ್ಡ್‌ ಪರೀಕ್ಷೆಯಲ್ಲಿ ಶಾಲೆಗೆ ಟಾಪರ್‌ ಆಗಿ ಪಾಸ್‌ ಆಗ್ತಾರೆ. ದುಡ್ಡು, ದುಡಿಮೆ, ವಿಶ್ರಾಂತಿ ಇಲ್ಲದ ಜೀವನ, ಕಷ್ಟ ಕಾರ್ಪಣ್ಯ ಆತನ ಓದಿಗೆ ಅಡ್ಡಿ ಆಗಲೇ ಇಲ್ಲ. ಯಾಕಂದ್ರೆ, ಸಂಜಯ್‌ ಮುಂದೆ ಜೀವನದ ಗುರಿ ಇತ್ತು. ಅದನ್ನು ಸಾಧಿಸಲೇ ಬೇಕು ಎಂಬ ಹಠ ಇತ್ತು.

ಸಂಜಯ್‌ಗೆ ಐಪಿಎಸ್‌ ಆಗುವಾಸೆ:

ಇದೀಗ ಸಂಜಯ್‌ ಸಾಧನೆಗೆ ಎಲ್ಲಾ ಕಡೆಗಳಲ್ಲಿ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಆತನ ಸಾಧನೆಯನ್ನು ಸೋಶಿಯಲ್‌ ಮೀಡಿಯಾಗಳು ( social media) ಕೊಂಡಾಡುತ್ತಿವೆ. ಸಂಜಯ್‌ ಇದೀಗ ಐಪಿಎಸ್‌ ಆಗುವ ಗುರಿ ಇಟ್ಟುಕೊಂಡಿದ್ದಾನೆ. ಏನೇ ಅಡೆ ತಡೆ ಬೇಕಾದ್ರೂ ಬರ್ಲಿ, ಐಪಿಎಸ್‌ ಪರೀಕ್ಷೆ ಪಾಸಾಗಿ ಆಗಿ ಪೊಲೀಸ್‌ ಅಧಿಕಾರಿ ಆಗುವ ಕನಸು ಕಾಣುತ್ತಿದ್ದಾನೆ. ಪೊಲೀಸ್‌ ಅಧಿಕಾರಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎನ್ನುವುದು ಸಂಜಯ್‌ ರಬಿದಾಸ್‌ ಗುರಿ.

ಸಂಜಯ್‌ ರಬಿದಾಸ್‌ ಜೀವನ ಎಲ್ಲರಿಗೂ ಆದರ್ಶ. ಆತ ಕಷ್ಟ ಎಂದು ಕುಗ್ಗಲಿಲ್ಲ. ದುಡ್ಡಿಲ್ಲ ಎಂದು ಜಗ್ಗಲಿಲ್ಲ. ಕಠಿಣ ಪರಿಶ್ರಮಕ್ಕೆ ತಯಾರಾಗಿದ್ದ. ಸಂಜಯ್‌ ರಬಿದಾಸ್‌ ಸಿವಿಲ್‌ ಸರ್ವಿಸ್‌ ಕ್ಲಿಯರ್‌ ಮಾಡಿ, ಐಪಿಎಸ್‌ ಅಧಿಕಾರಿ ಆಗಲಿ ಎಂಬುದು ಎಲ್ಲರ ಹಾರೈಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+