Sania Mirza: ಶೋಯೆಬ್ ಮಲಿಕ್ ಮೂರನೇ ಮದುವೆ ಬಗ್ಗೆ ಸಾನಿಯಾ ಮಿರ್ಜಾ ತಂದೆ ಹೇಳಿದ್ದೇನು?
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರು ಭಾರತದ ಮಾಜಿ ಟೆನಿಸ್ ಆಟಗಾರ್ತಿ ಮತ್ತು ಎರಡನೇ ಪತ್ನಿ ಸಾನಿಯಾ ಮಿರ್ಜಾ ಅವರಿಂದ ದೂರವಾಗಿರುವ ವದಂತಿಯ ನಡುವೆಯೇ ಮೂರನೇ ಮದುವೆಯಾಗಿದ್ದಾರೆ.
ನಟಿ ಸನಾ ಜಾವೇದ್ ಅವರನ್ನು ಶೋಯೆಬ್ ಮಲಿಕ್ ವಿವಾಹವಾಗಿದ್ದಾರೆ. ಶೋಯೆಬ್ ಮದುವೆಯ ಸುದ್ದಿ ಬೆನ್ನಲ್ಲೇ ಸಾನಿಯಾ ಮಿರ್ಜಾ ತನ್ನ ಪತಿಗೆ ಏಕಪಕ್ಷೀಯವಾಗಿ ವಿಚ್ಛೇದನ ನೀಡಿದ್ದಾರೆ ಎಂದು ಸಾನಿಯಾ ಕುಟುಂಬಸ್ಥರು ತಿಳಿಸಿರುವುದಾಗಿ ವರದಿಯಾಗಿದೆ.

ವಿಚ್ಚೇದನ ನೀಡುವ ಪದ್ದತಿಯನ್ನು 'ಖುಲಾ' ಎಂದು ಹೇಳಲಾಗಿದೆ. ಇದು ಮುಸ್ಲಿಂ ಮಹಿಳೆ ತನ್ನ ಪತಿಗೆ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಹಕ್ಕನ್ನು ಉಲ್ಲೇಖಿಸುತ್ತದೆ. ಪಿಟಿಐ ಮಾಡಿರುವ ವರದಿಯಲ್ಲಿ ಕೂಡ ಸಾನಿಯಾ ತಂದೆ ಇದನ್ನೇ ಸ್ಪಷ್ಟಪಡಿಸಿರುವುದಾಗಿ ಹೇಳಿದೆ.
ಯಾರು ಈ ಸನಾ ಜಾವೇದ್?
ಸಾಮಾಜಿಕ ಮಾಧ್ಯಮಗಳಲ್ಲಿ ಸನಾ ಜಾವೇದ್ ಅವರೊಂದಿಗಿನ ಮದುವೆ ಫೋಟೋವನ್ನು ಹಂಚಿಕೊಂಡಿರುವ ಶೋಯೆಬ್ ಮಲಿಕ್ "ನಾವು ನಿಮ್ಮನ್ನು ಜೋಡಿಯಾಗಿ ರಚಿಸಿದ್ದೇವೆ" ಎಂದು ಶೀರ್ಷಿಕೆ ನೀಡಿದ್ದಾರೆ. ಇಬ್ಬರೂ ಪಾಕಿಸ್ತಾನದಲ್ಲಿ ಅನೇಕ ಕಾರ್ಯಕ್ರಮಗಳು ಮತ್ತು ಟಿವಿ ಜಾಹೀರಾತುಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪರಿಚಯ ಪ್ರೇಮಕ್ಕೆ ತಿರುಗಿ ಮದುವೆವರೆಗೂ ಬಂದಿದೆ ಎನ್ನಲಾಗಿದೆ.
ಸಾನಿಯಾ - ಶೋಯೆಬ್ ದೂರ ದೂರ
ಶೋಯೆಬ್ ಮತ್ತು ಸಾನಿಯಾ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ವದಂತಿಗಳು ಇದ್ದಾಗ ಶೋಯೆಬ್ ಮದುವೆ ಸುದ್ದಿ ಬಂದಿದೆ. ಕಳೆದೆರಡು ವರ್ಷಗಳಿಂದ ಸೆಲೆಬ್ರಿಟಿ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಪರೂಪ. ಅವರು ಬೇರ್ಪಟ್ಟಿದ್ದಾರೆ ಎಂದು ಹಲವಾರು ವರದಿಗಳು ಹೇಳಿದೆ. ಆದರೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಮಲಿಕ್, ಕಳೆದ ವರ್ಷ ಪಾಕಿಸ್ತಾನ ಟಿವಿ ಶೋಗಳಲ್ಲಿ ಸಾನಿಯಾ ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ನೀಡದೆ ಜಾರಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದರು.
ಮಗನ ಜೊತೆ ಸಾನಿಯಾ ವಾಸ
ಶೋಯೆಬ್ ಮತ್ತು ಸಾನಿಯಾ ಏಪ್ರಿಲ್ 2010 ರಲ್ಲಿ ಹೈದರಾಬಾದ್‌ನಲ್ಲಿ ವಿವಾಹವಾದರು. ಇಬ್ಬರು ದುಬೈನಲ್ಲಿ ವಾಸಿಸುತ್ತಿದ್ದರು. 2018 ರಲ್ಲಿ ಇಹ್ಜಾನ್ ಮಿರ್ಜಾ ಮಲಿಕ್ ಎಂಬ ಮಗ ಕೂಡ ಜನಿಸಿದ್ದನು. ಸದ್ಯಕ್ಕೆ ಮಗ ಸಾನಿಯಾ ಅವರೊಂದಿಗೆ ವಾಸಿಸುತ್ತಿದ್ದಾರೆ.
ಶೋಯೆಬ್ ಮಲಿಕ್‌ಗೆ ಮಾತ್ರವಲ್ಲ ಸನಾ ಜಾವೇದ್ ಅವರಿಗೂ ಕೂಡ ಇದು ಎರಡನೇ ಮದುವೆಯಾಗಿದೆ ಎಂಬುದು ಗಮನಾರ್ಹ. ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ ಅವರು 2020 ರಲ್ಲಿ ಸರಳ ಸಮಾರಂಭದಲ್ಲಿ ಗಾಯಕ ಉಮೈರ್ ಜೈಸ್ವಾಲ್ ಅವರನ್ನು ಮದುವೆಯಾಗಿದ್ದರು. ಸನಾ ಹಲವಾರು ಹಿಟ್ ನಾಟಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮತ್ತು ಪಾಕಿಸ್ತಾನಿ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಎರಡು ತಿಂಗಳ ಹಿಂದೆ, ಅವರು ಗಂಡನಿಂದ ವಿಚ್ಛೇದನ ಪಡೆದಿರುವ ಬಗ್ಗೆ ವರದಿಗಳು ಬಂದಿದ್ದವು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಶೂಟಿಂಗ್ ವೇಳೆ ನನ್ನ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ನಟಿ ಮೊನಾಲಿಸಾ ಆರೋಪ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications