ಲಖನೌ: ನಾಯಕರ ಗೆಲುವಿಗಾಗಿ ಕಾರ್ಯಕರ್ತರಿಂದ ಹೋಮ ಹವನ
ಲಖನೌ, ಮಾರ್ಚ್. 11 : ತೀವ್ರ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಶನಿವಾರ ಹೊರಬೀಳಲಿದ್ದು, ಈ ಹಿನ್ನಲೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹಲವು ರಾಜಕೀಯ ನಾಯಕರು ಹೋಮ ಹವನಗಳನ್ನು ಕೈಗೊಂಡಿದ್ದಾರೆ.
ಉತ್ತರ ಪ್ರದೇಶದ ಲಖನೌ ನಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ಫೋಟೋವನ್ನು ಇಟ್ಟು ಅವರ ಗೆಲುವಿಗಾಗಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ಹೋಮ ಮತ್ತು ಹವನಗಳನ್ನು ನಡೆಸುವ ಮೂಲಕ ದೇವರ ಮೊರೆ ಹೋಗಿದ್ದಾರೆ.

ಅಖಿಲೇಶ್ ಯಾದವ್ ಪ್ರಧಾನ ಮಂತ್ರಿಗಳಾಗಲಿ. ಡಿಂಪಲ್ ಯಾದವ್ ಮುಖ್ಯಂತ್ರಿಯಾಗಲಿ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಉತ್ತರ ಪ್ರದೇಶಲ್ಲಿ ಬಿಜೆಪಿ 251 ರಿಂದ 279 ಸ್ಥಾನಗಳನ್ನು ಗಳಿಸಲಿದೆ ಎಂದು ಇನ್ ಇಂಡಿಯಾ ಟುಡೇ ಮತ್ತು ಅಕ್ಸಿಸ್ ಸಮೀಕ್ಷೆ ಹೇಳಿವೆ.
Samajwadi Party workers perform Havan in Lucknow #ElectionResults pic.twitter.com/SP9iJcdwfX
— ANI UP (@ANINewsUP) March 11, 2017
ಇನ್ನು ಸಮಾಜವಾದಿ ಪಕ್ಷ 88 ರಿಂದ 112 ಸ್ಥಾನಗಳಿಸಿದರೆ ಬಹುಜನ ಸಮಾಜ ಪಕ್ಷ ಕೇವಲ 28-45 ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ಸಮೀಕ್ಷೆಗಳ ತಿಳಿಸಿವೆ.
ಸಮೀಕ್ಷೆ ಏನಾಗಲಿದೆ? ಕಾರ್ಯಕರ್ತರು ಸಲ್ಲಿಸಿದ ಪೂಜೆ-ಪುನಸ್ಕಾರಗಳು ಫಲ ನೀಡತ್ತವೆಯೇ? ಎಂಬುವುದು ಫಲಿತಾಂಶ ಹೊರ ಬಂದ ಮೇಲೆ ತಿಳಿಯಲಿದೆ.












Click it and Unblock the Notifications