ಸ್ಯಾಮ್ ಪಿತ್ರೋಡಾ ಕಾಂಗ್ರೆಸ್‌ನ ಮಣಿ ಶಂಕರ್ ಅಯ್ಯರ್ ಆಗುತ್ತಿದ್ದಾರಾ?
ಬೆಂಗಳೂರು, ಮೇ 10 : ಮಣಿ ಶಂಕರ್ ಅಯ್ಯರ್ ಬಳಿಕ ಸ್ಯಾಮ್ ಪಿತ್ರೋಡಾ ಅವರು ಕಾಂಗ್ರೆಸ್ ನಾಯಕರನ್ನು ತಮ್ಮ ಹೇಳಿಕೆ ಮೂಲಕ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಸಿಖ್ ದಂಗೆ ಕುರಿತು ಪಿತ್ರೋಡಾ ನೀಡಿದ್ದ 'ಹುವಾ ತೋ ಹುವಾ' ಹೇಳಿಕೆ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.
ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತರಾದ ಸ್ಯಾಮ್ ಪಿತ್ರೋಡಾ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. 'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹಿಂದಿ ಜ್ಞಾನ ಸ್ವಲ್ಪ ಕಡಿಮೆಯೇ ಇದೆ' ಎಂದು ಸ್ಪಷ್ಟನೆ ನೀಡಿದ್ದಾರೆ.
'ಜೋ ಹುವಾ ತೋ ಬುರಾ ಹುವಾ ಎಂದು ಹೇಳುವ ಬದಲು ಈ ರೀತಿ ಹೇಳಿರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಇದಕ್ಕೆ ವಿಷಾದಿಸುತ್ತೇನೆ' ಎಂದು ಸ್ಯಾಮ್ ಪಿತ್ರೋಡಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

2014ರ ಚುನಾವಣೆಯ ಸಮಯದಲ್ಲಿ ಮಣಿಶಂಕರ್ ಅಯ್ಯರ್ ಅವರು, 'ಮೋದಿ ಅವರು ಎಐಸಿಸಿ ಅಧಿವೇಶನದಲ್ಲಿ ಟೀ ಮಾರಲಿ ಆದರೆ, ಅವರು ಎಂದಿಗೂ ಭಾರತದ ಪ್ರಧಾನಿ ಆಗುವುದಿಲ್ಲ. ನಾನು ಪ್ರಮಾಣ ಮಾಡುತ್ತೇನೆ 21ನೇ ಶತಮಾನದಲ್ಲಿ ಮೋದಿ ಭಾರತದ ಪ್ರಧಾನಿ ಆಗುವುದಿಲ್ಲ' ಎಂದು ಹೇಳಿಕೆ ನೀಡಿದ್ದರು.
ಬಿಜೆಪಿ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಚಾಯ್ ಪೇ ಚರ್ಚಾ ಎಂಬ ಅಭಿಯಾನ ಆರಂಭಿಸಿತ್ತು. 2014ರ ಲೋಕಸಭಾ ಚುನಾವಣೆ ಬಳಿಕ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿದ್ದರು. ಈಗ ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಬಿಜೆಪಿ ನಾಯಕರು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಬಾಲಾಕೋಟ್ ಉಗ್ರರ ನೆಲೆ ಮೇಲೆ ಭಾರತೀಯ ಸೇನೆ ದಾಳಿ ಮಾಡಿದಾಗ ಸಂದರ್ಶನ ನೀಡಿದ್ದ ಸ್ಯಾಮ್ ಪಿತ್ರೋಡಾ ಅವರು, 'ಬಾಲಾಕೋಟ್‌ನಲ್ಲಿ ಉಗ್ರ ನೆಲೆಗಳ ಮೇಲೆ ಏಕ್‌ಸ್ಟ್ರೈಕ್ ನಡೆಸಿದಾಗ ನಿಜವಾಗಲೂ 300 ಉಗ್ರರು ಮೃತಪಟ್ಟಿದ್ದಾರೆಯೇ?, ಈ ಬಗ್ಗೆ ಹೆಚ್ಚಿನ ದಾಖಲೆಗಳನ್ನು ನೀಡಿ ಸಾಬೀತುಪಡಿಸಿ' ಎಂದು ಹೇಳಿದ್ದರು.












Click it and Unblock the Notifications