ರಜನೀಕಾಂತ್ ನಡೆ ಅನುಕರಿಸಿದ ಸಲ್ಮಾನ್

ತಮ್ಮ ಸಹ ನಿರ್ಮಾಣದ ಟ್ಯೂಬ್ ಲೈಟ್ ಚಿತ್ರದಿಂದ ನಷ್ಟಕ್ಕೊಳಗಾಗಿರುವ ವಿತರಕರ ನಷ್ಟ ತುಂಬಲು ಮುಂದಾದ ಸಲ್ಮಾನ್ ಖಾನ್. ಟ್ಯೂಬ್ ಲೈಟ್ ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತ ಹಿನ್ನೆಲೆಯಲ್ಲಿ ನಷ್ಟಕ್ಕೊಳಗಾಗಿರುವ ವಿತರಕರು.

ನವದೆಹಲಿ, ಜುಲೈ 11: ತಮ್ಮ ಇತ್ತೀಚಿನ ಚಿತ್ರ 'ಟ್ಯೂಬ್ ಲೈಟ್' ಬಾಕ್ಸ್ ಆಫೀ ಸ್ ನಲ್ಲಿ ತೋಪಾಗಿರುವ ಹಿನ್ನೆಲೆಯಲ್ಲಿ ನಟ ಹಾಗೂ ಚಿತ್ರದ ಸಹ ನಿರ್ಮಾಪಕ ಸಲ್ಮಾನ್ ಖಾನ್ ಅವರು, ಚಿತ್ರದ ವಿತರಕರಿಗೆ ಆಗಿರುವ ನಷ್ಟವನ್ನು ತುಂಬಿಕೊಡಲು ಮುಂದೆ ಬಂದಿದ್ದಾರೆ.

ಈ ವಿಚಾರದಲ್ಲಿ, ತಮಿಳುನಾಡು ಸೂಪರ್ ಸ್ಟಾರ್ ರಜನೀಕಾಂತ್ ಅವರ ಮಾರ್ಗವನ್ನು ಇದೀಗ ಸಲ್ಮಾನ್ ಅನುಸರಿಸಿದಂತಾಗಿದೆ. ಈ ಹಿಂದೆ, ತಮ್ಮ ನಿರ್ಮಾಣದ ಬಾಬಾ ಚಿತ್ರವು ಬಾಕ್ಸಾಫೀಸ್ ನಲ್ಲಿ ಸೋಲು ಕಂಡಾಗ ರಜನೀಕಾಂತ್ ಅವರು ಚಿತ್ರದ ವಿತರಕರಿಗೆ ಆಗಿದ್ದ ನಷ್ಟವನ್ನು ಭರಿಸಿದ್ದರು.

'ಟ್ಯೂಬ್ ಲೈಟ್' ಚಿತ್ರವನ್ನು ವಿತರಣೆ ಮಾಡಿದ್ದವರಲ್ಲಿ ಕೋಮಲ್ ನಹ್ತಾ ಎಂಬುವರೂ ಒಬ್ಬರು. ಇದೇ ಕೋಮಲ್ ನೆಹ್ತಾ ಅವರು ಟ್ವಿಟರ್ ನಲ್ಲಿ ಸಲ್ಮಾನ್ ಖಾನ್ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಾಗಿ, ಈ ವಿಚಾರ ಜಗಜ್ಜಾಹೀರಾಗಿದೆ.

'ಟ್ಯೂಬ್ ಲೈಟ್' ಚಿತ್ರ ಬಿಡುಗಡೆಯಾಗಿ 17 ದಿನಗಳೇ ಕಳೆದಿದ್ದರೂ, ಚಿತ್ರದ ಈವರೆಗಿನ ಗಳಿಕೆ ಕೇವಲ 114 ಕೋಟಿ ರು. ಆಗಿದೆ. ಆದರೆ, ಅವರ ಹಿಂದಿನ ಚಿತ್ರಗಳಾದ 'ಸುಲ್ತಾನ್' ಹಾಗೂ 'ಭಜರಂಗಿ ಭಾಯಿಜಾನ್' ಚಿತ್ರಗಳು ಬಿಡುಗಡೆಯಾದ ಮೂರೇ ದಿನಗಳಲ್ಲಿ 100 ಕೋಟಿ ರು. ಗಳಿಕೆ ದಾಟಿದ್ದವು.

ರಂಜಾನ್ ವೇಳೆಯಲ್ಲೇ ಅವರ ಚಿತ್ರಗಳು ಬಿಡುಗಡೆ

ರಂಜಾನ್ ವೇಳೆಯಲ್ಲೇ ಅವರ ಚಿತ್ರಗಳು ಬಿಡುಗಡೆ

ಸಲ್ಮಾನ್ ಖಾನ್ ಅವರು ಚಿತ್ರಗಳು ಸಾಮಾನ್ಯವಾಗಿ ಪ್ರತಿ ವರ್ಷದ ಈದ್ (ರಂಜಾನ್) ಹಬ್ಬದ ಸಂದರ್ಭದಲ್ಲೇ ಬಿಡುಗಡೆಯಾಗುತ್ತವೆ. ಆ ವೇಳೆ ಬಿಡುಗಡೆಯಾದ ಚಿತ್ರಗಳೆಲ್ಲಾ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು, ಭಾರೀ ಕೀರ್ತಿಯನ್ನೂ ತಂದಿರುವ ಹಿನ್ನೆಲೆಯಲ್ಲಿ ಖುದ್ದು ಸಲ್ಮಾನ್ ಖಾನ್ ಅವರಿಗೂ ರಂಜಾನ್ ವೇಳೆಯಲ್ಲಿ ತಮ್ಮ ಚಿತ್ರದ ಬಿಡುಗಡೆ ಹೆಚ್ಚು ಲಕ್ಕಿ ಎಂದು ಭಾವಿಸಿದ್ದಾರೆ.

2011ರಲ್ಲಿ ಸಲ್ಲು ಚಿತ್ರವೊಂದು ಫ್ಲಾಪ್ ಆಗಿತ್ತು

2011ರಲ್ಲಿ ಸಲ್ಲು ಚಿತ್ರವೊಂದು ಫ್ಲಾಪ್ ಆಗಿತ್ತು

ಸಲ್ಮಾನ್ ಖಾನ್ ಅವರ ರಂಜಾನ್ ಸೆಂಟಿಮೆಂಟು ಅವರಿಗೆ ಪ್ರತಿಬಾರಿಯೂ ಅದೃಷ್ಟ ತಂದುಕೊಟ್ಟಿಲ್ಲ. ಕೆಲವೊಮ್ಮೆ ಚಿತ್ರದ ಕಥೆ, ಮತ್ತಿತರ ಅಂಶಗಳು ಇಷ್ಟವಾಗದಾಗ ಜನರು ಚಿತ್ರಗಳನ್ನು ತಿರಸ್ಕರಿಸಿದ್ದುಂಟು. 2011ರಲ್ಲಿ ಹೀಗೆಯೇ ಈದ್ ನಲ್ಲಿ ಬಿಡುಗಡೆಗೊಂಡಿದ್ದ 'ವೀರ್' ಚಿತ್ರ ಬಾಕ್ಸಾಫೀಸ್ ನಲ್ಲಿ ನಿರೀಕ್ಷಿತ ಯಶಸ್ಸು ಗಳಿಸದೇ, ವಿತರಕರಿಗೆ ಕೊಂಚ ನಷ್ಟವನ್ನುಂಟು ಮಾಡಿತ್ತು. ಇದೀಗ, ಟ್ಯೂಬ್ ಲೈಟ್ ಸರದಿ.

100 ಕೋಟಿ ರು. ಗಳಿಸಲು ಏಳು ದಿನ ಕಾಯ್ದ ಚಿತ್ರ!

100 ಕೋಟಿ ರು. ಗಳಿಸಲು ಏಳು ದಿನ ಕಾಯ್ದ ಚಿತ್ರ!

ಟ್ಯೂಬ್ ಲೈಟ್ ಚಿತ್ರ ಜುಲೈ ತಿಂಗಳ 23ರಂದು ಬಿಡುಗಡೆಯಾಗಿತ್ತು. ಸಲ್ಮಾನ್ ಖಾನ್ ಅವರ ಈ ಹಿಂದಿನ ಚಿತ್ರಗಳಾದ 'ಸುಲ್ತಾನ್' ಹಾಗೂ 'ಭಜರಂಗಿ ಭಾಯಿಜಾನ್' ಚಿತ್ರಗಳು ಮೂರೇ ದಿನಗಳಲ್ಲಿ 100 ಕೋಟಿ ರು. ಗಳಿಸಿದರೆ, 'ಟ್ಯೂಬ್ ಲೈಟ್' ಚಿತ್ರವು 100 ಕೋಟಿ ರು. ಗಳಿಸಲು ಏಳು ದಿನ ಕಾಯಬೇಕಾಯಿತು.

ನಷ್ಟಕ್ಕೊಳಗಾಗಿರುವ ವಿತರಕರು

ನಷ್ಟಕ್ಕೊಳಗಾಗಿರುವ ವಿತರಕರು

ಜುಲೈ 10ರ ಅಂತ್ಯದವರೆಗೆ ಲೆಕ್ಕ ಹಾಕಿ ಹೇಳುವುದಾದರೆ, ಈವರೆಗೆ 114 ಕೋಟಿ ರು. ಗಳಿಸಿರುವ 'ಟ್ಯೂಬ್ ಲೈಟ್' ಚಿತ್ರವು ಇನ್ನು ಬಾಕ್ಸಾಫೀಸ್ ನಲ್ಲಿ ಮೇಲೇಳಲು ಸಾಧ್ಯವಿಲ್ಲ ಎಂಬುವಷ್ಟರ ಮಟ್ಟಿಗೆ ತಲುಪಿದೆ. ಹಾಗಾಗಿ, ವಿತರಕರು ನಷ್ಟಕ್ಕೊಳಗಾಗಿದ್ದಾರೆ. ಹಾಗಾಗಿ, ಅವರ ನೆರವಿಗೆ ಸಲ್ಲು ಭಾಯಿ ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+