Get Updates
Get notified of breaking news, exclusive insights, and must-see stories!

ನಾವಿಕರ ಹನಿ ಟ್ರ್ಯಾಪ್ ಕೇಸ್, ಪಾಕಿಸ್ತಾನಿ ಕೈ ಸೇರದ ಗೌಪ್ಯ ಮಾಹಿತಿ

ನವದೆಹಲಿ, ಫೆಬ್ರವರಿ 03: ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್​ಐ ಮಹಿಳೆಯರನ್ನು ಬಳಸಿಕೊಂಡಿರುವ ಬಗ್ಗೆ ಇದೀಗ ದೃಢಪಟ್ಟಿದೆ. ನೌಕಪಡೆ ಸ್ಪೈ ರಿಂಗ್ ಕೇಸಿನ ವಿಚಾರಣೆ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಗೆ ಹಲವು ವಿಷಯಗಳು ತಿಳಿದು ಬಂದಿದೆ.

ನಾವಿಕರನ್ನು ಹನಿ ಟ್ರ್ಯಾಪ್ ಮಾಡಲು ಪಾಕಿಸ್ತಾನವು ಒಂದೇ ಬಗೆಯ ಸಾಮಾಜಿಕ ಜಾಲ ಖಾತೆಯನ್ನು ಬಳಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಒನ್ಇಂಡಿಯಾಕ್ಕೆ ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದರು.

ನಾವಿಕರಿಗೆ ಕಡಿಮೆ ಮೊತ್ತ ನೀಡಲಾಗಿದೆ. ಸುಳಿಗೆ ಸಿಲುಕಿದರೂ ಸೂಕ್ಷ್ಮ, ಗೌಪ್ಯ ಮಾಹಿತಿ ಏನೂ ರವಾನೆಯಾಗಿಲ್ಲ. ಬಂಧಿತ ನಾವಿಕರ ವಿಚಾರಣೆ ಮುಂದುವರೆದಿದೆ ಎಂದು ಹೇಳಿದರು.

Sailors’ Honey trap: Pakistan used same set of social media accounts

ಆಂಧ್ರಪ್ರದೇಶ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ಸಂಸ್ಥೆ(ಐಬಿ) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 10 ಮಂದಿ ನಾವಿಕರನ್ನು ಬಂಧಿಸಲಾಗಿದ್ದು, ವಿಚಾರಣೆ ಜಾರಿಯಲ್ಲಿದೆ. ಈ ಹನಿ ಟ್ರ್ಯಾಪ್ ರಾಕೆಟ್ ನಲ್ಲಿ ಇನ್ನೂ ಹೆಚ್ಚಿನ ಮಂದಿ ಭಾಗಿಯಾಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸುಳಿವು ಸಿಕ್ಕಿದೆ.

ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಿದ್ದ ಸಿಬ್ಬಂದಿ ತಮ್ಮ ಉದ್ಯೋಗ ಹಾಗೂ ಇತರ ಮಾಹಿತಿಗಳನ್ನು ಮಾತ್ರ ಹಂಚಿಕೊಂಡಿದ್ದಾರೆ. ನೌಕಾಪಡೆಯ ಸೂಕ್ಷ್ಮ ಹಾಗೂ ಗೌಪ್ಯತೆ ಮಾಹಿತಿಗಳನ್ನು ಅವರು ಹಂಚಿಕೊಂಡಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ.

ವಿಶಾಖಪಟ್ಟಣಂನ ಈಸ್ಟರ್ನ್ ನೇವಲ್ ಕಮಾಂಡ್ ಹಾಗೂ ಮುಂಬೈನ ವೆಸ್ಟರ್ನ್ ಕಮಾಂಡ್​ನ ಹಡಗುಗಳು ಅಥವಾ ಜಲಾಂತರ್ಗಾಮಿ ನೌಕೆಗಳ ಸಿಬ್ಬಂದಿ ಮಾಹಿತಿಯನ್ನು ಹಂಚಿಕೊಂಡಿರುವ ಬಗ್ಗೆ ಎನ್ಐಎ ವಿಚಾರಣೆ ನಡೆಸಲಾಗುತ್ತಿದೆ. ಭಾರತೀಯ ನೌಕಾಪಡೆಗೆ ಇತ್ತೀಚೆಗೆ ಸೇರ್ಪಡೆಗೊಂಡ ಸಿಬ್ಬಂದಿಯನ್ನು ಗುರಿಯನ್ನಾಗಿಸಿಕೊಂಡು ಮಾಹಿತಿ ಕದಿಯಲು ಯತ್ನಿಸುತ್ತಿರುವ ಪಾಕಿಸ್ತಾನಿ ಬಗ್ಗೆ ತನಿಖೆ ಮುಂದುವರೆದಿದೆ.

READ IN ENGLISH

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+