ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖೋಟಾ ಜಾತಿ ಪ್ರಮಾಣ ಪತ್ರ ನೀಡಿದವರ ಕೆಲಸಕ್ಕೆ ಕುತ್ತು

ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡಿ ಕೆಲಸಕ್ಕೆ ಸೇರಿದವರನ್ನು ಕೆಲಸದಿಂದ ಕಿತ್ತುಹಾಕುವಂತೆ ಕೇಂದ್ರ ಸರ್ಕಾರ ತನ್ನ ಅಧೀನದ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದೆ.

|
Google Oneindia Kannada News

ನವದೆಹಲಿ, ಜೂನ್ 16: ನೌಕರಿ ಗಿಟ್ಟಿಸುವ ಸಲುವಾಗಿ ತಾವು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿದವರೆಂದು ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವ ಎಲ್ಲಾ ಉದ್ಯೋಗಿಗಳ ಕೆಲಸಕ್ಕೆ ಕುತ್ತು ಬರಲಿದೆ. ಹೀಗೆ, ಖೋಟಾ ಜಾತಿ ಪ್ರಮಾಣ ಪತ್ರ ನೀಡಿ ಕೆಲಸಕ್ಕೆ ಸೇರಿದವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅಂಥವರನ್ನು ಕೆಲಸದಿಂದ ಕಿತ್ತು ಹಾಕುವಂತೆ ಕೇಂದ್ರ ಸರ್ಕಾರ ತನ್ನ ಅಧೀನದ ಎಲ್ಲಾ ಇಲಾಖೆಗಳಿಗೆ ಆದೇಶ ಹೊರಡಿಸಿದೆ.

ಇತ್ತೀಚಿನ ವರ್ಷಗಳಲ್ಲಿ ವಿತ್ತೀಯ ಹಾಗೂ ವಿಮಾ ವಲಯದ ಸಂಸ್ಥೆಗಳಲ್ಲಿ, ಇಲಾಖೆಗಳಲ್ಲಿ ನಡೆದಿರುವ ಸುಮಾರು 1,800 ಪರಿಶಿಷ್ಠ ಜಾತಿ, ಪಂಗಡಗಳ ಆಧಾರಿತ ನೇಮಕಾತಿಗಳಲ್ಲಿ ಹಲವಾರು ಅಭ್ಯರ್ಥಿಗಳು ಖೋಟಾ ಜಾತಿ ಪ್ರಮಾಣ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿದ್ದಾರೆಂಬ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

Sack employees who got jobs with fake caste certificates: Govt

ಈ ಕುರಿತಂತೆ ತನ್ನ ಅಧೀನ ಇಲಾಖೆಗಳಿಗೆ ಸಂದೇಶ ರವಾನಿಸಿರುವ ಕೇಂದ್ರ ಸರ್ಕಾರ, ತಮ್ಮಲ್ಲಿನ ಎಲ್ಲಾ ಉದ್ಯೋಗಿಗಳ ಜಾತಿ ಪ್ರಮಾಣ ಪತ್ರಗಳನ್ನು ಪುನರ್ ಪರಿಶೀಲಿಸಿ ವಿವರಣೆ ಕಳುಹಿಸುವಂತೆ ಸೂಚಿಸಿದೆ.

ಲೋಕಸಭೆಯಲ್ಲೂ ಈ ವಿಚಾರ ಈಗಾಗಲೇ ಪ್ರಸ್ತಾಪವಾಗಿದೆ. ಕೇಂದ್ರ ಸಿಬ್ಬಂದಿ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು, ಈ ಆರೋಪಗಳ ಬಗ್ಗೆ ಲಿಖಿತ ಉತ್ತರ ನೀಡಿ, ಇತ್ತೀಚೆಗೆ ಆಗಿರುವ 1,800 ನೇಮಕಾತಿಗಳಲ್ಲಿ ಸುಳ್ಳು ಜಾತಿ ಪ್ರಮಾಣ ಸಲ್ಲಿಸಿರುವವರ ಬಗ್ಗೆ ಮೇಲ್ನೋಟಕ್ಕೆ ಅನುಮಾನಾಸ್ಪದವಾಗಿ ಕಂಡುಬಂದಿರುವ ಸುಮಾರು 276 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಇನ್ನು, 521 ನೇಮಕಾತಿಗಳಲ್ಲಿ ಈಗಾಗಲೇ ಅವರ ಸುಳ್ಳು ಜಾತಿ ಪ್ರಮಾಣ ಪತ್ರವು ಸಾಬೀತಾಗಿದ್ದು ಅವರು, ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಇನ್ನುಳಿದ, 1051 ನೇಮಕಾತಿಗಳ ಬಗ್ಗೆ ಇನ್ನಷ್ಟೇ ಕೂಲಂಕಷ ವಿಚಾರಣೆ ನಡೆಸಬೇಕಿದೆ ಎಂದು ಹೇಳಿದ್ದಾರೆ.

English summary
Employees who got jobs using forged scheduled or backward caste certificates will be dismissed, the Center has said on June 16, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X