ಶಬರಿಮಲೆ: ಅರನ್ಮುಲದಿಂದ 'ತಂಗ ಅಂಗಿ' ಮೆರವಣಿಗೆ ಆರಂಭ, ಇದರ ಹಿನ್ನೆಲೆ ತಿಳಿಯಿರಿ
Thanka Anki: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಸನ್ನಿಧಾನದಲ್ಲಿ ನಡೆಯುವ ಮಂಡಲ ಪೂಜೆಗೆ ಮುನ್ನದ ಮಹತ್ವದ ಆಚರಣೆಯಾಗಿ, ಅಯ್ಯಪ್ಪ ಸ್ವಾಮಿಗೆ ಅಲಂಕರಿಸುವ ಚಿನ್ನದ ವಸ್ತ್ರವಾದ 'ತಂಗ ಅಂಗಿ'ಯ ಮೆರವಣಿಗೆ ಮಂಗಳವಾರ ಬೆಳಿಗ್ಗೆ ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಆರಂಭವಾಯಿತು. ಬೆಳಿಗ್ಗೆ ಸುಮಾರು 7 ಗಂಟೆಗೆ ದೇವಾಲಯದ ಅಧಿಕಾರಿಗಳು ಹಾಗೂ ಭಕ್ತರೊಂದಿಗೆ ತಂಗ ಅಂಗಿ ಪವಿತ್ರ ಯಾತ್ರೆ ಶುರುವಾಯಿತು. ಈ ಮೆರವಣಿಗೆ ಶಬರಿಮಲೆಯಲ್ಲಿ ನಡೆಯುವ 41 ದಿನಗಳ ಮಂಡಲ ವ್ರತದ ಅಂತ್ಯವಾದ ಮಂಡಲ ಪೂಜೆಗೆ ದಿನಗಣನೆಯನ್ನು ಸೂಚಿಸುತ್ತದೆ.
ಮಲಯಾಳಂ ಭಾಷೆಯಲ್ಲಿ "ತಂಗ" ಎಂದರೆ ಚಿನ್ನ ಮತ್ತು "ಅಂಗಿ" ಎಂದರೆ ಉಡುಪು ಅಥವಾ ವಸ್ತ್ರ ಎಂದರ್ಥ. ಇದು ತಿರುವಾಂಕೂರು ರಾಜಮನೆತನದವರಿಂದ ಅಯ್ಯಪ್ಪ ಸ್ವಾಮಿಗೆ ಅರ್ಪಿಸಲಾದ ಒಂದು ಅಮೂಲ್ಯವಾದ ಚಿನ್ನದ ಉಡುಪು. ಪ್ರತಿ ವರ್ಷ ಮಂಡಲ ಪೂಜೆಯ ವೇಳೆ ಇದನ್ನು ಪತ್ತನಂತಿಟ್ಟದ ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಶಬರಿಮಲೆಗೆ ಸಾಗಿಸಲಾಗುತ್ತದೆ. ಮಂಡಲ ಪೂಜೆಯ ದಿನದಂದು ಅಯ್ಯಪ್ಪನ ಮೂರ್ತಿಯ ಮೇಲೆ ಇದನ್ನು ಇಟ್ಟು ಅಲಂಕರಿಸಲಾಗುತ್ತದೆ. ಇದು 41 ದಿನಗಳ ದೀರ್ಘ ಉಪವಾಸದ ಕೊನೆಯ ದಿನ.

ತಂಗ ಅಂಗಿಯನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿಯ ವಿಶೇಷ ಅಲಂಕಾರದ ಮಂಡಲ ಪೂಜೆಯ ಸಂದರ್ಭದಲ್ಲಿ ಬಳಸಲಾಗುತ್ತದೆ. ತಂಗ ಅಂಗಿ ಎನ್ನುವುದು ಅತ್ಯಂತ ಮೌಲ್ಯಯುತವಾದ ಚಿನ್ನದ ವಸ್ತ್ರವಾಗಿದ್ದು, ಇದನ್ನು ತಿರವಂಕೂರು ಮಹಾರಾಜರಾದ ಚಿತ್ತಿರೈ ತಿರುಣಾಳ್ ಬಾಲರಾಮ ವರ್ಮಾ ಅವರು ದಾನವಾಗಿ ನೀಡಿದ್ದರು. ಈ ಪವಿತ್ರ ವಸ್ತ್ರವನ್ನು ವಿಶೇಷವಾಗಿ ಅಲಂಕರಿಸಿದ ರಥದಲ್ಲಿ ಸಾಗಿಸಲಾಗುತ್ತದೆ. ಇಂದು ಕೂಡ ಮೆರವಣಿಗೆ ಸಾಗುವ ಮಾರ್ಗದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಪೂಜೆ ಸಲ್ಲಿಸಿ, ತಂಕ ಅಂಕಿಯನ್ನು ದರ್ಶನ ಮಾಡುವ ಅವಕಾಶ ಪಡೆದರು. ಮೆರವಣಿಗೆ ವೇಳೆ ನೀಡಲಾದ ಪ್ರಸಾದವನ್ನು ಸಹ ಭಕ್ತರು ಸ್ವೀಕರಿಸಿದರು.
ಡಿಸೆಂಬರ್ 26ರವರೆಗೆ ಮೆರವಣಿಗೆ
ಸಂಪ್ರದಾಯದಂತೆ, ತಂಗ ಅಂಗಿ ರಥವು ಮಾರ್ಗಮಧ್ಯೆ ಹಲವು ದೇವಸ್ಥಾನಗಳಲ್ಲಿ ತಂಗಿ, ಬಳಿಕ ಶಬರಿಮಲೆ ದೇವಸ್ಥಾನವನ್ನು ತಲುಪುತ್ತದೆ. ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರು ಆಗಮಿಸುವ ನಿರೀಕ್ಷೆ ಇದೆ. ಕಳೆದ ವರ್ಷ, ಯಾತ್ರಾ ಅವಧಿಯಲ್ಲಿ 32.50 ಲಕ್ಷಕ್ಕಿಂತ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದರು. ತಂಗ ಅಂಗಿ ಡಿಸೆಂಬರ್ 26ರಂದು ಸಂಜೆ ದೀಪಾರಾಧನೆಗೂ ಮುನ್ನ ಶಬರಿಮಲೆ ತಲುಪಲಿದೆ. ಮಂಡಲ ಪೂಜೆಯ ದಿನ ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ಈ ಚಿನ್ನದ ವಸ್ತ್ರವನ್ನು ಅಲಂಕರಿಸಲಾಗುತ್ತದೆ. ಇದು ಯಾತ್ರಾ ಕಾಲದ ಅತ್ಯಂತ ಮಹತ್ವದ ವಿಧಿವಿಧಾನಗಳಲ್ಲಿ ಒಂದಾಗಿದೆ.
ಮೊದಲ ದಿನ ಓಮಲ್ಲೂರು ಶ್ರೀ ರಕ್ತಕಂದಸ್ವಾಮಿ ದೇವಸ್ಥಾನದಲ್ಲಿ, ಎರಡನೇ ದಿನ ಕೊನ್ನಿ ಮುರಿಂಗಮಂಗಲಂ ಮಹಾದೇವ ದೇವಸ್ಥಾನದಲ್ಲಿ ಮತ್ತು ಪಯಣದ ಸಮಾರೋಪ ದಿನದಂದು ರಾನ್ನಿ-ಪೆರುನಾಡು ಕಕ್ಕಡುಕೋಯಿಕಲ್ ಶ್ರೀಧರ್ಮ ಶಾಸ್ತ ದೇವಸ್ಥಾನದಲ್ಲಿ ಮೆರವಣಿಗೆಯು ಡಿ.26 ರಂದು ಸಂಜೆ 6 ಗಂಟೆಗೆ ಅಯ್ಯಪ್ಪನ ದೇವಸ್ಥಾನವನ್ನು ತಲುಪಲಿದೆ. ಅಂದು ಸಂಜೆ ದೀಪಾರಾಧನೆಗೆ ಮುಂಚಿತವಾಗಿ ಈ ಮೆರವಣಿಗೆ ಸನ್ನಿಧಾನ ಸೇರಲಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications