ಋತುಚಕ್ರ ಪತ್ತೆಹಚ್ಚಿ ಅಂದವನ ವಿರುದ್ಧ ಮಹಿಳೆಯರ ಸಮರ
ಕೊಚ್ಚಿ, ನವೆಂಬರ್, 24: ಸ್ತ್ರೀಯರ ನಿಸರ್ಗದತ್ತ ಪ್ರಕ್ರಿಯೆ ಬಗ್ಗೆ ಗೊಂದಲಕಾರಿಯಾಗಿ ಮಾತನಾಡಿದ್ದ ಕೇರಳದ ಅಯ್ಯಪ್ಪಸ್ವಾಮಿ ದೇಗುಲದ ಮಂಡಳಿ ಮುಖ್ಯಸ್ಥ ಪ್ರಯಾರ್ ಗೋಪಾಲಕೃಷ್ಣನ್ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ವಿರುದ್ಧ ಆಂದೋಲನವೇ ಶುರುವಾಗಿದೆ.
ಇದಕ್ಕೆಲ್ಲಾ ಕಾರಣವಾಗಿರುವುದು ಪ್ರಯಾರ್ ಗೋಪಾಲಕೃಷ್ಣನ್ ಅವರು ನೀಡಿದ್ದ ಹೇಳಿಕೆ. ಮಹಿಳೆಯರು ದೇವಾಲಯ ಪ್ರವೇಶ ಮಾಡುವುದಾದರೆ ಮುಟ್ಟಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಿ ನಂತರ ಅವಕಾಶ ಕಲ್ಪಿಸಬೇಕು. ಇದಕ್ಕೆ ಒಂದು ಯಂತ್ರ ಮೀಸಲಿಟ್ಟರು ತಪ್ಪಿಲ್ಲ ಎಂದು ನೀಡಿರುವ ಹೇಳಿಕೆ ಮಹಿಳಾ ವಲಯದಲ್ಲಿ ವಿರೋಧದ ಅಲೆಯನ್ನೇ ಹುಟ್ಟುಹಾಕಿದೆ.[ಓಣ್ಯಾಗಿನ ಹೆಂಗಸ್ರಿಂದ ಕ್ರಾಸ್ಡ್ ಲೆಗ್ ಮೂವ್ಮೆಂಟ್!]
ಯಂತ್ರದ ಮೂಲಕ ಪರೀಕ್ಷಿಸಿದ ಮೇಲೆಯೇ ಶಬರಿಮಲೆ ದೇಗುಲದೊಳಗೆ ಮಹಿಳೆಯರನ್ನು ಬಿಡಬೇಕು ಎಂಬ ದೇಗುಲದ ಆಡಳಿತ ಮಂಡಳಿ ಮುಖ್ಯಸ್ಥ ಪ್ರಯಾರ್ ಗೋಪಾಲಕೃಷ್ಣನ್ ಹೇಳಿಕೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಆರಂಭವಾಗಿದೆ.[ಬುರ್ಖಾ ಧರಿಸಿ ಬಂದವರು ಮುಸ್ಲಿಂ ಮಹಿಳೆಯಲ್ಲ!]
ಆಂದೋಲನ ಆರಂಭಿಸಿರುವ ಮಹಿಳೆಯರು "ಹ್ಯಾಪಿ ಟು ಬ್ಲೀಡ್' (ಮುಟ್ಟಾಗುವುದಕ್ಕೆ ಸಂತೋಷವಿದೆ)ಎಂಬ ಪುಟ ತೆಗೆದು ಅಪ್ ಡೇಟ್ ಮಾಡುತ್ತಿದ್ದಾರೆ. ಆಂದೋಲನ ಆರಂಭಿಸಿದ್ದಾರೆ.ಇದಕ್ಕೆ ಸಮಾಜದ ವಿವಿಧ ವರ್ಗಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಫೇಸ್ ಬುಕ್ ಖಾತೆ ಹೊಂದಿರುವ ಮಹಿಳೆಯರು ನಿಮ್ಮ ಫೇಸ್‌ಬುಕ್ ಪ್ರೊಫೈಲಲ್ಲಿ ಭಿತ್ತಿಪತ್ರಗಳ ಮೂಲಕ, ಸ್ಯಾನಿಟರಿ ನ್ಯಾಪ್‌ಕಿನ್ ಮೂಲಕ, ಚಾರ್ಟ್‌ಗಳ ಮೂಲಕ ಇದೇ ಹೇಳಿಕೆಯನ್ನು ಬರೆದು, ಬೆಂಬಲ ನೀಡಿ ಎಂದು ಕೋರಿದ್ದಾರೆ.

ಪೇಜ್ ರಚಿಸಿದ್ದು ಯಾರು?
ಹೇಳಿಕೆ ಖಂಡಿಸಿ ನಿಕಿತಾ ಆಜಾದ್ ಎಂಬ 21 ವರ್ಷದ ಯುವತಿ ಈ ಹ್ಯಾಪಿ ಟು ಬ್ಲೀಡ್ ಎಂಬ ಪೇಜ್ ಆರಂಭ ಮಾಡಿದ್ದರು.

ಮಹಿಳೆಯರಿಗೆ ಪ್ರವೇಶವಿಲ್ಲ
ಕೇರಳ ರಾಜ್ಯದ ಪ್ರಸಿದ್ಧ ದೇಗುಲ ಶಬರಿಮಲೆಗೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಪ್ರತಿನಿತ್ಯ ಆಗಮಿಸುತ್ತಾರೆ. ಆದರೆ ಮಹಿಳೆಯರ ಪ್ರವೇಶಕ್ಕೆ ಇಲ್ಲಿ ಅವಕಾಶ ನೀಡುವುದಿಲ್ಲ. ಹಿಂದೆ ಕನ್ನಡದ ಹಿರಿಯ ನಟಿ ಜಯಮಾಲಾ ಅಯ್ಯಪ್ಪಸ್ವಾಮಿ ಪಾದ ಮುಟ್ಟಿದ್ದರು ಎಂದು ವಿವಾದವೆದ್ದಿತ್ತು.

ಸಾಮಾಜಕ ತಾಣಗಳಲ್ಲಿ ಆಕ್ರೋಶ
ಮಹಿಳೆಯರು ಸಾಮಾಜಿಕ ತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹ್ಯಾಪಿ ಟು ಬ್ಲೀಡ್ ಎಂಬ ಭಿತ್ತಿ ಪತ್ರವನ್ನು ಹಾಕಿ ಸ್ಟೇಟಸ್ ಅಪ್ ಡೇಟ್ ಮಾಡುತ್ತಿದ್ದಾರೆ.

ಎಂಥ ಮೂರ್ಖರನ್ನು ಹೆತ್ತೆವು!
Thank God, ನನ್ನಜ್ಜಿ, ನನ್ನಮ್ಮ, ಚಿಕ್ಕಮ್ಮ, ಅತ್ತೆ, ಅಕ್ಕ ಎಲ್ಲರೂ ಋತುಮತಿಯರಾಗಿದ್ದರು and ನಾನು ಕೂಡ. ಮೊನ್ನೆ ನನ್ನ ಮಗಳೂ ಮೈನೆರೆದಳು and we all are happy to bleed ! But I am sorry ಕೆಲವು ಅಮ್ಮಂದಿರು ಈ ಸುಖದಿಂದ ತಾತ್ಕಾಲಿಕವಾಗಿ ವಂಚಿತರಾಗ ಬೇಕಾಯ್ತು ಇಂತಹ ಮೂರ್ಖರನ್ನು ಹೆರಲು ...(ಫೇಸ್ ಬುಕ್ ನಲ್ಲಿ ಅಂಜಲಿ ರಾಮಣ್ಣ ಅವರ ಕಮೆಂಟ್)












Click it and Unblock the Notifications