ಶಬರಿಮಲೆ ಮಹಿಳೆಯರ ಪ್ರವೇಶ ನಿಷಿದ್ಧ ಪ್ರಶ್ನಿಸಿದ್ದ ವಕೀಲರಿಗೆ ರಕ್ಷಣೆ
ಬೆಂಗಳೂರು, ಜನವರಿ, 18: ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷಿದ್ಧ ಕುರಿತು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದ ವಕೀಲ ನೌಶಾದ್ ಅಹಮದ್ ಖಾನ್ ಅವರಿಗೆ ಸುಪ್ರೀಂಕೋರ್ಟ್ ಕಾನೂನಿನ ಅಭಯ ನೀಡಿದೆ.
ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ನ್ಯಾಯವಾದಿ ನೌಶಾದ್ ಅಹಮದ್ ಖಾನ್ ಅವರಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು ಎಂಬ ಸುದ್ದಿಯೂ ವರದಿಯಾಗಿತ್ತು. ಇದಾದ ನಂತರ ನೌಶಾದ್ ಅವರಿಗೆ ಪೊಲೀಸ್ ರಕ್ಷಣೆ ನೀಡುವಂತೆ ದೆಹಲಿ ನ್ಯಾಯಾಲಯ ಸೂಚನೆ ನೀಡಿದೆ.[ಶಬರಿಮಲೆಗೆ ಮಹಿಳೆ ಪ್ರವೇಶ ನಿಷಿದ್ಧ ಏಕೆ? ಸುಪ್ರೀಂ ಪ್ರಶ್ನೆ]

ಸಾಮಾಜಿಕ ತಾಣ ಮತ್ತು ಫೋನ್ ಮೂಲಕ ನೌಶಾದ್ ಅವರಿಗೆ ಬೆದರಿಕೆಗಳು ಬಂದಿದ್ದವು. ಈ ಬೆದರಿಕೆಗಳನ್ನು ನೀಡಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ನೌಶಾದ್ ಅವರಿಗೆ ಭರವಸೆ ನೀಡಿದೆ.
ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಅಸಂವಿಧಾನಿಕ. ಮಹಿಳೆಯರ ಪ್ರವೇಶವನ್ನು ಯಾರೂ ತಡೆಯಬಾರದು ಎಂದು ಹೇಳಿತ್ತು, ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿ ವಿವರಣೆ ನೀಡಿ ಎಂದು ಕೇರಳ ಸರ್ಕಾರಕ್ಕೆ ತಿಳಿಸಿತ್ತು.[ಋತುಚಕ್ರ ಪತ್ತೆಹಚ್ಚಿ ಅಂದವನ ವಿರುದ್ಧ ಮಹಿಳೆಯರ ಸಮರ]
ಋತುಮತಿಯಾದ ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದು ಎಂದು ಹಿಂದೊಮ್ಮೆ ಹೇಳಿಕೆ ನೀಡಿದ್ದ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಯಾರ್ ಗೋಪಾಲಕೃಷ್ಣನ್ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದರು. ದೇವಾಲಯ ಪ್ರವೇಶ ಮಾಡುವುದಾದರೆ ಮುಟ್ಟಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಿ ನಂತರ ಅವಕಾಶ ಕಲ್ಪಿಸಬೇಕು ಎಂದು ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ 'ಹ್ಯಾಪಿ ಟು ಬ್ಲಡ್ ' ಎಂಬ ಅಭಿಯಾನವೇ ಆರಂಭವಾಗಿತ್ತು.












Click it and Unblock the Notifications