ಮುಂದಿನ ಮಾರ್ಚ್ ಒಳಗೆ ಸಾರ್ಕ್ ಉಪಗ್ರಹ ಕಕ್ಷೆಗೆ
ತಿರುವನಂತಪುರಂ: ನವೆಂಬರ್,8: ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ಅನುಕೂಲವಾಗುವಂತೆ ಭಾರತ ಸರ್ಕಾರ ಪ್ರಸ್ತಾಪಿಸಿರುವ ಭಾರತದ ಮಹತ್ವಾಕಾಂಕ್ಷಿ ದಕ್ಷಿಣ ಏಷ್ಯಾ ಉಪಗ್ರಹವನ್ನು 2017 ಮಾರ್ಚ್ ವೇಳೆಗೆ ಕಕ್ಷೆಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಅವರು ಮಾರ್ಚ್ ಒಳಗೆ ಉಪಗ್ರಹ ಉಡಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಡಿಸೆಂಬರ್ ಒಳಗೆ ಉಪಗ್ರಹ ಉಡಾವಣೆಗೊಳ್ಳಬೇಕಿತ್ತು. ಆದರೆ ಕಾರಣಾಂತರಗಳಿಂದ ಮಾರ್ಚ್ ಗೆ ಮುಂದೂಡಲಾಗಿದೆ.

2014ರಲ್ಲಿ ನೇಪಾಳದಲ್ಲಿ ನಡೆದ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿಯವರು "ಸಾರ್ಕ ಸದಸ್ಯ ರಾಷ್ಟ್ರಗಳಿಗೆ ಹಲವು ಕ್ಷೇತ್ರಗಳಲ್ಲಿ ನೆರವಾಗಲು ಭಾರತ ಸರ್ಕಾರ ಉಪಗ್ರಹ ಉಡಾವಣೆ ಮಾಡಲಿದೆ ಎಂದು ತಿಳಿಸಿದ್ದರು.
ಈ ಉಪಗ್ರಹವು ಟೆಲಿ ಕಮ್ಯುನಿಕೇಷನ್, ಟೆಲಿ ಮೆಡಿಸಿನ್ ಮೊದಲಾದ ಕ್ಷೇತ್ರಗಳ ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಲಾಗಿದೆ.
ಜಿಎಸ್ ಎಲ್ ವಿ ಮಾರ್ಕ್ 3 ಉಪಗ್ರಹ ಈ ಡಿಸೆಂಬರ್ ನಲ್ಲಿ ಉಡಾವಣೆಗೊಳ್ಳುವ ನಿರೀಕ್ಷೆ ಇದ್ದು, ಉಪಗ್ರಹ ಉಡಾವಣೆಗೆ ಬೇಕಾದ ಅಗತ್ಯ ತಯಾರಿ ಭರದಿಂದ ಸಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಅವರು ತಿಳಿಸಿದ್ದಾರೆ.












Click it and Unblock the Notifications