ಭಾರತಕ್ಕೆ ಚಕ್ಕರ್.. ಚೀನಾಗೆ ಹಾಜರ್: ಏನಿದು ಪುಟಿನ್ ಲೆಕ್ಕಾಚಾರ?
ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಶಾಕ್ ನೀಡಿದ್ದಾರೆ, ಜಿ-20 ಸಮ್ಮೇಳನ (G20 summit)ಕ್ಕೆ ಬರುವುದಿಲ್ಲ ಎಂದು ಹೇಳಿದ್ದ ಪುಟಿನ್ ಈಗ ಚೀನಾಗೆ ಹೋಗಲು ತಯಾರಿ ನಡೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು. ಅಲ್ಲದೆ ಇದೇ ವೇಳೆ ನಾನು ಭಾರತಕ್ಕೆ ಬರಲು ಆಗುತ್ತಿಲ್ಲ ಎಂದು ಪುಟಿನ್ ತಿಳಿಸಿದ್ದರು. ಈಗ ನೋಡಿದರೆ ಚೀನಾಗೆ ಹೋಗುತ್ತಿದ್ದಾರಂತೆ.
ಪುಟಿನ್ ರಷ್ಯಾ ಬಿಟ್ಟು ಹೊರಗೆ ಬರಲು ಹೆದರುವ ಪರಿಸ್ಥಿತಿ ಇದ್ದು, ಭಯದಲ್ಲೇ ಇದ್ದಾರೆ. ಅವರ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಹೊರಡಿಸಿರುವ ಬಂಧನ ವಾರಂಟ್‌ಗೆ ಚಿಂತಿತರಾಗಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಪುಟಿನ್ ಬ್ರಿಕ್ಸ್ ಸೇರಿ, ಹಲವಾರು ಪ್ರಮುಖ ಶೃಂಗಸಭೆಗೆ ಬಂದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ರಷ್ಯಾ ಬಿಟ್ಟು ಬೇರೆ ದೇಶಕ್ಕೆ ಹೊರಟು ನಿಂತಿದ್ದರೆ. ಯುದ್ಧ ಅಪರಾಧಿ ಎಂದು ಘೋಷಿಸಿದ ಬಳಿಕ ವ್ಲಾದಿಮಿರ್ ಪುಟಿನ್ ಬಂಧವಾಗುತ್ತೆ ಎಂದು ಭಾವಿಸಲಾಗಿತ್ತು. ಹೀಗಾಗಿ ಚೀನಾಗೆ ಹೋಗುತ್ತಿರುವ ಬಗ್ಗೆ ಪುಟಿನ್ ಬೆಂಬಲಿಗರಲ್ಲಿ ಭಯ ಶುರುವಾಗಿದೆ.

ಚೀನಾದಲ್ಲಿ ಅರೆಸ್ಟ್ ಆಗುತ್ತಾರಾ ಪುಟಿನ್
ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಒಂದು ಸ್ವಾಯತ್ತ ಸಂಸ್ಥೆಯೇ ಆಗಿದ್ದರೂ, ಐಸಿಸಿ ಬಳಿ ಸ್ವಂತ ಸೇನೆ ಇಲ್ಲ. ಹೀಗಾಗಿ ಪುಟಿನ್ ಅವರನ್ನ ಚೀನಾಗೆ ನುಗ್ಗಿ ಬಂಧಿಸಲು ಸಾಧ್ಯತೆ ಇಲ್ಲ. ಅದರಲ್ಲೂ ಚೀನಾ ಐಸಿಸಿ ಹಾಗೂ ವಿಶ್ವಸಂಸ್ಥೆಗೆ ಅಷ್ಟೊಂದು ಅಧಿಕಾರ ನೀಡಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಚೀನಾಗೆ ಅಮೆರಿಕದ ಜೊತೆ ಸ್ನೇಹ ಇಲ್ಲ, ಹಾಗೇ ರಷ್ಯಾ ಜೊತೆಗೆ ಉತ್ತಮ ಸಂಬಂಧ ಇದೆ. ಇದೆಲ್ಲವನ್ನು ಅಳೆದು, ತೂಗಿ ಲೆಕ್ಕ ಹಾಕಿದರೆ ಪುಟಿನ್ ಅರೆಸ್ಟ್ ಆಗೋದು ಅನುಮಾನ. ಆದ್ರೂ ಭಯ ಇದ್ದೇ ಇದೆ. ಹೀಗಾಗಿ ರಷ್ಯಾ ಬೇರೆ ಏನು ವ್ಯವಸ್ಥೆ ಮಾಡಿಕೊಂಡಿದೆ? ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಪುಟಿನ್ ಚೀನಾಗೆ ಹೋಗುತ್ತಿರುವುದು ಏಕೆ?
ಅಷ್ಟಕ್ಕೂ ಬೆಲ್ಟ್ & ರೋಡ್ ಫೋರಂ-2023ರ ಸಭೆಯಲ್ಲಿ ಭಾಗವಹಿಸಲು ಪುಟಿನ್ ಇದೀಗ ಚೀನಾಗೆ ಹೋಗುತ್ತಿದ್ದಾರೆ. ಆದರೆ ಇದೇ ಪುಟಿನ್ ಅವರು ಭಾರತದಲ್ಲಿ ನಡೆಯುವ ಜಿ-20 ಸಮ್ಮೇಳನಕ್ಕೆ ಬರುವುದಿಲ್ಲ ಎಂದಿದ್ದರು. ಆದ್ರೆ ಈಗ ಹತ್ತಿರ ಹತ್ತಿರ ಒಂದು ವರ್ಷದ ಬಳಿಕ ರಷ್ಯಾ ಬಿಟ್ಟು ಹೊರಹೋಗಲು ಮುಂದಾಗಿದ್ದಾರೆ ಪುಟಿನ್. ಹೀಗಾಗಿ ಅಮೆರಿಕ ಸೇರಿದಂತೆ ಪುಟಿನ್ ಶತ್ರು ರಾಷ್ಟ್ರಗಳ ಕಣ್ಣು ನೆಟ್ಟಗಾಗಿದೆ, ಗಮನ ಚೀನಾ ಕಡೆಗೆ ನೆಟ್ಟಿದೆ. ಪುಟಿನ್ & ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಡುವೆ ಉತ್ತಮ ಒಡನಾಟ ಇದೆ.
ಪುಟಿನ್ & ಪ್ರಧಾನಿ ಮೋದಿ ಚರ್ಚೆ
ಅಂದಹಾಗೆ ಸೆಪ್ಟೆಂಬರ್ 9 & 10ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ, ತಾವು ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪುಟಿನ್ ತಿಳಿಸಿದ್ರು. ಹೀಗಾಗಿ ರಷ್ಯಾ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಬರುತ್ತಿದ್ದಾರೆ. ಪುಟಿನ್ ಈ ವಿಚಾರ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿತ್ತು. ಪ್ರಧಾನಮಂತ್ರಿಗಳ ಕಚೇರಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಪಿಎಂ ಮೋದಿ ಅವರ ಮಾತುಕತೆಯ ಬಗ್ಗೆ ಮಾಹಿತಿ ನೀಡಿತ್ತು. ಈಗ ನೋಡಿದರೆ ಚೀನಾಗೆ ಹೊರಡಲು ಪುಟಿನ್ ಸಿದ್ಧತೆ ನಡೆಸಿದ್ದಾರಂತೆ.

ಜಿ-20 ರಾಷ್ಟ್ರಗಳೇ ಮುಂದಿನ ಭವಿಷ್ಯ!
ಜಿ-20 ಪಟ್ಟಿಯ ಬಹುತೇಕ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾಗಿವೆ. ಭಾರತ, ರಷ್ಯಾ, ಚೀನಾ, ಬ್ರೆಜಿಲ್ & ದಕ್ಷಿಣ ಆಫ್ರಿಕಾ ಇರುವ ಒಂದು ಶಕ್ತಿಶಾಲಿ ಗುಂಪು ಜಿ-20. ಇದೇ ಕಾರಣಕ್ಕೆ ಜಿ-20 ಶೃಂಗಸಭೆ ಬಗ್ಗೆ ಜಗತ್ತು ಕುತೂಹಲ ಹೊಂದಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಭಾರತದ ಶಕ್ತಿಯನ್ನ ಮತ್ತೆ ಜಗತ್ತಿಗೆ ತೋರಿಸುತ್ತೆ. ಹೀಗಾಗಿ ಭಾರತ ಕೂಡ ಜಿ-20 ಸಭೆಗಾಗಿ ಭಾರಿ ಸಿದ್ಧತೆ ನಡೆಸಿದೆ.












Click it and Unblock the Notifications