ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ
ನವದೆಹಲಿ, ಏಪ್ರಿಲ್ 12: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾದ ಅತ್ಯುನ್ನತ ಪ್ರಶಸ್ತಿ 'ಆರ್ಡರ್ ಆಫ್ ಸೇಂಟ್ ಆಂಡ್ರೂ ದಿ ಅಪೋಸ್ಟಲ್' ಗೌರವ ದೊರೆತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಷ್ಯಾ ಮತ್ತು ಭಾರತದ ನಡುವೆ ವಿಶೇಷ ಮತ್ತು ಮಹತ್ವದ ಕಾರ್ಯತಂತ್ರ ಪಾಲುದಾರಿಕೆಯನ್ನು ಉತ್ತೇಜಿಸುವಲ್ಲಿ ಅಮೋಘ ಸೇವೆ ಸಲ್ಲಿಸಿದ್ದಕ್ಕಾಗಿ ಈ ಗೌರವ ನೀಡಲಾಗಿದೆ ಎಂದು ರಷ್ಯಾದ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
'ಆರ್ಡರ್ ಆಫ್ ಸೇಂಟ್ ಆಂಡ್ರೂ ದಿ ಅಪೋಸ್ಟಲ್' ರಷ್ಯಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

2017ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಈ ಗೌರವ ನೀಡಲಾಗಿತ್ತು. ಈ ಪ್ರಶಸ್ತಿಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಳು ಉನ್ನತ ಜಾಗತಿಕ ಪ್ರಶಸ್ತಿಗಳು ದೊರೆದಂತಾಗಿವೆ.
ರಷ್ಯಾ ಒಕ್ಕೂಟದ ಅತ್ಯುನ್ನತ ಪ್ರಶಸ್ತಿಯಾಗಿರುವ ಇದು, ಅಲ್ಲಿನ ಅತ್ಯಂತ ಪ್ರಾಚೀನ ಪ್ರಶಸ್ತಿಯೂ ಆಗಿದೆ. 1698ರಲ್ಲಿ ಇದನ್ನು ರಷ್ಯಾದ ರಾಜಪ್ರಭುತ್ವ ಸ್ಥಾಪಿಸಿತ್ತು. ಸೋವಿಯತ್ ಆಡಳಿತದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿತ್ತು. ಬಳಿಕ ಒಕ್ಕೂಟ ವಿಭಜನೆಯಾದ ನಂತರ 1998ರಲ್ಲಿ ಅದನ್ನು ಪುನಃ ಆರಂಭಿಸಲಾಯಿತು.
On April 12, @narendramodi was decorated with the Order of St Andrew the Apostle for exceptional services in promoting special & privileged strategic partnership between 🇷🇺 and 🇮🇳 and friendly relations between the Russian and Indian peoples.@mfa_russia @MEAIndia @IndEmbMoscow pic.twitter.com/jUFt5aawxw
— Russia in India (@RusEmbIndia) 12 April 2019
ಒಂದು ವಾರದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್(UAE) ನ ಅತ್ಯುನ್ನತ ನಾಗರಿಕ ಗೌರವವನ್ನು ಪ್ರಕಟಿಸಲಾಗಿತ್ತು. ಯುಎಇ ಅಧ್ಯಕ್ಷ ಖಾಲಿಫಾ ಬಿನ್ ಜಾಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಪ್ರಧಾನಿ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಗೌರವವಾದ 'ಝಾಯದ್ ಮೆಡಲ್' ಅನ್ನು ಘೋಷಿಸಿದ್ದರು.












Click it and Unblock the Notifications