ಅಗ್ಗದ 'ಫ್ರೀಡಂ 251 ಮೊಬೈಲ್' ತಯಾರಕರಿಂದ ಹೊಸ ಪ್ರಕಟಣೆ

Posted By:
Subscribe to Oneindia Kannada

ಈಗ ಎಲ್ಲೆಲ್ಲೂ ಅಗ್ಗದ ಫ್ರೀಡಂ 251 ಸ್ಮಾರ್ಟ್ ಫೋನ್ ಸುದ್ದಿ. ನೀವೂ ಬುಕ್ ಮಾಡಿದ್ದೀರಾ, ಅದು ನಿಜವಾಗ್ಲೂ ಬರುತ್ತೇನ್ರೀ, ಸರ್ವರ್ ಬ್ಲಾಕ್ ಆಗಿದೆಯಂತೆ ಅನ್ನೋ ಸುದ್ದಿಯ ನಡುವೆ 'ಬುಕ್ಕಿಂಗ್ ಕ್ಲೋಸ್ ಆಗಿದೆ' ಎಂದು ಫೋನಿನ ತಯಾರಕರಾಗಿರುವ ರಿಂಗಿಂಗ್ ಬೆಲ್ಸ್ ಸಂಸ್ಥೆ ತಿಳಿಸಿದೆ.

ಈ ನಡುವೆ ರಿಂಗಿಂಗ್ ಬೆಲ್ಸ್ ಸಂಸ್ಥೆಯು ತುರ್ತು ಪತ್ರಿಕಾಗೋಷ್ಠಿ ಕರೆದು ಇನ್ನೊಂದು ಪ್ರಕಟಣೆ ಹೊರಡಿಸಿದೆ. ಈಗ ಆಫರ್ ಮಾಡಲಾಗಿರುವ 251 ರೂಪಾಯಿ, ಬರೀ ಹ್ಯಾಂಡ್ಸೆಟ್ ಗೆ ಸಂಬಂಧ ಪಟ್ಟಿದ್ದು, ಈ ಫೋನಿಗೆ ಚಾರ್ಜರ್ ಅನ್ನು ಗ್ರಾಹಕರು ಪ್ರತ್ಯೇಕವಾಗಿ ಖರೀದಿಸಬೇಕಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. (ಫ್ರೀಡಂ 251 : ಸರ್ಕಾರದ ಸಬ್ಸಿಡಿ ಪಡೆದಿಲ್ಲ)

Rs. 251 smart phone charger to cost Rs. 20,000: Spoof article

ಫ್ರೀಡಂ 251 ಮೊಬೈಲ್ ಅನ್ನು ಹೊಸ ಟೆಕ್ನಾಲಜಿಯಲ್ಲಿ ತಯಾರಿಸಿರುವುದರಿಂದ ಬೇರೆ ಯಾವುದೇ ಮೊಬೈಲಿನ ಚಾರ್ಜರ್ ಅನ್ನು ಈ ಫೋನಿಗೆ ಉಪಯೋಗಿಸಲು ಸಾಧ್ಯವಿಲ್ಲ ಎಂದು ಸಂಸ್ಥೆಯ PRO ತಿಳಿಸಿದ್ದಾರೆ.[ಫ್ರೀಡಂ 251 ಮಾರಾಟದಿಂದ ರಿಂಗಿಂಗ್ ಬೆಲ್ ಗೆ ಲಾಭ ಎಷ್ಟು?]

ಹಾಗಾಗಿ, ಫ್ರೀಡಂ 251 ಸ್ಮಾರ್ಟ್ ಫೋನ್ ಬಳಸಲು ಹೊಸ ಚಾರ್ಜರ್ ಖರೀದಿಸಬೇಕು. ಇದರ ಬೆಲೆಯನ್ನು ಇಪ್ಪತ್ತು ಸಾವಿರ ರೂಪಾಯಿ ಎಂದು ನಿಗದಿ ಪಡಿಸಲಾಗಿದೆ. ಒಟ್ಟಾರೆ ಈ ಸ್ಮಾರ್ಟ್ ಫೋನಿನ ಬೆಲೆ ರೂಪಾಯಿ 251+20,000 = 20,251/- ರೂಪಾಯಿ ಎಂದು ಸಂಸ್ಥೆಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇದರಿಂದಾಗಿ, ಈ ಫೋನ್ ಬುಕ್ ಮಾಡಿರುವವರು ಚಾರ್ಜರ್ ಅನ್ನು ಪ್ರತ್ಯೇಕವಾಗಿ ಇಪ್ಪತ್ತು ಸಾವಿರ ರೂಪಾಯಿ ಪಾವತಿಸಿ ಖರೀದಿಸುವ ಅನಿವಾರ್ಯತೆಯಲ್ಲಿ ಬಿದ್ದಿದ್ದಾರೆ. (ಅಗ್ಗದ ಫ್ರೀಡಂ 251 ಮೊಬೈಲ್ ಬುಕಿಂಗ್ ಮುಕ್ತಾಯ)

ವಿಶ್ವದ ಚೀಪೆಸ್ಟ್ ಮೊಬೈಲ್ ಎಂದು ಪಬ್ಲಿಸಿಟಿ ಪಡೆದು ಈಗ ಚಾರ್ಜರ್ ಗೆ ಪ್ರತ್ಯೇಕವಾಗಿ ಪಾವತಿಸಬೇಕು ಎನ್ನುವುದು ಎಷ್ಟು ಸರಿ ಎನ್ನುವ ಮಾಧ್ಯಮವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಂಸ್ಥೆಯ ಅಧಿಕಾರಿಗಳು, ನಾವು ನಮ್ಮ ಮಾತಿನ ಪ್ರಕಾರ ನಡೆದುಕೊಳ್ಳುತ್ತಿದ್ದೇವೆ.

ನಾವು ಹೇಳಿದಂತೆ 251 ರೂಪಾಗಿಗೆ ಮೊಬೈಲ್ ನೀಡುತ್ತಿದ್ದೇವೆ, ಚಾರ್ಜರ್ ಕೂಡಾ ಈ ಪ್ಯಾಕೇಜಿನಲ್ಲಿ ಸೇರಿರುತ್ತದೆ ಎಂದು ನಾವು ತಿಳಿಸಿರಲಿಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ನುಣುಚಿ ಕೊಂಡಿದ್ದಾರೆ.

ಸಂಸ್ಥೆಯ ಈ ಹೊಸ ಆವಾಂತರ, ಉತ್ಸಾಹದಿಂದ ಫೋನ್ ಬುಕ್ ಮಾಡಿರುವವರನ್ನು ಬೆಚ್ಚಿಬೀಳಿಸಿದೆ. ಸಾಮಾಜಿಕ ತಾಣದಲ್ಲಿ ಸಂಸ್ಥೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. (ಇದೊಂದು ಕಾಲ್ಪನಿಕ ಲೇಖನ, ಕೃಪೆ: ಫಸ್ಟ್ ಪೋಸ್ಟ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian company Ringing bells which recently launched the world’s cheapest smartphone, Freedom 251, made another announcement. The charger of the new phone will be sold separately for 20,000 rupees - Spoof article.
Please Wait while comments are loading...