'ಧಾರ್ಮಿಕ ಮತಾಂತರ-ಲವ್ ಜಿಹಾದ್' ಅವಳಿ ಸಮಸ್ಯೆಗಳ ನಿಗ್ರಹಕ್ಕೆ RSS ಮುಖ್ಯಸ್ಥರ ಸೂಚನೆ
ಲಖನೌ, ಸೆಪ್ಟಂಬರ್ 25: ಸಮಾಜದಲ್ಲಿ ಧಾರ್ಮಿಕ ಮತಾಂತರ ಮತ್ತು 'ಲವ್ ಜಿಹಾದ್' ಘಟನೆಗಳ ಹೆಚ್ಚಾಗುತ್ತಿದೆ. ಇವೆರಡು ಅವಳಿ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಿ ಅವುಗಳನ್ನು ನಿಗ್ರಹಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ತಮ್ಮ ಸಂಘದ ಪದಾಧಿಕಾರಿಗಳಿಗೆ ಭಾನುವಾರ ಹೇಳಿದರು.
ಲಕ್ನೋದಲ್ಲಿ ಅವಧ್ ಪ್ರದೇಶದದಲ್ಲಿ ನಡೆದ ಸಾಂಸ್ಥಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಮೋಹನ್ ಭಾಗವತ್ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಮತಾಂತರದ ಬೆದರಿಕೆಯು ಹೆಚ್ಚು ಆಳವಾಗಿ ಬೇರೂರಿದಂತಿದೆ. ಇದೊಂದು ಗಂಭೀರ ಚಿಂತೆಗೆ ಕಾರಣವಾಗಿದೆ. ನಾವು ವಿಶೇಷವಾಗಿ ರಾಷ್ಟ್ರ ವಿರೋಧಿ ಮತ್ತು ಸಮಾಜ ವಿರೋಧಿ ಶಕ್ತಿಗಳು ಸಕ್ರಿಯವಾಗಿರುವ ಪ್ರದೇಶಗಳಲ್ಲಿ ಗಮನಹರಿಸಬೇಕಿದೆ ಎಂದು ಅವರ ಸೂಚಿಸಿದರು.

ದಿನೇ ದಿನೆ ಹೆಚ್ಚಾಗುತ್ತಿರುವ ಧಾರ್ಮಿಕ ಮತಾಂತರದ ವಿಷಯದ ನಿಗ್ರಹವು ಹಲವು ವರ್ಷಗಳಿಂದ ಸಂಘದ ಮಾರ್ಗಸೂಚಿಯಲ್ಲಿದೆ. ದೇಶದ ವಿವಿಧ ಭಾಗಗಳಲ್ಲಿ ಅದರಲ್ಲೂ ಮುಖ್ಯವಾಗಿ ಅಂತಾರಾಷ್ಟ್ರೀಯ ಗಡಿಗೆ ಸಮೀಪವಿರುವ ಪ್ರದೇಶಗಳಲ್ಲಿ ಇಂತಹ ಘಟನೆಗಳು ಆಗಿದ್ದಾಗ್ಗ ಪುನರಾವರ್ತಿಸುತ್ತವೆ. ಈ ಮಧ್ಯೆ ಮೋಹನ್ ಭಾಗವತ್ ಅವರ ಹೊಸ ಪುನರುತ್ಪಾದನೆಯು ಮಾತುಗಳು ಮಹತ್ವ ಪಡೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಂಘದ ಕಾರ್ಯ ವಿಸ್ತರಿಸಬೇಕು, ಬಲಪಡಿಸಬೇಕು
ಹಿಂದೂ ಸಮಾಜದ ಕಲ್ಯಾಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳು ಏನು ಎಂಬುದರ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥರು ತಿಳಿಸಿದ ಮಾರ್ಗೋಪಾಯಗಳೇನು ಎಂಬುದನ್ನು ನೋಡಿದರೆ, ಸಭೆ ನಡೆದ ಅವಧ್ ಪ್ರದೇಶದಲ್ಲಿ ಸಂಘದ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸುವ ಜೊತೆಗೆ ಬಲಪಡಿಸಬೇಕು. ಅಲ್ಲದೇ ಮತಾಂತರ, ಲವ್ ಜಿಹಾದ್ ವಿಚಾರಗಳ ಮೇಲೆ ಗಮನ ಕೇಂದ್ರೀಕರಸಬೇಕು ಎಂದರು.
ಸಂಘದ ಪದಾಧಿಕಾರಿಗಳು ತಮ್ಮದೇ ಆದ ಕೆಲಸ ನಿರ್ವಹಣೆ ಜೊತೆಗೆ ರಾಷ್ಟ್ರ ನಿರ್ಮಾಣಕ್ಕೆ ಬದ್ಧರಾಗಿರುವ ವಿವಿಧ ವರ್ಗಗಳ ಜನರನ್ನು ತಲುಪಲು ಭಾಗವತ್ ಅವರು ಆದ್ಯತೆ ನೀಡಿದ್ದಾರೆ ಎಂದು ಆರ್‌ಎಸ್‌ಎಸ್ ಪದಾಧಿಕಾರಿಗಳು ತಿಳಿಸಿದರು.

ಸಮಾಜದಲ್ಲಿ ವಿವಿಧ ಸಕಾರಾತ್ಮಕ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು. ಈ ಅವಳಿ ಸಮಸ್ಯೆಗಳ ನಿಗ್ರಹ ವಿರುದ್ಧದ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು RSS ಮುಖ್ಯಸ್ಥರು ಹೇಳಿದರು .
ಯುವ ಪೀಳಿಗೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಗಳು ಹಾಗೂ ಮೌಲ್ಯಗಳನ್ನು ಪಸರಿಸುವಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಮೋಹನ್ ಭಾಗವತ ಅವರು ಕರೆ ನೀಡಿದರು. ಸಭೆಯಲ್ಲಿ ವಿವಿಧ ಸಾಮಾಜಿಕ ಮತ್ತು ವೃತ್ತಿಪರ ಗುಂಪುಗಳಿಗೆ 'ಶಾಖಾ'ಗಳನ್ನು ಆಯೋಜನೆ ಮಾಡಬೆಕು ಎಂಬುದರ ಕುರಿತು ನೀರ್ಣಯ ಕೈಗೊಳ್ಳಲಾಯಿತು.












Click it and Unblock the Notifications