ರಾಮಮಂದಿರ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ: ಮೋಹನ್ ಭಾಗವತ್

Posted By:
Subscribe to Oneindia Kannada

ಪಲ್ಘರ್, ಏಪ್ರಿಲ್ 16: "ರಾಮಮಂದಿರವನ್ನು ಪುನಃ ಕಟ್ಟದಿದ್ದರೆ ಭಾರತೀಯ ಸಂಸ್ಕೃತಿಯ ಬೇರುಗಳನ್ನು ಕಡಿದಂತಾಗುತ್ತದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣ ನಮ್ಮ ಆಸೆಯಲ್ಲ, ಸಂಕಲ್ಪ: ಭಾಗವತ್

ಮಹಾರಾಷ್ಟ್ರದ ಪಲ್ಘರ್ ಎಂಬಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, "ಧ್ವಂಸಗೊಂಡ ದೇವಾಲಯವನ್ನು ಮತ್ತೆ ಕಟ್ಟುವುದು ಎಲ್ಲರ ಜವಾಬ್ದಾರಿ" ಎಂದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

"ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕೆಡವಿದ್ದು ದೇಶದ ಹೊರಗಿನಿಂದ ಬಂದ ಮುಸ್ಲಿಮರೇ ಹೊರತು ಭಾರತೀಯರಲ್ಲ. ಭಾರತೀಯರು ಎಂದಿಗೂ ಅಂಥ ಕೆಲಸ ಮಾಡುವುದಿಲ್ಲ" ಎಂದು ಅವರು ಹೇಳಿದರು.

Root of Indian culture will be cut if temple not rebuilt, says Bhagwat

"ಈಗ ಆ ಮಂದಿರವನ್ನು ಕಟ್ಟುವ ಸಮಯ ಬಂದಿದೆ. ದೇವಾಲಯ ಎಲ್ಲಿತ್ತೋ ಅಲ್ಲಿಯೇ ಅದನ್ನು ಕಟ್ಟಬೇಕು. ಅದಕ್ಕಾಗಿ ನಾವು ಹೋರಾಟಕ್ಕೂ ಸಿದ್ಧ" ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rashtriya Swayamsevak Sangh (RSS) chief Mohan Bhagwat said if Ram Mandir was not rebuilt, the root of the Indian culture will be severed. Speaking at a rally in Palghar district, the RSS chief said that the temple which was demolished by the Muslim based outside India, it is now the responsibility of the people to restore the demolished temple, where it originally stood.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ