• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಕ್ಸ್‌ಕ್ಲೂಸಿವ್: ರೋಹ್ಟಕ್ ಯುವತಿಯರ ಫೈಟ್ ಪೂರ್ವ ಯೋಜಿತವೇ?

By Kiran B Hegde
|

ರೋಹ್ಟಕ್, ಡಿ. 3: ಹರ್ಯಾಣದ ರೋಹ್ಟಕ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಲ್ಪಟ್ಟ ಯುವಕರ ಮೇಲೆ ಸಹೋದರಿಯರಿಬ್ಬರು ದಾಳಿ ನಡೆಸಿದ್ದು ಮಾಧ್ಯಮದ ಮೂಲಕ ಇಡೀ ದೇಶದಲ್ಲಿ ಸುದ್ದಿಯಾಗಿದೆ. ಸರ್ಕಾರ ಕೂಡ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಅಮಾನತುಗೊಳಿಸಿದ್ದು, ಸಹೋದರಿಯರಿಗೆ ಗಣರಾಜ್ಯೋತ್ಸವದಂದು ಶೌರ್ಯ ಪದಕ ನೀಡುವುದಾಗಿ ಘೋಷಿಸಿದೆ.

ಆದರೆ, ಪ್ರಕರಣ ಮತ್ತೊಂದು ಮಗ್ಗಲು ಹೊಂದಿದೆ. ಆ ಪ್ರಕಾರ ಇಲ್ಲಿ ತಪ್ಪಿತಸ್ಥರು ಯುವತಿಯರೇ ಹೊರತು ಯುವಕರಲ್ಲ. ವಿಷಯ ಏನೆಂದರೆ ಅದಮ್ಯ ಧೈರ್ಯ ಹಾಗೂ ಶೌರ್ಯ ತೋರಿದ್ದಾರೆಂದು ಪ್ರಶಸ್ತಿ ಘೋಷಿಸಲ್ಪಟ್ಟಿರುವ ಯುವತಿಯರೇ ಮೊದಲು ಹೊಡೆದಾಟ ಆರಂಭಿಸಿದ್ದು. ಜೊತೆಗೆ, ಇದೊಂದು ಲೈಂಗಿಕ ಕಿರುಕುಳದ ಪ್ರಕರಣವೇ ಅಲ್ಲ, ಬದಲಿಗೆ ಸೀಟಿಗಾಗಿ ನಡೆದ ಜಗಳ ಅಷ್ಟೇ..? [ಬೀದಿ ಕಾಮಣ್ಣನಿಗೆ ಥಳಿಸಿ ಪ್ರಶಸ್ತಿ ಪಡೆದ ಚೈತ್ರಾ]

ಯುವಕರ ಅಮಾಯಕರು ಅಂತಾರೆ ಸರಪಂಚ್: ಆರೋಪಿ ಹುಡುಗರು ರೋಹ್ಟಕ್ ಹತ್ತಿರದ ಅಸಾನ್ ಗ್ರಾಮದವರು. ಸಂಪೂರ್ಣ ಪ್ರಕರಣವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಹುಡುಗರು ಈ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಈ ಹಳ್ಳಿಯ ಸರಪಂಚ ರಾಜ್ ಸಿಂಗ್ 'ಒನ್ಇಂಡಿಯಾ'ಕ್ಕೆ ತಿಳಿಸಿದ್ದಾರೆ.

"ಇದೊಂದು ಸೀಟಿಗಾಗಿ ನಡೆದ ಜಗಳ ಅಷ್ಟೇ. ಆದರೆ, ಯುವತಿಯರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ತಾಣದಲ್ಲಿ ಬಿಟ್ಟು ಪ್ರಚಾರ ಪಡೆಯುವ ಉದ್ದೇಶದಿಂದ ಘಟನೆಯನ್ನು ಬಹುದೊಡ್ಡ ಹೊಡೆದಾಟವಾಗಿ ಮಾಡಿದರು" ಎಂದು ಸರಪಂಚ್ ಹೇಳುತ್ತಾರೆ. [ಗೂಸಾ ನೀಡಿದ ರೋಹ್ಟಕ್ ಸಿಸ್ಟರ್ಸ್ ಗೆ ಸನ್ಮಾನ]

"ಈ ಹುಡುಗರು ಸೈನ್ಯಕ್ಕೆ ಆಯ್ಕೆಯಾಗಿದ್ದರು. ಆದರೆ, ಈ ಪ್ರಕರಣದ ಕಾರಣದಿಂದ ಅವರನ್ನು ಸೈನ್ಯಕ್ಕೆ ಸೇರದಂತೆ ನಿರ್ಬಂಧಿಸಲಾಗಿದೆ. ಮಾಧ್ಯಮಗಳು ಇತರ ಪ್ರಯಾಣಿಕರೊಂದಿಗೆ ಮಾತನಾಡಿದರೆ ನಿಜವಾದ ವಿಷಯ ಹೊರಬರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಡೀ ಘಟನೆಯನ್ನು ಸರಪಂಚ್ ಮಾತಿನಲ್ಲಿಯೇ ಕೇಳಿ...

ಯುವತಿಯರು ಮೊದಲು ಮತ್ತೊಂದು ಬಸ್‌ನಲ್ಲಿ ಸಂಚರಿಸಬೇಕಾಗಿತ್ತು. ಆದರೆ, ಅದು ಕೆಟ್ಟುಹೋದ ಕಾರಣ ಮತ್ತೊಂದು ಬಸ್‌ ಏರಿದರು. ಈ ಬಸ್‌ನಲ್ಲಿ ಓರ್ವ ವೃದ್ಧ ಮಹಿಳೆ ಹಾಗೂ ಓರ್ವ ಯುವಕ (ಆರೋಪಿಗಳಲ್ಲಿ ಓರ್ವ) ಮೊದಲೇ ಒಂದು ಸೀಟ್‌ನಲ್ಲಿ ಕುಳಿತಿದ್ದರು. ಆದರೆ, ಈ ಸೀಟ್‌ಗಳು ಹಿಂದಿನ ಬಸ್‌ನಲ್ಲಿ ಯುವತಿಯರಿಗೆ ನೀಡಲ್ಪಟ್ಟಿದ್ದಾಗಿತ್ತು. [ಯುವತಿಯನ್ನು ಎಳೆದ ಕಾಮಾಂಧರ ಸೆರೆ]

ಆದ್ದರಿಂದ ಕುಳಿತಿದ್ದ ಯುವಕ ಸೀಟ್ ಬಿಟ್ಟು ಎದ್ದ. ಆದರೆ, ವೃದ್ಧ ಮಹಿಳೆಯನ್ನು ಸೀಟ್‌ನಿಂದ ಎಬ್ಬಿಸದಂತೆ ಕೋರಿದ. ಆದರೂ ಯುವತಿಯರು ವೃದ್ಧ ಮಹಿಳೆಯನ್ನು ಸೀಟ್‌ನಿಂದ ಎಬ್ಬಿಸಿದರು. ಆಗ ಅಸಮಾಧಾನಗೊಂಡ ಯುವಕ "ನಿಮಗೆ ಪಾಲಕರು ಸಂಸ್ಕಾರ ನೀಡಿಲ್ಲ" ಎಂದು ಟೀಕಿಸಿದ. (ಬಡೆ ಬುಡ್ಡೋ ಕಾ ಭಿ ಲಿಯಾಜ್ ನಹಿ ಕರ್ತಿ).

ಆಗ ಸಿಟ್ಟಿಗೆದ್ದ ಯುವತಿ ನಾವು ನಿನಗೆ ಬುದ್ಧಿ ಕಲಿಸುತ್ತೇವೆಂದು ಹೇಳಿದಳು. ಸಹೋದರಿಯರಲ್ಲಿ ಓರ್ವಳು ತನ್ನ ಮೊಬೈಲ್ ಅನ್ನು ಮತ್ತೋರ್ವ ಯುವತಿಗೆ ನೀಡಿದಳು. ಅಲ್ಲದೆ, ಈ ಘಟನೆಯನ್ನು ವಿಡಿಯೋ ಮಾಡಲು ಹೇಳಿದಳು. ನಂತರ ಯುವಕರನ್ನು ಬೆಲ್ಟ್‌ನಲ್ಲಿ ಹೊಡೆಯಲು ಆರಂಭಿಸಿದಳು.

ಬಸ್‌ನಲ್ಲಿದ್ದವರು ಸುಮ್ಮನುಳಿದದ್ದು ಏಕೆ?: ಒಂದು ವೇಳೆ ಯುವಕರು ತಪ್ಪಿತಸ್ಥರಾಗಿದ್ದರೆ ಬಸ್‌ನಲ್ಲಿ ಕುಳಿತಿದ್ದ ಯಾರೂ ಕೂಡ ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ, ಧರ್ಮದೇಟು ನೀಡುತ್ತಿದ್ದರು. ಆದರೆ, ಈ ಘಟನೆಯಲ್ಲಿ ಅಲ್ಲಿದ್ದ ಪ್ರತಿಯೊಬ್ಬರೂ ಯುವಕರ ಮೇಲೆ ದಾಳಿ ನಡೆಸುತ್ತಿದ್ದ ಯುವತಿಯನ್ನು ತಡೆಯಲು ಮಾತ್ರ ಯತ್ನಿಸಿದ್ದಾರೆ. [ಶಿಕ್ಷಕಿಯಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ]

ಈ ಘಟನೆ ಲೈಂಗಿಕ ಕಿರುಕುಳದ ಆರೋಪ ಪಡೆದ ನಂತರ ಕುಲದೀಪ್, ಮೋಹಿತ್ ಮತ್ತು ದೀಪಕ್ ಬಂಧನಕ್ಕೊಳಗಾದರು. ಅವರು ಯಾವುದೇ ತಪ್ಪು ಮಾಡಿರದಿದ್ದರೂ ಡಿಸೆಂಬರ್ 6ರ ವರೆಗೆ ಬಂಧನಕ್ಕೆ ಒಪ್ಪಿಸಲಾಗಿದೆ.

ಸೋನಿಪತ್‌ನಲ್ಲಿನ ಥಾನಾ ಖುರ್ದ್‌ನ ನಿವಾಸಿಗಳಾದ ಈ ಸಹೋದರಿಯರಿಗೆ ದೇಶದಾದ್ಯಂತ ಬೆಂಬಲ, ಹೊಗಳಿಕೆ ಸಿಗುತ್ತಿದೆ. ಆದರೆ, ಪ್ರಕರಣದ ಇನ್ನೊಂದು ಮಗ್ಗಲು ಯುವಕರು ಹಾಗೂ ಶೂರರೆಂದು ಹೊಗಳಿಸಿಕೊಂಡ ಯುವತಿಯರ ಕುರಿತು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two sisters in Rohtak who took on three alleged molesters on board a moving Haryana Roadways bus, has another version. This says that it was the girls who were at the wrong side, not the boys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more