ಡಿಸ್ಕವರಿ ಚಾನಲ್ ನಲ್ಲಿ ನರಭಕ್ಷಕ ಮೀನುಗಳ ನೋಡಿರಿ!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 12: ಮೂವತ್ತು ವರ್ಷಗಳಿಂದ ಆ ವ್ಯಕ್ತಿಯು ಹಾಕುತ್ತಿರುವ ಶ್ರಮವನ್ನು ಶ್ಲಾಘಿಸಲೇಬೇಕು. ಈ ಬಾರಿ ಅಂಥವನ್ನು ಕಣ್ಣಾರೆ ಕಾಣಲು ಮತ್ತೊಂದು ಅವಕಾಶ ಸಿಕ್ಕಿದೆ. ಜೀವಶಾಸ್ತ್ರಜ್ಞ ಜೆರೇಮಿ ವೇಡ್ ನೀರಿನಾಳದಲ್ಲಿ ವಾಸಿಸುವ ನರಭಕ್ಷಕಗಳನ್ನು ಹುಡುಕಿದ್ದಾರೆ. ಜಗತ್ತಿನ ವಿವಿಧ ಭಾಗಗಳ ವಾಸಯೋಗ್ಯವಲ್ಲದ ಸರೋವರಗಳಲ್ಲಿರುವ ವಿಶಿಷ್ಟ ಜೀವಿಗಳನ್ನು ಪತ್ತೆ ಮಾಡಿದ್ದಾರೆ.

ಮನುಷ್ಯರ ಗಾತ್ರದ ಪಿರಾನ್ಹಾ, ವಿದ್ಯುತ್ ಹರಿಬಿಡುವ ಮೀನು, ಒಂಬತ್ತು ಅಡಿ ಉದ್ದದ ಶಾರ್ಕ್ ಗಳು..ಇವೆಲ್ಲವನ್ನೂ ನಿಮ್ಮ ಮನೆಯಲ್ಲಿ ಕೂತು ನೋಡಬಹುದು. ಜೆರೆಮಿ ಅವರು ಡಿಸ್ಕವರಿ ಚಾನೆಲ್ ಪ್ರೇಕ್ಷಕರಿಗಾಗಿಯೇ ನೀರಿನ ಮೂಲಗಳ ಆಳದಲ್ಲಿ ವಾಸಿಸುವ ವಿಶಿಷ್ಟ ಜೀವಿಗಳನ್ನು ಅನ್ವೇಷಿಸುತ್ತಿದ್ದಾರೆ.

River Monsters December series in Discovery channel

ಡಿಸೆಂಬರ್ 5ರಿಂದ ಆರಂಭವಾಗಿರುವ ರಿವರ್ ಮಾನ್ ಸ್ಟರ್ಸ್ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8 ಗಂಟೆಗೆ ಇಂಥ ಅಪರೂಪದ ಅನ್ವೇಷಣೆ ಪ್ರಸಾರವಾಗುತ್ತದೆ. ಜೆರೆಮಿ ಆಗ್ನೇಯ ಇಂಗ್ಲೆಂಡಿನಲ್ಲಿ ಬೆಳೆದವರು. ಜಗತ್ತಿನ ವಿವಿಧ ಭಾಗಗಳಲ್ಲಿರುವ ನದಿಗಳಲ್ಲಿ ಇರುವ ಜೀವಿಗಳನ್ನು ಅನ್ವೇಷಿಸುವುದಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ವಿಶೇಷಾಗಿ ಕಾಂಗೋ ಮತ್ತು ಅಮೆಜಾನಿನ ಮಳೆಕಾಡುಗಳು ಅವರ ಕಾರ್ಯಕ್ಷೇತ್ರ.

River Monsters December series in Discovery channel

ಈ ಡಿಸೆಂಬರ್ ನಲ್ಲಿ ಪ್ರಸಾರವಾಗುತ್ತಿರುವ ರಿವರ್ ಮಾನ್ ಸ್ಟರ್ಸ್ ಕಾರ್ಯಕ್ರಮದಲ್ಲಿ ಗೂಂಚ್ ಮತ್ತು ಮಾಶೀರ್ ಹುಡುಕಾಡುತ್ತಾ ಭಾರತಕ್ಕೆ ಬರಲಿದ್ದಾರೆ ಜೆರೆಮಿ. ಅಲ್ಲದೆ ಫ್ಲೈ ಫಿಶಿಂಗ್ ಅನ್ನು ಪ್ರಯತ್ನಿಸುವರು. ಸಾಗರ ಸರ್ಪವನ್ನು ಹುಡುಕಿಕೊಂಡು ಹೋಗಲಿದ್ದಾರೆ. ಲಾಚ್ ನೆಸ್ ಪರಿಚಯಿಸಲಿದ್ದಾರೆ.

River Monsters December series in Discovery channel

ಹಂತಕ ಮೊಸಳೆಗಳು, ನೀರಾನೆಗಳ ಜೊತೆಗೆ ಎಂಪುಟಾ ನೈಲ್ ಪರ್ಚ್ ಎಂಬ ದೈತ್ಯ ಮೀನನ್ನು ಹಿಡಿಯುವುದಕ್ಕೆ ಸಾಗರದಾಳಕ್ಕೆ ಜಿಗಿಯಲಿದ್ದಾರೆ. ಪಪುವಾ ನ್ಯೂ ಗಿನಿಗೆ ಹೋಗಲಿದ್ದು, ಅಲ್ಲಿನ ಮಾಂಸ ಭಕ್ಷಕ ಪಕು ಮೀನನ್ನು ಪರಿಚಯಿಸಲಿದ್ದಾರೆ. ಈ ಮೀನು ಎಷ್ಟು ಅಪಾಯಕಾರಿ, ಹಾಗೂ ಇದು ಮನುಷ್ಯ ದೇಹದ ರುಚಿಯನ್ನು ಕಂಡಿದೆಯೇ ಎಂಬುದನ್ನು ಪರೀಕ್ಷಿಸುವರು. ಕಾಂಗೋ ನದಿಯಲ್ಲಿ ಮಕ್ಕಳನ್ನು ಕೊಂದ ಮೀನನ್ನು ಜೆರೆಮಿ ಸೆರೆಹಿಡಿಯುವರೇ ಕಾದುನೋಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
River Monsters December series by Jeremy Wade in Discovery channel started. It is a dare attempt by Wade.
Please Wait while comments are loading...