ಸಾವಿಗೆ ಪ್ರತೀಕಾರ, ಛತ್ತೀಸ್ ಗಢದಲ್ಲಿ 16 ನಕ್ಸಲರ ಹತ್ಯೆ

Subscribe to Oneindia Kannada

ಛತ್ತೀಸ್ ಗಢ, ಮೇ 17: 16 ನಕ್ಸಲರನ್ನು ಹತ್ಯೆಗೈದಿರುವುದಾಗಿ ಛತ್ತೀಸ್ ಗಢ ಪೊಲೀಸರು ಹೇಳಿದ್ದಾರೆ. ರಾಜ್ಯದ ನಕ್ಸಲ್ ನಿಗ್ರಹ ಪಡೆಯ ಮುಖ್ಯಸ್ಥ ಡಿಎಂ ಅವಸ್ಥಿ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಫ್'ಪಿಗೆ ಈ ಮಾಹಿತಿ ನೀಡಿದ್ದಾರೆ.

ಕೆಲವು ವಾರಗಳ ಹಿಂದೆ ಇದೇ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ 24 ಸಿಆರ್'ಪಿಎಫ್ ಜವಾನರನ್ನು ನಕ್ಸಲರು ಕೊಂದಿದ್ದರು.[ನಕ್ಸಲ್ ಬಗ್ಗುಬಡಿಯಲು ಅತ್ಯಾಧುನಿಕ ತಂತ್ರಜ್ಞಾನ, ಅತ್ಯುತ್ತಮ ಗೂಢಚರ್ಯೆ]

ಮಂಗಳವಾರ ಪೊಲೀಸರು ನಕ್ಸಲರ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 16 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ.['ನಮ್ಮ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಕ್ಕೆ, ನಿಮ್ಮ ಸೈನಿಕರನ್ನು ಕೊಂದ್ವಿ']

ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರಕಾರ ಭರವಸೆ ನೀಡಿತ್ತು. ಇದಾದ ಬೆನ್ನಿಗೆ ಈ ಸುದ್ದಿ ಬಂದಿದೆ.

Revenge: Chhattisgarh Police killed 16 Maoists

ಇನ್ನು ವಾಂಟೆಡ್ ನಕ್ಸಲ್ ನಾಯಕನ್ನೂ ಇದೇ ಸಂದರ್ಭದಲ್ಲಿ ಗಡಿ ಭದ್ರತಾ ಪಡೆ ಸೈನಿಕರು ಬಂಧಿಸಿದ್ದಾರೆ. ಇಲ್ಲಿನ ಕನ್ಕೇರ್ ಪ್ರದೇಶದಲ್ಲಿ ಈ ಬಂಧನ ನಡೆಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After the horrific naxal attack in Sukma, the security forces take their revenge. Chhattisgarh Police say they have killed 16 Maoist rebels in the Bijapur district.
Please Wait while comments are loading...