ಶಾರೂಖ್ ಚಿತ್ರ ನೋಡಿ ಪ್ರೇಕ್ಷಕ ಸುಷ್ಮಾಜಿಗೆ ಟ್ವೀಟ್ ಮಾಡಿದ್ದು ಹೀಗೆ!

Posted By:
Subscribe to Oneindia Kannada

ನವದೆಹಲಿ, ಆ 8: ತಮ್ಮ ಕಾರ್ಯಶೈಲಿ ಮತ್ತು ವಿದೇಶದಲ್ಲಿರುವ ಭಾರತೀಯರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂಧಿಸುವಲ್ಲಿ ಹೆಸರುವಾಸಿಯಾಗಿರುವ ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಸಿನಿಮಾ ನೋಡಿದ ಪ್ರೇಕ್ಷಕನೊಬ್ಬ ಟ್ವೀಟ್ ಮಾಡಿದ್ದು ಈಗ ಸುದ್ದಿಯಾಗಿದೆ.

ಪುಣೆಯ ಕ್ಸಿಯಾನ್ ಚಿತ್ರಮಂದಿರದಲ್ಲಿ ಶಾರೂಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ 'ಜಬ್ ಹ್ಯಾರಿ ಮೆಟ್ ಸೇಜಾಲ್' ಚಿತ್ರವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕನೊಬ್ಬ 'ಸುಷ್ಮಾ ಮೇಡಂ ನನ್ನನ್ನು ಕಾಪಾಡಿ' ಎಂದು ಟ್ವೀಟ್ ಮಾಡಿದ್ದಾನೆ. ಈ ಟ್ವೀಟ್ ಸುಮಾರು 1900 ರಿಟ್ವೀಟ್ ಆಗಿದೆ.

Rescue Me, Man Watching Shah Rukh Khan movie Tweets Sushma Swaraj

ನಿಮ್ಮನ್ನು ದೇವತೆಯೆಂದು ಕರೆಯಲೇ ಎಂದು ಸುಷ್ಮಾರನ್ನು ಕೇಳಿದ್ದು ಯಾರು

ವಿಶಾಲ್ ಸೂರ್ಯವಂಶಿ ಎನ್ನುವ ವ್ಯಕ್ತಿ ಪುಣೆಯ ಹಂಜೇವಾಡಿಯ ಮಲ್ಟಿಪ್ಲೆಕ್ಸ್ ನಲ್ಲಿ ಶಾರೂಖ್ ಖಾನ್ ಚಿತ್ರವನ್ನು ವೀಕ್ಷಿಸುತ್ತಿದ್ದ. ಚಿತ್ರ ವೀಕ್ಷಿಸುತ್ತಾ ವಿಶಾಲ್, ಸುಷ್ಮಾ ಮೇಡಂ, ಜಬ್ ಹ್ಯಾರಿ ಮೆಟ್ ಸೇಗಲ್ ಚಿತ್ರ ನೋಡುತ್ತಿದ್ದೇನೆ. ದಯವಿಟ್ಟು ಆದಷ್ಟು ಬೇಗ ನನ್ನನ್ನು ಇಲ್ಲಿಂದ ರಕ್ಷಿಸಿ' ಎಂದು ಟ್ವೀಟ್ ಮಾಡಿದ್ದಾನೆ. ಸುಷ್ಮಾ ಸ್ವರಾಜಿಗೆ ಸುಮಾರು ಒಂಬತ್ತು ಮಿಲಿಯನ್ ಗಿಂತಲೂ ಅಧಿಕ ಫಾಲೋವರ್ಸ್ ಇದ್ದಾರೆ.

ಸಾಮಾನ್ಯವಾಗಿ ವೀಸಾ, ವಿದೇಶದಲ್ಲಿರುವ ಭಾರತೀಯರ ಸಮಸ್ಯೆ, ಮೆಡಿಕಲ್ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಟ್ವೀಟಿಗೆ ಪ್ರತಿಕ್ರಿಯಿಸುವ ಸುಷ್ಮಾ ಸ್ವರಾಜ್, ವಿಶಾಲ್ ಸೂರ್ಯವಂಶಿಯ ಟ್ವೀಟಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ. ಹಾಗಾಗಿ, ಚಿತ್ರತಂಡ ಮತ್ತು ಬಾಲಿವುಡ್ ಬಾದಶಾ ನಿಟ್ಟುಸಿರು ಬಿಡುವಂತಾಗಿದೆ.

Rescue Me, Man Watching Shah Rukh Khan movie Tweets Sushma Swaraj
wish you our pm pak women tweets to sushma swaraj

ಶಾರೂಖ್ ಖಾನ್ ಹೋಂ ಬ್ಯಾನರಿನಲ್ಲಿ ಮೂಡಿಬಂದ ಜಬ್ ಹ್ಯಾರಿ ಮೆಟ್ ಸೇಗಲ್ ಚಿತ್ರವನ್ನು ಇಮ್ತಿಯಾಜ್ ಆಲಿ ನಿರ್ದೇಶಿಸಿದ್ದರು. ಶಾರೂಖ್, ಅನುಷ್ಕಾ ಶರ್ಮಾ, ಸಯಾನಿ ಗುಪ್ತಾ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ. ಶಾರೂಖ್ ವೃತ್ತಿ ಜೀವನದಲ್ಲಿ ಅಪರೂಪಕ್ಕೆ ಎನ್ನುವಂತೆ ಚಿತ್ರ ಬಾಕ್ಸಾಫೀಸಿನಲ್ಲಿ ನೆಲಕಚ್ಚಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rescue Me, Man Watching Shah Rukh Khan, Anushka Sharma in lead role movie 'Jab Harry Met Sejal' Tweets External Affairs Minsiter Sushma Swaraj.
Please Wait while comments are loading...