• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣರಾಜ್ಯೋತ್ಸವ 2021; ಮೆರವಣಿಗೆ ಲೈವ್ ವೀಕ್ಷಣೆಗೆ ರಕ್ಷಣಾ ಸಚಿವಾಲಯದಿಂದ ಆ್ಯಪ್

|

ನವದೆಹಲಿ, ಜನವರಿ 25: ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಗಣರಾಜ್ಯೋತ್ಸವ ಆಚರಣೆ ಮೇಲೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಮೆರವಣಿಗೆ ವೀಕ್ಷಿಸುವ ಜನರ ಸಂಖ್ಯೆಯನ್ನೂ ತಗ್ಗಿಸಲಾಗಿದೆ. ಪ್ರತಿ ಬಾರಿ ಸುಮಾರು ಒಂದೂವರೆ ಲಕ್ಷ ಜನರು ಮೆರವಣಿಗೆ ನೋಡಲು ಆಗಮಿಸುತ್ತಿದ್ದು, ಈ ಬಾರಿ 25 ಸಾವಿರ ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ಹಲವು ಕಾರಣಗಳಿಂದಾಗಿ ಈ ಬಾರಿ 72ನೇ ಗಣರಾಜ್ಯೋತ್ಸವ ಆಚರಣೆ ಭಿನ್ನ ಎನಿಸಿಕೊಳ್ಳುತ್ತಿದೆ. ಜನರ ಅನುಕೂಲಕ್ಕೆಂದು, ಈ ಬಾರಿ ಮೆರವಣಿಗೆಯ ಲೈವ್ ಸ್ಟ್ರೀಮಿಂಗ್ ಗೆ ರಕ್ಷಣಾ ಸಚಿವಾಲಯ ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಈ ಮೂಲಕ ಜನರು ಪಥಸಂಚಲನ, ಧ್ವಜಾರೋಹಣ, ಸಾಕ್ಷ್ಯಚಿತ್ರ, ಮೆರವಣಿಗೆಯನ್ನು ಲೈವ್ ನೋಡಬಹುದಾಗಿದೆ. Republic Day Parade 2021 ಅಥವಾ RDP 2021 ಎಂಬ ಹೆಸರಿನಲ್ಲಿ ಆಪ್ ಇರಲಿದ್ದು, ಆಂಡ್ರಾಯ್ಡ್ ಪ್ಲೇ ಸ್ಟೋರ್ ಹಾಗು ಆಪಲ್ ಸ್ಟೋರ್ ಎರಡರಲ್ಲಿಯೂ ಲಭ್ಯವಿದೆ. ಮೊಬೈಲ್ ಆಪ್ ಗೆ ಈ ಲಿಂಕ್ ಬಳಸಿ...

ಗಣರಾಜ್ಯೋತ್ಸವ 2021: ಯಾವ್ಯಾವ ಕಾರಣಕ್ಕೆ ಈ ಬಾರಿ ಗಣರಾಜ್ಯೋತ್ಸವ ಭಿನ್ನ ಎನಿಸಿಕೊಳ್ಳುತ್ತಿದೆ?ಗಣರಾಜ್ಯೋತ್ಸವ 2021: ಯಾವ್ಯಾವ ಕಾರಣಕ್ಕೆ ಈ ಬಾರಿ ಗಣರಾಜ್ಯೋತ್ಸವ ಭಿನ್ನ ಎನಿಸಿಕೊಳ್ಳುತ್ತಿದೆ?

ಆಂಡ್ರಾಯ್ಡ್: https://play.google.com/store/apps/details?id=com.gov.mod.rdpindia
ಐಒಎಸ್ : https://apps.apple.com/in/app/id1449946172

ಈ ಕೊಂಡಿಗಳ ಮೂಲಕ ಲೈವ್ ವೀಕ್ಷಣೆ ಮಾಡಬಹುದಾಗಿದೆ. ಇದರೊಂದಿಗೆ ಈ ಆಪ್ ಮೂಲಕ ದೆಹಲಿಯಲ್ಲಿ ರೂಟ್ ಮ್ಯಾಪ್ ಹಾಗೂ ಪಾರ್ಕಿಂಗ್ ಮಾಹಿತಿಯನ್ನೂ ಪಡೆಯಬಹುದಾಗಿದೆ. ದೆಹಲಿ ಟ್ರಾಫಿಕ್ ಪೊಲೀಸರು ಹಾಗೂ ದೆಹಲಿ ಮೆಟ್ರೊ ರೈಲು ಕಾರ್ಪೊರೇಷನ್ ಜನರಿಗೆ ಜನವರಿ 26ರಂದು ಮಾರ್ಗಗಳ ಸಲಹೆಯನ್ನು ಈಗಾಗಲೇ ನೀಡಿದ್ದಾರೆ.

ಗಣರಾಜ್ಯೋತ್ಸವ ಮೆರವಣಿಗೆ ನಂತರವೇ ರೈತರ ಟ್ರ್ಯಾಕ್ಟರ್ ಜಾಥಾ ಕೂಡ ನಡೆಯಲಿದೆ. ಮೂರು ಮಾರ್ಗಗಳಲ್ಲಿ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಲಿದ್ದಾರೆ ಎಂದು ವಿಶೇಷ ಪೊಲೀಸ್ ಆಯುಕ್ತ ದೀಪೇಂದ್ರ ಪಾಥಕ್ ತಿಳಿಸಿದ್ದಾರೆ.

English summary
Ministry of Defence has launched an app for 72nd republic day celebration. Here is detail...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X