• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿಯ ವಿದೇಶ ವ್ಯಾಮೋಹದಿಂದ ಭಾರತದಲ್ಲಿ ಲಸಿಕೆಗೆ ಅಭಾವ: ಶಶಿ ತರೂರ್

|

ನವದೆಹಲಿ, ಏಪ್ರಿಲ್ 10: ಭಾರತ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಲಸಿಕೆಗೆ ಈಗ ಎಲ್ಲಿಲ್ಲದ ಬೇಡಿಕೆ. ಹಲವು ದೇಶಗಳಿಗೆ ಭಾರತ ಈ ಲಸಿಕೆಯನ್ನು ಕಳುಹಿಸಿಕೊಟ್ಟಿದೆ. ಇದರಿಂದ, ಭಾರತದಲ್ಲಿ ಲಸಿಕೆಗೆ ಅಭಾವ ಎದುರಾಗಿದೆಯೇ?

ಕಾಂಗ್ರೆಸ್ ಮುಖಂಡ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಮಾಡಿರುವ ಟ್ವೀಟ್ ಪ್ರಕಾರ, ವಿದೇಶಕ್ಕೆ ಈ ಲಸಿಕೆಯನ್ನು ಕಳುಹಿಸುತ್ತಿರುವುದರಿಂದ, ದೇಶದ ಹಲವು ನಗರಗಳಲ್ಲಿ, ಈ ಲಸಿಕೆಯ ಬರ ಉಂಟಾಗಿದೆ.

ಇದೊಂದು ಸಹಾಯ ಮಾಡಿ, ಜೀವನ ಪರ್ಯಂತ ನಿಮ್ಮನ್ನು ಮರೆಯುವುದಿಲ್ಲ: ಭಾರತಕ್ಕೆ ಪಾಕ್ ಕ್ರಿಕೆಟಿಗನ ಕೋರಿಕೆ

"ಕೊರೊನಾ ವೈರಸ್ ಚಿಕಿತ್ಸೆಗೆ ಬಳಸಲಾಗುವ ಹೈಡ್ರೋಕ್ಸಿ ಲಸಿಕೆ ಸಮಯಕ್ಕೆ ಸರಿಯಾಗಿ ಲಭ್ಯವಾಗದ ಹಿನ್ನಲೆಯಲ್ಲಿ ರಾಜಸ್ಥಾನ ಸರಕಾರ, ತನ್ನಲ್ಲಿದ್ದ 300 ಎಂ.ಜಿ ಮಾತ್ರೆಯನ್ನು ಹಿಂದಕ್ಕೆ ಕಳುಹಿಸಿತು" ಎನ್ನುವ ಮಾಧ್ಯಮವೊಂದರ ಲೇಖನವನ್ನು ಉಲ್ಲೇಖಿಸಿ ಶಶಿ ತರೂರ್ ಈ ಟ್ವೀಟ್ ಅನ್ನು ಮಾಡಿದ್ದಾರೆ.

ಇಸ್ರೇಲ್ ಪ್ರಧಾನಿ ನೆತನ್ಯಾಹು, ಮೋದಿ ಜೊತೆ ಕೈಕುಲುಕುತ್ತಿರುವ ಫೋಟೋ ಹಾಕಿ, ಭಾರತಕ್ಕೆ ಧನ್ಯವಾದ ಸಲ್ಲಿಸಿ (ಲಸಿಕೆ ನೀಡಿದ್ದಕ್ಕೆ) ಟ್ವೀಟ್ ಮಾಡಿದ್ದರು. ಅದನ್ನು ಶಶಿ ತರೂರ್ ಉಲ್ಲೇಖಿಸಿ, "ಭಾರತದಲ್ಲಿ ಹೈಡ್ರೋಕ್ಸಿ ಲಸಿಕೆಗೆ ಅಭಾವ ಉಂಟಾಗಿದೆ. 'ಭಾರತ ನನಗೆ ಮೊದಲು' ಎಂದು ಹೇಳಿಕೆ ನೀಡಿದ ವ್ಯಕ್ತಿಯ ಬಗ್ಗೆ ನಿಮಗೆ ತಿಳಿದಿದೆಯೇ ಎಂದು ತರೂರ್, ಮೋದಿಯ ಕಾಲೆಳೆದಿದ್ದಾರೆ.

ಗುಡ್ ಫ್ರೈಡೇ ದಿನ 'ಗುಡ್ ನ್ಯೂಸ್' ಹೇಳಿದ ಉಡುಪಿ ಜಿಲ್ಲಾಧಿಕಾರಿ

"ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆ ಜೈಪುರದಲ್ಲಿ ಎಲ್ಲೂ ಲಭ್ಯವಿಲ್ಲ. ಕೋವಿಡ್ ಸೋಂಕಿತರಿಗೆ ತುರ್ತಾಗಿ ಮಾತ್ರೆ ನೀಡಬೇಕೆಂದರೆ ರಾಜ್ಯ ಸರಕಾರ ಏನು ಮಾಡಬೇಕು. ದೇಶದಲ್ಲಿದ್ದ ಅಗಾಧ ಪ್ರಮಾಣದ ಸ್ಟಾಕ್ ಏನಾದವು" ಎಂದು ಟ್ವಿಟ್ಟರ್ ನಲ್ಲಿ ಒಬ್ಬರು ಪ್ರಶ್ನಿಸಿದ್ದಾರೆ.

"ಸಂಸದರ MPLADS ಫಂಡ್ ಅನ್ನು ನಿಲ್ಲಿಸಿದ್ದರೂ, 1,600ಕ್ಕು ಹೆಚ್ಚು ಪಿಪಿಇ ಕಿಟ್ ಮತ್ತು ಧರ್ಮಾಮೀಟರ್ ಅನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ" ಎಂದು ಶಶಿ ತರೂರ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

English summary
Reports Of Shortage Of Hydroxychloroquine Tablets, Congress MP Shashi Tharoor Tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X