• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತಂಕಕಾರಿ ವರದಿ: ಕಲ್ಲಿದ್ದಲು ಸುಡುವಿಕೆಯಿಂದ ಅಕಾಲಿಕ ಮರಣ ಪ್ರಮಾಣ ಹೆಚ್ಚಳ

|
Google Oneindia Kannada News

ನವದೆಹಲಿ, ನವೆಂಬರ್ 16:ಕಲ್ಲಿದ್ದಲು ಸುಡುವಿಕೆಯು ಕೇವಲ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಷ್ಟೇ ಅಲ್ಲದೆ ಅಕಾಲಿಕ ಮರಣಕ್ಕೂ ಕಾರಣವಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.

ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಲ್ಯಾನ್ಸೆಟ್ ಕೌಂಟ್ ಡೌನ್ ವರದಿಯಲ್ಲಿನ ಶಿಫಾರಸುಗಳ ಪ್ರಕಾರ, ಪ್ರಮುಖವಾಗಿ ವಿದ್ಯುತ್ ಸ್ಥಾವರುಗಳು, ಕೈಗಾರಿಕೆಗಳು ಮತ್ತು ಮನೆಗಳಲ್ಲಿನ ಕಲ್ಲಿದ್ದಲು ದಹನ ದೇಶದಲ್ಲಿ ಅಕಾಲಿಕ ಮರಣ ದರ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

Explained: ಭಾರತದಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಸುತ್ತಲಿನ ಪ್ರಮುಖ ಬೆಳವಣಿಗೆಗಳುExplained: ಭಾರತದಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಸುತ್ತಲಿನ ಪ್ರಮುಖ ಬೆಳವಣಿಗೆಗಳು

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಐಸಿಎಂಆರ್ ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಲ್ಯಾನ್ಸೆಟ್ ಕೌಂಟ್‌ಡೌನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.

ಹವಾಮಾನ ಬದಲಾವಣೆಯು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅದನ್ನು ಪರಿಹರಿಸಲು ಸಮಯೋಚಿತ ಮತ್ತು ದೃಢವಾದ ಪ್ರತಿಕ್ರಿಯೆಯ ಅಗತ್ಯವನ್ನು ವರದಿಯು ಎತ್ತಿ ತೋರಿಸುತ್ತದೆ ಎಂದು ಆರೋಗ್ಯ ಸಂಶೋಧನಾ ಮಂಡಳಿ ಅಂಗಸಂಸ್ಥೆ ತಿಳಿಸಿದೆ.

2021 ರ ಜಾಗತಿಕ ಲ್ಯಾನ್ಸೆಟ್ ಕೌಂಟ್‌ಡೌನ್ ವರದಿಯ ಡೇಟಾದಂತೆ 2015 ಕ್ಕೆ ಹೋಲಿಸಿದರೆ 2019 ರಲ್ಲಿ ಭಾರತದಲ್ಲಿ ಕಲ್ಲಿದ್ದಲು ಮೂಲದ PM2.5 ಗೆ ಸಂಬಂಧಿಸಿದ ಸಾವಿನ ಸಂಖ್ಯೆಯಲ್ಲಿ ಶೇಕಡಾ ಒಂಬತ್ತು ರಷ್ಟು ಹೆಚ್ಚಳವಾಗಿದೆ.

ಅಂತರರಾಷ್ಟ್ರೀಯ ಆರೋಗ್ಯ ನಿಯಂತ್ರಣ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ತುರ್ತು ಚೌಕಟ್ಟಿನ ಅನುಷ್ಠಾನವನ್ನು ಸಾಧಿಸುವಲ್ಲಿ ದೇಶವು ಉತ್ತಮ ಪ್ರಗತಿಯನ್ನು ತೋರಿಸಿದೆ. ಆದಾಗ್ಯೂ, ಇದು ಇನ್ನೂ ಮೂಲಸೌಕರ್ಯ, ಮಾನವ ಸಂಪನ್ಮೂಲಗಳು ಮತ್ತು ಪರೀಕ್ಷೆ ಮತ್ತು ಕಣ್ಗಾವಲು ವ್ಯವಸ್ಥೆಗಳಂತಹ ಸಂಬಂಧಿತ ಆರೋಗ್ಯ ವ್ಯವಸ್ಥೆಗಳ ಸಾಮರ್ಥ್ಯಗಳಲ್ಲಿ ಹೂಡಿಕೆ ಮಾಡಬೇಕಾಗಿದೆ.

ಇಂಧನದ ಮುಖ್ಯ ಶಕ್ತಿಯಾಗಿರುವ ಕಲ್ಲಿದ್ದಲನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕಾಗಿದ್ದು, ನವೀಕರಿಸಬಹುದಾದ ಮತ್ತು ಶುದ್ಧ ಮೂಲಗಳ ಮೇಲೆ ಹೆಚ್ಚು ಹೂಡಿಕೆ ಮಾಡಬೇಕಾಗಿದೆ. ಇದೀಗ ದೇಶದ ಹಲವೆಡೆ ಕಲ್ಲಿದ್ದಲು ಕೊರತೆ ಕಾಡುತ್ತಿದೆ.

ಅಲ್ಲದೆ, ದೇಶದಲ್ಲಿ ಋಣಾತ್ಮಕ ಆರೋಗ್ಯ ಫಲಿತಾಂಶಗಳಿಗೆ ವಾಯು ಮಾಲಿನ್ಯ ಪ್ರಮುಖ ನಿರ್ಣಾಯಕ ಎಂಬುದಾಗಿ ಗುರುತಿಸಲ್ಪಟ್ಟಿದೆ .

ಆದ್ದರಿಂದ ಅದರ ಉತ್ಪಾದನೆಯ ಮೂಲಗಳಾಗಿರುವ ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಸ್ಥಳಗಳು ಮತ್ತಿತರ ಕಡೆಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಂತ್ರಕ ಚೌಕಟ್ಟುಗಳನ್ನು ಸ್ಥಾಪಿಸುವ ತುರ್ತು ಅವಶ್ಯಕತೆಯಿದೆ ಎಂದು ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಲ್ಯಾನ್ಸೆಟ್ ಕೌಂಟ್ ಡೌನ್ ವರದಿಯಲ್ಲಿ ತಿಳಿಸಲಾಗಿದೆ.

ಈ ನಿಯಂತ್ರಕ ಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ. ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಆಗುತ್ತಿರುವ ಆರೋಗ್ಯದ ದುಷ್ಪರಿಣಾಮಗಳು ಈಗಾಗಲೇ ತಿಳಿದಿರಬಹುದು, ಆದರೆ ಅದರಿಂದ ಉಂಟಾಗುವ ಸಾವುಗಳ ಸಂಖ್ಯೆಯು ಆಘಾತಕಾರಿಯಾಗಿದೆ.

2020ರಲ್ಲಿ ಬೆಂಗಳೂರು ವೊಂದರಲ್ಲಿ 12 ಸಾವಿರ ಜನರು ಮೃತಪಟ್ಟಿದ್ದಾರೆ. (ಪಿಎಂ) 2.5 ಅಂದರೆ ಕಡಿಮೆ ವಾಯುಗುಣಮಟ್ಟದಿಂದಾಗಿ ಬೆಂಗಳೂರು ಒಂದರಲ್ಲಿಯೇ 12 ಸಾವಿರ ಜನರು ಸಾವನ್ನಪ್ಪಿದ್ದರು.

ದೆಹಲಿಯಲ್ಲಿ ಇದೇ ವರ್ಷ 54 ಸಾವಿರ ಜನರು ಮೃತಪಟ್ಟಿದ್ದರು. ಆಗ್ನೇಯ ಏಷ್ಯಾ ಗ್ರೀನ್ ಪೀಸ್ ನ ವಾಯುಗುಣಮಟ್ಟ ವಿಶ್ಲೇಷಣೆಯಲ್ಲಿ ಇದು ತಿಳಿದುಬಂದಿದೆ. ಐದು ದೊಡ್ಡ ನಗರಗಳಲ್ಲಿ 1 ಲಕ್ಷ 60 ಸಾವಿರ ಜನರ ಸಾವಿಗೆ ವಾಯು ಮಾಲಿನ್ಯ ಕಾರಣವಾಗಿದೆ.

2020ರಲ್ಲಿ ಮುಂಬೈಯಲ್ಲಿ 25 ಸಾವಿರ ಜನರ ಸಾವಿಗೆ ವಾಯು ಮಾಲಿನ್ಯ ಕಾರಣವಾಗಿದೆ. ಚೆನ್ನೈ ಮತ್ತು ಹೈದರಾಬಾದಿನಲ್ಲಿ 11 ಸಾವಿರ ಮಂದಿ ವಾಯುಮಾಲಿನ್ಯದಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಪ್ರಸ್ತುತ ನಗರದಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣದಿಂದ ಉಂಟಾಗುವ ಪಿಎಂ 2.5 ವಾಯುಮಾಲಿನ್ಯದಿಂದಲೇ ಅಧಿಕ ಸಂಖ್ಯೆಯ ಜನರು ಸಾವನ್ನಪ್ಪುತ್ತಿರುವುದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದರು.

English summary
The combustion of coal, mainly in power plants followed by industrial and household settings, has resulted in an increase in the premature mortality rate in India and it needs to phase down from coal as its main source of energy and invest more on renewable and cleaner sources, according to the policy recommendations in "The Lancet Countdown on Health and Climate Change" report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X